• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಎಸ್ಎನ್ಎಲ್ ಗ್ರಾಹಕರಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಉಚಿತ

|

ನವದೆಹಲಿ, ಆಗಸ್ಟ್ 26: ಜಿಯೋ ಸಂಸ್ಥೆಯ ಬ್ರಾಡ್ ಬ್ಯಾಂಡ್ ಗೆ ಸ್ಪರ್ಧೆಯೊಡ್ಡಲು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಸಂತಸ ಸುದ್ದಿ ನೀಡಿದೆ. ಉಚಿತವಾಗಿ ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಗ್ರಾಹಕರು ಪಡೆಯಲಿದ್ದಾರೆ.

ಬಿಎಸ್ಎನ್ಎಲ್ ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಕೇವಲ 399 ರೂಪಾಯಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ಸಿಗಲಿದೆ. ಇದು ಹೊಸ ಹಾಗೂ ಹಾಲಿ ಬಳಕೆದಾರರಿಗೂ ಲಭ್ಯವಾಗಲಿದೆ.

   ಬಿಎಸ್ ಎನ್ ಎಲ್ ನಿಂದ ಮತ್ತೊಂದು ಆಫರ್ ಘೋಷಣೆ | Oneindia Kannada

   BSNL ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ನಿರ್ಧಾರವೇನು?

   ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಆರಂಭಿಕ ಬೆಲೆ 399 ರೂಪಾಯಿ. 745 ರು ಬೆಲೆಯ ಯೋಜನೆಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಭಾರತ್ ಫೈಬರ್ ಡೇಟಾ ಯೋಜನೆ ಜೊತೆಗೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಸೇರಿಸಲಾಗಿದೆ.

   ಗ್ರಾಹಕರು 499 ರು ಗಳ ಬ್ರಾಡ್ ಬ್ಯಾಂಡ್ ಸೌಲಭ್ಯ ಹೊಂದಿದ್ದರೆ, ಅಮೆಜಾನ್ ಪ್ರೈಂ ಸದಸ್ಯತ್ವದ ಜೊತೆ ಶೇಕಡಾ 15ರಷ್ಟು ಕ್ಯಾಶ್‌ ಬ್ಯಾಕ್ ಸಿಗಲಿದೆ. 499ರಿಂದ 900 ರೂಪಾಯಿ ಯೋಜನೆಯಲ್ಲಿ ಶೇಕಡಾ 20‌ ರಷ್ಟು ಕ್ಯಾಶ್‌ ಬ್ಯಾಕ್ ಹಾಗೂ 900 ರು ಮೇಲ್ಪಟ್ಟ ಪ್ಲಾನ್ ನಲ್ಲಿ ಶೇಕಡಾ 25ರಷ್ಟು ಕ್ಯಾಶ್‌ ಬ್ಯಾಕ್ ಸಿಗಲಿದೆ.

   ಸೆಪ್ಟೆಂಬರ್ 05ರಂದು ಜಿಯೋ ತನ್ನ ಗಿಗಾ ಫೈಬರ್ ನೆಟ್ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಹೊರ ತರಲಿದೆ. ಟಾಟಾಸ್ಕೈ 12 ತಿಂಗಳ ಅಧಿಕ ಬ್ರಾಡ್ ಬ್ಯಾಂಡ್ ಬಳಕೆ ಹಾಗೂ ಅನಿಯಮಿತ ಯೋಜನೆಗಳನ್ನು ಹೊರತರುತ್ತಿದೆ. ಏರ್ ಟೆಲ್ ವಿ ಫೈಬರ್ ಡೇಟಾ ಯೋಜನೆ ಮೂಲಕ 1,000 ಜಿಬಿ ಬೋನಸ್ ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. 1,599 ರು ಯೋಜನೆಯಲ್ಲಿ ಇದು ಸಿಗಲಿದೆ. ಇದಲ್ಲದೆ 500 ಜಿಬಿ ಬೋನಸ್ ಡೇಟಾ 1099 ರು ಯೋಜನೆಯಲ್ಲಿ ಹಾಗೂ 200ಜಿಬಿ ಡೇಟಾ 799 ರು ಯೋಜನೆಯಲ್ಲಿ ಸಿಗಲಿದೆ.

   BSNL ಮುಚ್ಚುವ ಸುದ್ದಿ: ಸಚಿವ ರವಿಶಂಕರ್ ಪ್ರಸಾದ್ ಸ್ಪಷ್ಟನೆ

   ಅಮೆಜಾನ್ ಪ್ರೈಂ ಮೂಲಕ ಟಿವಿ ಕಾರ್ಯಕ್ರಮ,‌ ಹಾಲಿವುಡ್, ಬಾಲಿವುಡ್ ಸಿನಿಮಾ, ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆ ಒಂದು ವರ್ಷದ ಅವಧಿಗೆ ಗ್ರಾಹಕರಿಗೆ ಸಿಗಲಿದೆ.

   English summary
   State-owned Bharat Sanchar Nigam Limited (BSNL) announced one-year Amazon Prime membership at no additional cost with its broadband annual plans.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X