ಬ್ರಿಗೇಡ್ ಸಮೂಹ ಗೆದ್ದಿದೆ ರಿಯಾಲಿಟಿ ಎಕ್ಸಲೆನ್ಸ್ ಪ್ರಶಸ್ತಿಗಳು
ಬೆಂಗಳೂರು, ಜ.17: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದೈತ್ಯ ಬ್ರಿಗೇಡ್ ಸಮೂಹವು 6ನೇ ರಿಯಾಲಿಟಿ ಪ್ಲಸ್ ಎಕ್ಸಲೆನ್ಸ್ ಅವಾರ್ಡ್ಸ್ 2014 ರಲ್ಲಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರ ಜೊತೆಗೆ ಇತ್ತೀಚಿಗೆ ನಡೆದ 3ನೇ ವಾರ್ಷಿಕ ಸಿಲಿಕಾನ್ ಇಂಡಿಯಾ ಬೆಂಗಳೂರು ರಿಯಲ್ ಎಸ್ಟೇಟ್ ಅವಾರ್ಡ್ಸ್ 2014ರಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಇದರೊಂದಿಗೆ, ರಿಯಾಲಿಟಿ ಪ್ಲಸ್ ಎಕ್ಸಲೆನ್ಸ್ ಅವಾರ್ಡ್ಸ್ 2014 ರಲ್ಲಿ, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಗೌರವಾರ್ಥವಾಗಿ ಬ್ರಿಗೇಡ್ ಸಮೂಹದ ಅಧ್ಯಕ್ಷರು ಹಾಗೂ ನಿರ್ವಾಹಕ ನಿರ್ದೇಶಕರೂ ಆಗಿರುವ ಎಂ. ಆರ್. ಜೈಶಂಕರ್ ಅವರಿಗೆ ಸ್ಕ್ರೋಲ್ ಆಫ್ ಆನರ್' ಪ್ರಶಸ್ತಿಯನ್ನು ನೀಡಲಾಯಿತು. [ಬೆಂಗಳೂರು ರಿಯಲ್ ಎಸ್ಟೇಟ್ ಹಿನ್ನೋಟ, ಮುನ್ನೋಟ]

ರಿಯಾಲಿಟಿ ಪ್ಲಸ್ ಎಕ್ಸಲೆನ್ಸ್ ಅವಾರ್ಡ್ಸ್: ಬ್ರಿಗೇಡ್ ಸಮೂಹವು ಬ್ರಿಗೇಡ್ ಗೇಟ್ ವೇ ಯೋಜನೆಯಲ್ಲಿ ತನ್ನ ವರ್ಲ್ಡ್ ಟ್ರೇಡ್ ಸೆಂಟರ್ ಬೆಂಗಳೂರು ಇದಕ್ಕೆ ಕಮರ್ಷಿಯಲ್ ಪ್ರಾಪರ್ಟಿ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದಿದೆ, ಇದರ ಜತೆಗೆ ತನ್ನ ಬ್ರಿಗೇಡ್ ಮ್ಯಾಗ್ನಮ್ ಪ್ರಾಜೆಕ್ಟ್ ಗಾಗಿ ಡೆವಲಪರ್ ಆಫ್ ದಿ ಇಯರ್- ಕಮರ್ಷಿಯಲ್ ಅವಾರ್ಡ್ ಅನ್ನು ಪಡೆದಿದೆ.
ತನ್ನ ಬ್ರಿಗೇಡ್ ಲೇಕ್ ಫ್ರಂಟ್ ಯೋಜನೆಯ 'ನಡಿಗೆ' ಅಭಿಯಾನಕ್ಕಾಗಿ, ರಿಯಲ್ ಎಸ್ಟೇಟ್ ಮೇಜರ್-- ಇನ್ನೋವೇಟಿವ್ ಮಾರ್ಕೆಟಿಂಗ್ ಕಾನ್ಸೆಪ್ಟ್ ಆಫ್ ದಿ ಇಯರ್, ಒಒಹೆಚ್ ಮಾರ್ಕೆಟಿಂಗ್ ಕ್ಯಾಂಪೇನ್ ಆಫ್ ದಿ ಇಯರ್ ಹಾಗೂ ಪ್ರಿಂಟ್ ಕ್ಯಾಂಪೇನ್ ಆಫ್ ದಿ ಇಯರ್ ಈ ಮೂರು ಪ್ರಶಸ್ತಿಗಳನ್ನು ಕೈವಶ ಮಾಡಿಕೊಂಡಿದೆ.

