ಉತ್ತರ ಬೆಂಗಳೂರಲ್ಲಿ ಬ್ರಿಗೇಡ್ ನಿಂದ ಲಕ್ಷುರಿ ಅಪಾರ್ಟ್ ಮೆಂಟ್
ಬೆಂಗಳೂರು, ಡಿ.18: ಬ್ರಿಗೇಡ್ ಗ್ರೂಪ್ ತನ್ನ ಹೊಚ್ಚಹೊಸ ಪ್ರೊಜೆಕ್ಟ್ ಆದ ಉತ್ತರ ಬೆಂಗಳೂರಿನ ಬ್ರಿಗೇಡ್ ನಾರ್ತ್ ರಿಡ್ಜ್ ನ ಆರಂಭವನ್ನು ಘೋಷಿಸಿದೆ. ಈ ಪ್ರಾಜೆಕ್ಟ್ 6 ಎಕರೆಯಷ್ಟು ವಿಸ್ತಾರಕ್ಕೆ ವ್ಯಾಪಿಸಿದ್ದು 2, 3 ಮತ್ತು 4 ಬೆಡ್ ರೂಮ್ ವುಳ್ಳ ಲಕ್ಷುರಿ ಅಪಾರ್ಟ್ ಮೆಂಟ್ ಗಳನ್ನು ಹೊಂದಿರಲಿದ್ದು ಆರಂಭಿಕ ಬೆಲೆ ಕೇವಲ 65 ಲಕ್ಷ ರೂ. ಆಗಿದೆ.
ಬ್ರಿಗೇಡ್ ನಾರ್ತ್ ರಿಡ್ಜ್, ಹೆಬ್ಬಾಳ ಮೇಲ್ಸೇತುವೆಯಿಂದ ಕೇವಲ 10 ನಿಮಿಷಗಳಷ್ಟು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕೋಗಿಲು ಕ್ರಾಸ್ ನಿಂದ ಕೇವಲ 5 ನಿಮಿಷಗಳಷ್ಟು ದೂರದಲ್ಲಿದೆ.

ಇದು ಲಕ್ಷುರಿ ಹಾಗೂ ಕೈಗೆಟಕುವ ದರದ ನಡುವೆ ಸಮತೋಲನ ಕಾಯ್ದುಕೊಂಡಿದ್ದು, ಶಾಲೆಗಳು, ರಿಟೈಲ್ ಮಳಿಗೆಗಳು, ಮಾನ್ಯತಾ ಟೆಕ್ ಪಾರ್ಕ್ ಇತ್ಯಾದಿಯಂತಹ ಸಾಮಾಜಿಕ ಮೂಲಸೌಕರ್ಯಗಳನ್ನು ಸನಿಹದಲ್ಲೇ ಹೊಂದಿರುವ ಅದ್ಭುತ ಜೀವನಶೈಲಿಯ ಭರವಸೆಯನ್ನು ಆಫರ್ ಮಾಡುತ್ತದೆ.
ಜೊತೆಗೆ ಹೂಡಿಕೆದಾರರು ಹಾಗೂ ಬಳಕೆದಾರರಿಬ್ಬರಿಗೂ ಮಾದರಿಯ ಆಯ್ಕೆಯನ್ನಾಗಿಸಿದೆ. ಟೆನಿಸ್, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಪಿಚ್, ಗಾಲ್ಫ್ ಪುಟಿಂಗ್ ಗ್ರೀನ್ ಹೀಗೆ ವಿವಿಧ ಕ್ರೀಡೆಗೆ ಅವಕಾಶ, ರಿಫ್ಲೆಕ್ಸಾಲಜಿ ಪಾತ್ ನಂತಹ ಹಸಿರು ವಲಯ, ಯೋಗ, ಧ್ಯಾನ ಮಾಡುವ ಸಲುವಾಗಿ ಮರಗಳನ್ನು ಬೆಳೆಸಿದ ಸ್ಥಳ ಹೀಗೆ ಜೀವನಶೈಲಿಯನ್ನು ಕ್ರಮಬದ್ಧವಾಗಿ ಯೋಜಿಸಿ ರೂಪಿಸಲಾಗಿದೆ. ಪ್ರೊಜೆಕ್ಟ್ ಕುರಿತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ ಬ್ರಿಗೇಡ್ ನಾರ್ತ್ ರಿಡ್ಜ್. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)












Click it and Unblock the Notifications