ಸಿಇಒ ಆಗ್ತಾರೆ ಅಂದ್ರೆ ಇನ್ಫೋಸಿಸ್‌ನ್ನೇ ಬಿಟ್ರು

ಶ್ರೀನಿವಾಸನ್ ಅವರ ಅಧಿಕಾರ ಅವಧಿ ಜೂ.10ಕ್ಕೆ ಕೊನೆಗೊಳ್ಳಲಿದೆ ಎಂದು ಇನ್ಫೋಸಿಸ್ ಪ್ರಕಟಿಸಿದೆ. ಈ ಮೂಲಕ ಇನ್ಫೋಸಿಸ್ ಗೆ ಹೊಸ ಉತ್ತರಾಧಿಕಾರಿ ಯಾರು ಎಂಬ ಕುತೂಹಲಕ್ಕೆ ತೆರೆ ಎಳೆದಿದೆ. 2015ರಲ್ಲಿ ಹಾಲಿ ಸಿಇಒ ಶಿಬುಲಾಲ್ ಅವರು ಹುದ್ದೆ ತೊರೆಯಲಿದ್ದಾರೆ. ಈಗಾಗಲೇ ಹೊಸ ಸಿಇಒಗಾಗಿ ಇನ್ಫೋಸಿಸ್ ಹುಡುಕಾಟ ನಡೆಸಿದ್ದು, ಶ್ರೀನಿವಾಸ್ ನಿರ್ಗಮನದಿಂದ ಹೊರಗಿವರು ಸಿಇಒ ಆಗುವ ಸಾಧ್ಯತೆ ಹೆಚ್ಚಿದೆ.
ಶ್ರೀನಿವಾಸ್ ಅಲ್ಲದೆ ಮತ್ತೊಬ್ಬ ಅಧ್ಯಕ್ಷ ಯುಬಿ ಪ್ರವೀಣ್ ರಾವ್ ಹೆಸರು ಕೂಡಾ ಸಿಇಒ ಸ್ಥಾನಕ್ಕೆ ಕೇಳಿ ಬಂದಿತ್ತು. ಆದರೆ, ಪ್ರಸಕ್ತ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಪ್ರವೀಣ್ ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಎಸ್ಎಪಿ ಎಜಿ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿದ್ದ ವಿಶಾಲ್ ಸಿಕ್ಕಾ ಹೆಸರು ಸಿಇಒ ಸ್ಥಾನಕ್ಕೆ ಬಲವಾಗಿ ಕೇಳಿ ಬರುತ್ತಿದೆ. ಕೆಲವು ಇನ್ಫೋಸಿಸ್ ಉದ್ಯೋಗಿಗಳು ಮಾಜಿ ಸಿಇಒ ನಂದನ್ ನಿಲೇಕಣಿ ಅವರನ್ನು ಮತ್ತೆ ಕಂಪನಿ ಸಾರಥ್ಯ ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.
ಜೂನ್ 2013ರಲ್ಲಿ ಎನ್ ಆರ್ ನಾರಾಯಣ ಮೂರ್ತಿ ಪುನರ್ ಆಗಮನದ ನಂತರ ಒಟ್ಟಾರೆ ಇದುವರೆವಿಗೂ 10ಕ್ಕೂ ಅಧಿಕ ಹಿರಿಯ ಅಧಿಕಾರಿಗಳು ಇನ್ಫೋಸಿಸ್ ತೊರೆದಿದ್ದಾರೆ.
* ಬಸಬ್ ಪ್ರಧಾನ್ : ಗ್ಲೋಬಲ್ ಸೇಲ್ಸ್ ಹಾಗೂ ಮಾರುಕಟ್ಟೆ
* ಸುಧೀರ್ ಚತುರ್ವೇದಿ: ಉಪಾಧ್ಯಕ್ಷ ಹಾಗೂ ಮುಖ್ಯಸ್ಥ(ಆರ್ಥಿಕ) ಅಮೆರಿಕ
* ಅಶೋಕ್ ವೆಮೂರಿ : ಜಾಗತಿಕ ಉತ್ಪಾದನಾ ಹಾಗೂ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ
* ಹೂಬರ್ಟೋ ಆಂಡ್ರಾಡೆ : ಮುಖ್ಯ ಮಾರುಕಟ್ಟೆ ಅಧಿಕಾರಿ ಹಾಗೂ ಉಪಾಧ್ಯಕ್ಷ
* ಪಾಲ್ ಗೊಟ್ಸೆಗೆನ್ : ಉಪಾಧ್ಯಕ್ಷ, ಮುಖ್ಯ ಮಾರುಕಟ್ಟೆ ಅಧಿಕಾರಿ
* ಸ್ಟೀಫನ್ ಪ್ರಾಟ್ : ಕಾರ್ಯಕಾರಿ ಸಮಿತಿ ಸದಸ್ಯ, ಉತ್ತರ ಅಮೆರಿಕ ವಿಭಾಗದ ಮುಖ್ಯಸ್ಥ
* ಸುಬ್ರಮಣ್ಯಂ ಗೋಪರಾಜು : ಹಿರಿಯ ಉಪಾಧ್ಯಕ್ಷ, ಇನ್ಫೋಸಿಸ್ ಲಾಬ್ಸ್ ಹಾಗೂ ಕಾರ್ಯಕಾರಿ ಕೌನ್ಸಿಲ್ ಸದಸ್ಯ
* ವಿ ಬಾಲಕೃಷ್ಣನ್ : ಸಮಿತಿ ಸದಸ್ಯ, ಬಿಪಿಒ(ಫಿನಾಕಲ್) ಮುಖ್ಯಸ್ಥ, ಲೋಡ್ ಸ್ಟೋನ್ ಮುಖ್ಯಸ್ಥ
* ಚಂದ್ರಶೇಖರ್ ಕಾಕಲ್ : ಹಿರಿಯ ಉಪಾಧ್ಯಕ್ಷ
* ಬಿಜಿ ಶ್ರೀನಿವಾಸ್ : ಅಧ್ಯಕ್ಷ












Click it and Unblock the Notifications