9 ರೂ.ಗೆ ಚೋಲೆ ಬಟೂರೆ ಮಾರಿ 100 ಕೋಟಿ ಸಾಮ್ರಾಜ್ಯ ಕಟ್ಟಿದ ದಿಲ್ಲಿ ಬಾಯ್ಸ್ :ಬೆಂಗಳೂರಿನ ಶ್ಯಾಮ್ ಜಿ ಚೋಲೆ ಬಟೂರೆ ಜರ್ನಿ ಇದು
Chole Bature Business: ಊರು ಬಿಟ್ಟು ಪರವೂರಿಗೆ ಹೋದವರಿಗೆ ಅಲ್ಲಿ ಮೊದಲು ಎದುರಾಗುವುದೇ ಆಹಾರ ಸಮಸ್ಯೆ. ಒಂದೆರಡು ದಿನ ಅಲ್ಲಿನ ಊಟ, ತಿಂಡಿ ಇಷ್ವವಾಗಬಹದು. ನಂತರ ನಮ್ಮದೇ ನೆಲದ ರುಚಿ ಹಿತ ಅನ್ನಿಸುತ್ತದೆ. ನಮಗೆ ಅನ್ನ ಸಾಂಬಾರ್, ಇಡ್ಲಿ, ದೋಸೆ ಹೇಗೆ ಪ್ರಿಯವೋ ಉತ್ತರ ಭಾರತೀಯರಿಗೆ ಪರಾಠ, ಚೋಲೆ ಬಟೂರೇ ಅಂದರೆ ಪಂಚ ಪ್ರಾಣ. ನಾವಿಲ್ಲಿ ಪೂರಿ ಪಲ್ಯ, ಪೂರಿ ಸಾಗು ಸಾಮಾನ್ಯವಾಗಿ ಮಾಡುತ್ತೇವೆ. ಆದರೆ ಚೋಲೆ ಬಟುರೇ ಸ್ವಲ್ಪ ಕಷ್ಟವೇ. ಹೊಟೇಲುಗಳಲ್ಲಿ ಚೋಲೆ ಬಟೂರೇ ಸಿಗುತ್ತದೆ ಇಲ್ಲ ಎಂದಲ್ಲ. ಆದರೆ ಅಲ್ಲಿನ ಅಥೆಂಟಿಕ್ ರುಚಿ ತರುವುದು ಸ್ವಲ್ಪ ಕಷ್ಟ. ಇದನ್ನು ಅರಿತುಕೊಂಡ ಮೂವರು ಗೆಳೆಯರು ಬೆಂಗಳೂರಿನಲ್ಲಿ ದೆಹಲಿಯ ಚೋಲೆ ಬಟೂರೇ ಬ್ಯುಸಿನೆಸ್ ಶುರು ಮಾಡಿದ್ದಾರೆ. ಊರು ಬಿಟ್ಟು ಕೆಲಸಕ್ಕಾಗಿ ಬೆಂಗಳೂರಿಗೆ ಬಂದವರಿಗೆ ಪಕ್ಕಾ ದೆಹಲಿ ಸ್ಟೈಲ್ ಚೋಲೆ ಬಟೂರೇ ಮಾಡಿ ಕೊಡುವುದಕ್ಕೆ ಶುರು ಮಾಡಿದ್ದಾರೆ.

ಬರೀ 9 ರೂ.ಗೆ ಒಂದು ಪ್ಲೇಟ್ ಚೋಲೆ ಬಟೂರೆ :
ಇಲ್ಲಿ ಒಂದು ಪ್ಲೇಟ್ ಚೋಲೆ ಬಟೂರೆಗೆ ಕೇವಲ 9 ರೂ. ಪ್ಲೇಟ್ ಗೆ 9 ರೂಪಾಯಿಯಂತೆ ಶುರುವಾದ ವ್ಯವಹಾರ ಇವತ್ತು 100 ಕೋಟಿ ಮೌಲ್ಯದ ದೊಡ್ಡ ಬ್ರಾಂಡ್ ಆಗಿ ನಿಂತಿದೆ. ಹೌದು, ಕರಣ್, ಚೇತನ್ ಮತ್ತು ನವಜ್ಯೋತಿ ಎಂಬ ಮೂವರು ಗೆಳೆಯರ ಬ್ಯುಸಿನೆಸ್ ಪಯಣ ಇದು. ಈ ಮೂವರು ತುಂಬಾ ವರ್ಷಗಳಿಂದ ಬೆಂಗಳೂರಿನಲ್ಲಿಯೇ ಇದ್ದಾರೆ. ಉತ್ತರ ಭಾರತದವರಿಗೆ ಮೊದಲು ಬೆಂಗಳೂರಿಗೆ ಬಂದಾಗ ಇಡ್ಲಿ, ದೋಸೆ, ಬೇರೆ ಬೇರೆ ರೀತಿಯ ಬಾತ್ ಇಷ್ಟವಾಗುವುದರಲ್ಲಿ ಆಶ್ಚರ್ಯ ಇಲ್ಲ. ಆದರೆ ನಂತರ ಮತ್ತದೇ ಪರೋಠಾ ಚೋಲೆ ಬೂಟೂರಾದ ಕಡೆ ಮನಸ್ಸು ವಾಲುತ್ತದೆ. ಇವರಿಗೆ ಆದದ್ದೂ ಇದೇ.
Chole Bature Business: ಪಕ್ಕಾ ದೆಹಲಿ ಸ್ಟೈಲ್ :
ಚೋಲೆ ಬಟೂರೆ ತಿನ್ನಬೇಕು. ಆದರೆ ಪಕ್ಕಾ ದೆಹಲಿ ಸ್ಟೈಲ್ ಚೋಲೆ ಬಟೂರೆ ಇಲ್ಲಿ ಸಿಗಬೇಕಲ್ಲ. ದೆಹಲಿ ಚೋಲೆ ಬಟೂರೇ ರುಚಿಯೇ ಬೇರೆ. ಚೋಲೆ ಮಸಾಲ ಅದರ ಮೇಲೆ ಬೇಯಿಸಿರುವ ಆಲೂಗಡ್ಡೆ, ಪಕ್ಕದಲ್ಲಿ ಉಪ್ಪು ಹುಳಿ ಖಾರ ಹದವಾಗಿ ಸೇರಿಸಿರುವ ಹಸಿ ಈರುಳ್ಳಿ ಮತ್ತು ಮೆಣಸಿನ ಕಾಯಿ, ಜೊತೆಗೆ ಹಸಿರು ಚಟ್ನಿ. ಇದೆಲ್ಲರ ಜೊತೆಗೆ ಬಟೂರೆ ತಿನ್ನುವ ಆನಂದವೇ ಬೇರೆ. ಇಲ್ಲಿ ಈ ರುಚಿ ಕಂಡುಕೊಳ್ಳುವುದು ನಿಜಕ್ಕೂ ಕಷ್ಟವೇ.
ಶ್ಯಾಮ್ ಜಿ ಚೋಲೆ ಬಟೂರೆ :
ಇದು ಬರೀ ಮೂವರ ಕತೆಯಲ್ಲ, ಕೆಲಸಕ್ಕಾಗಿ ಇಲ್ಲಿ ಬಂದು ನೆಲೆಸಿರುವ ಬಹಳಷ್ಟು ಉತ್ತರಭಾರತೀಯರ ಪಾಡು ಎನ್ನುವುದು ಅರ್ಥವಾಗುತ್ತದೆ. ಹಾಗಾಗಿ ನಾವೇ ದೆಹಲಿ (new delhi) ಸ್ಟೈಲ್ ಚೋಲೆ ಬಟೂರೆ ಶುರು ಮಾಡಿದರೆ ಹೇಗೆ ಎನ್ನುವ ಯೋಚನೆ ಬರುತ್ತದೆ. ಸುಮ್ಮನೆ ವ್ಯಾಪಾರ ಮಾಡುತ್ತೇವೆ ಅಂದುಕೊಂಡರೆ ಆಗುವುದಿಲ್ಲ, ಅದಕ್ಕೆ ರಿಸರ್ಚ್ ಬೇಕು. ಆಗಲೇ ವ್ಯಾಪಾರ ಕೈ ಹಿಡಯುವುದು. ಹಾಗಾಗಿ ಇವರು ದೆಹಲಿಗೆ ಹೋಗುತ್ತಾರೆ. ಅಲ್ಲಿ ಎಲ್ಲೆಲ್ಲಿ ಚೋಲೆ ಬಟೂರೆ ಸಿಗುತ್ತದೆಯೋ ಅಲ್ಲೆಲ್ಲಾ ಟ್ರೈ ಮಾಡುತ್ತಾರೆ. ಅವರ ರೆಸಿಪಿ ಕಂಡುಕೊಳ್ಳುತ್ತಾರೆ. ಅಲ್ಲಿನ ಅನುಭವಿ ಅಡುಗೆಭಟ್ಟರ ಜೊತೆ ಬೆಂಗಳೂರಿಗೆ ಬರುತ್ತಾರೆ. ಬೆಂಗಳೂರಿನಲ್ಲಿ ಚೋಲೆ ಬಟೂರೇ ಶಾಪ್ ಓಪನ್ ಆಗುತ್ತದೆ.ಅದುವೇ ಶ್ಯಾಮ್ ಜಿ ಚೋಲೆ ಬಟೂರೆ.
ಸಕ್ಸಸ್ ಆದ ಐಡಿಯಾ :
ಗ್ರಾಹಕರು ತಮ್ಮ ಅಂಗಡಿಗೆ ಬರುವಂತೆ ಮಾಡುವುದು ಹೇಗೆ ಎನ್ನುವ ಪ್ರಶ್ನೆಗೂ ದಾರಿ ಹುಡುಕಿಕೊಳ್ಳುತ್ತಾರೆ.ಯಾರು ತಮ್ಮ ಪರ್ಮನೆಂಟ್ ಗ್ರಾಹಕರಾಗಬಹುದು ಎನ್ನುವುದನ್ನು ಲೆಕ್ಕಾಚಾರ ಮಾಡ್ತಾರೆ. ಉತ್ತರ ಭಾರತದ ಐಟಿ ಕೆಲಸಗಾರರನ್ನು ಟಾರ್ಗೆಟ್ ಆಗಿ ಇಟ್ಟಕೊಳ್ಳುತ್ತಾರೆ. ಇನ್ನು ಬೆಂಗಳೂರಿಗರಿಗೂ ದೆಹಲಿ ರುಚಿಯ ಚೋಲೆ ಬಟೂರೇ ಹೊಸತೇ. ಹಾಗಾಗಿ ಹೊಸ ರುಚಿ ಅವರನ್ನೂ ಸೆಳೆಯುತ್ತದೆ ಎನ್ನುವ ನಂಬಿಕೆ ಇತ್ತು. ಇವರು ಇಲ್ಲಿ ಮಾಡಿರುವ ದೊಡ್ಡ ತಂತ್ರ ಎಂದರೆ ದುಡ್ಡು. 9 ರೂಪಾಯಿಗೆ ಚೋಲೆ ಬಟೂರೆ ಮಾರಾಟವಾಗ್ತದೆ. ಪಕ್ಕಾ ದೆಹಲಿ ಸ್ಟೈಲ್ ಜೊತೆಗೆ ಬರೀ 9 ರೂ. ಅಂಗಡಿ ಮುಂದೆ ಜನ ಕ್ಯೂ ನಿಲ್ಲುವುದಕ್ಕೆ ಶುರು ಮಾಡ್ತಾರೆ.
ದೆಹಲಿಯ ಸ್ಟ್ರೀಟ್ ಫುಡ್ :
ವ್ಯವಹಾರವು ಬೆಳೆಯುತ್ತಿದ್ದಂತೆ, ಚಾಟ್, ಸಿಹಿತಿಂಡಿ, ಲಸ್ಸಿ ಸೇರಿದ ಹಾಗೆ ನಾರ್ತ್ ಇಂಡಿಯನ್ ಊಟವನ್ನು ಕೂಡಾ ಶುರು ಮಾಡ್ತಾರೆ. ಇವತ್ತಿಗೆ ಇಲ್ಲಿ ಪ್ರತಿ ತಿಂಗಳು 50,000 ಕ್ಕೂ ಹೆಚ್ಚು ಬಟೂರೆ ಮಾರಾಟವಾಗ್ತದೆ. 30 ವರ್ಷಗಳಿಗೂ ಹೆಚ್ಚು ಕಾಲ ಅಲ್ಲಿ ವಾಸಿಸಿದ ನಂತರ, ದೆಹಲಿ ಸ್ಟ್ರೀಟ್ ಫುಡ್ (food) ಅನ್ನು ಇಲ್ಲಿಗೂ ಪರಿಚಯಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಅದರಲ್ಲಿ ಯಶಸ್ವಿ ಕೂಡಾ ಆಗ್ತಾರೆ. ವಾವ್ ಮೊಮೊದಿಂದ ಸ್ಫೂರ್ತಿ ಪಡೆದು ಶುರುವಾದ ಬ್ಯುಸಿನೆಸ್ ಈಗ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ.


Click it and Unblock the Notifications
