BSNL 18ನೇ ವಾರ್ಷಿಕೋತ್ಸವ, 18 ರುಗಳಿಗೆ ರೀಚಾರ್ಜ್!
ಬೆಂಗಳೂರು, ಸೆಪ್ಟೆಂಬರ್ 30: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ನಿಯಮಿತ(ಬಿಎಸ್ಎನ್ಎಲ್) ಅಕ್ಟೋಬರ್ 1,2018 ರಂದು ತನ್ನ 18ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದೆ. ಈ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಗ್ರಾಹಕರಿಗೆ 18ರು ಗಳ ವಿಶೇಷ ಟ್ಯಾರಿಫ್ ವೋಚರ್ ನೀಡುತ್ತಿದೆ. ಇದು ಭಾರತದೆಲ್ಲೆಡೆ ಲಭ್ಯವಾಗಲಿದೆ.
ಇದರ ಜೊತೆಗೆ ಬಿಎಸ್ಎನ್ಎಲ್ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಡೇಟಾ ಜೊತೆ ವಾಯ್ಸ್ ಕಾಲ್ ಸೌಲಭ್ಯ ಕೂಡ ಸಿಗಲಿದೆ.
ಬಿಎಸ್ಎನ್ಎಲ್ ಎಸ್ಟಿವಿ 18 ರು, ಎಸ್ಟಿವಿ 1,801 ರು, ಎಸ್ಟಿವಿ 1,201 ರು, ಎಸ್ಟಿವಿ 601 ಯೋಜನೆ ಹಾಗೂ 2,125 ರು ಯೋಜನೆ ಶುರು ಮಾಡಿದೆ.

18 ರೂಪಾಯಿ ಪ್ಲಾನ್ ಎರಡು ದಿನ ವ್ಯಾಲಿಡಿಟಿ ಹೊಂದಿರಲಿದೆ. ಶೇಕಡಾ 18ಕ್ಕಿಂತ ಹೆಚ್ಚು ಟಾಕ್ ಟೈಂ ಮತ್ತು ಡೇಟಾ ಲಾಭ ಸಿಗಲಿದೆ. ಅನಿಯಮಿತ ಕರೆ ಹಾಗೂ ಡೇಟಾವನ್ನು ಕೇವಲ 18 ರೂಪಾಯಿಗೆ ನೀಡ್ತಿರುವ ಮೊದಲ ಕಂಪನಿ ಬಿಎಸ್ಎನ್ಎಲ್ ಆಗಲಿದೆ.
ಈ ಮೂಲಕ ಜಿಯೋ ಸಂಸ್ಥೆಯ 19ರು ಯೋಜನೆಗೆ ಪೈಪೋಟಿ ನೀಡುತ್ತಿದೆ. ಬಿಎಸ್ಎನ್ಎಲ್ ನ ಹೊಸ ಯೋಜನೆ ಅಕ್ಟೋಬರ್ 01ರಿಂದ ಅಕ್ಟೋಬರ್ 18ರ ಅವಧಿಯಲ್ಲಿ ಲಭ್ಯವಾಗಲಿದೆ.
ಕಳೆದ ವಾರದಲ್ಲಿ ಬಿಎಸ್ಎನ್ಎಲ್ 299ರು ಗಳ ಪೋಸ್ಟ್ ಪೇಯ್ಡ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಲ್ಲಿ 31 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲ್, 100 ಎಸ್ಎಂಎಸ್ ಪ್ರತಿ ತಿಂಗಳಿಗೆ ಸಿಗಲಿದೆ.











Click it and Unblock the Notifications