ಬ್ರಿಗೇಡ್ ಕ್ರೆಸೆಂಟ್ ಹಾಗೂ ಬ್ರಿಗೇಡ್ ಹೊರಿಝೋನ್- ಈ ಎರಡು ಯೋಜನೆಗಳಿಗೆ ಬೆಂಗಳೂರಿನ ಸಿಬಿಡಿ ವ್ಯಾಪ್ತಿಯಲ್ಲಿ ಕ್ರಮವಾಗಿ ಅಲ್ಟ್ರಾ ಲಗ್ಝುರಿ ಅಪಾರ್ಟ್ ಮೆಂಟ್ ಪ್ರಾಜೆಕ್ಟ್ ಆಫ್ ದಿ ಇಯರ್ ಹಾಗೂ ಮೈಸೂರಿನಲ್ಲಿ ಲಗ್ಝುರಿ ಅಪಾರ್ಟ್ ಮೆಂಟ್ ಪ್ರಾಜೆಕ್ಟ್ ಆಫ್ ದಿ ಇಯರ್ ನೀಡಲು ತೀರ್ಮಾನಿಸಲಾಯಿತು.
ಎಲ್ ಆಂಡ್ ಟಿ ಹೌಸಿಂಗ್ ಫೈನಾನ್ಸ್ ನ ಸಹಯೋಗದೊಂದಿಗೆ ಸಿಲಿಕಾನ್ ಇಂಡಿಯಾ, ಬೆಂಗಳೂರು ರಿಯಲ್ ಎಸ್ಟೇಟ್ ಅವಾರ್ಡ್ಸ್ 2014 ನೀಡಿತು. ಈ ಪ್ರಶಸ್ತಿಯು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯಾಪ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ, ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ವೃತ್ತಿಪರರನ್ನು ಗುರುತಿಸಿ ಅಂಗೀಕರಿಸಲು ಮೊದಲ ಹೆಜ್ಜೆಯಾಗಿದೆ.
ಬ್ರಿಗೇಡ್ ಗ್ರೂಪ್ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನ ಉಪಾಧ್ಯಕ್ಷರಾದ ವಿಶ್ವ ಪ್ರತಾಪ್ ದೇಸು ಹಾಗೂ ಬ್ರಿಗೇಡ್ ಗ್ರೂಪ್ ಸಿಒಒ ಮಂಜುನಾಥ್ ರವರು ಸಮೂಹದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬ್ರಿಗೇಡ್ ಕ್ರೆಸೆಂಟ್: ಸೆಂಟ್ರಲ್ ಬೆಂಗಳೂರಿನಲ್ಲಿರುವ ನಂದಿದುರ್ಗ ರಸ್ತೆಯಲ್ಲಿ ಸ್ಥಾಪಿತವಾಗಿರುವ ಈ ಯೋಜನೆಗೆ ಬೆಂಗಳೂರಿನ ಸಿಬಿಡಿ ವ್ಯಾಪ್ತಿಯಲ್ಲಿ ಅಲ್ಟ್ರಾ ಲಗ್ಝುರಿ ಅಪಾರ್ಟ್‍ಮೆಂಟ್ ಪ್ರಾಜೆಕ್ಟ್ ಆಫ್ ದಿ ಇಯರ್' ಪ್ರಶಸ್ತಿಯನ್ನು ನೀಡಲಾಯಿತು. ಬ್ರಿಗೇಡ್ ಕ್ರೆಸೆಂಟ್ 10- ಅಪಾರ್ಟ್ ಮೆಂಟ್ ಯೋಜನೆಯಾಗಿದ್ದು -ಒಂದು ಅಂತಸ್ತಿಗೆ ಒಂದರಂತೆ 10 ನಾಲ್ಕು ಬೆಡ್ ರೂಮ್ ಗಳನ್ನು ಒಳಗೊಂಡ ನಿವಾಸಗಳನ್ನು (ಗಾತ್ರದಲ್ಲಿ 389 ಚದರ ಮೀಟರ್ ನಿಂದ 399 ಚದರ ಮೀಟರ್) ಹೊಂದಿದೆ. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications