ಬೆಂಗಳೂರಿನ ಬ್ರಿಗೇಡ್ ಮೆಡೋಸ್ ನಲ್ಲಿ ವಿಸ್ಟೀರಿಯ

ಬೆಂಗಳೂರು, ಜೂ.12: ಭಾರತದ ಮುಂಚೂಣಿಯಲ್ಲಿರುವ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾದ ಬ್ರಿಗೇಡ್ ಗ್ರೂಪ್ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬ್ರಿಗೇಡ್ ಮೆಡೋಸ್ ನಲ್ಲಿ ವಿಸ್ಟೀರಿಯ ಎಂಬ ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ನಿರ್ಮಾಣ ಮಾಡಿದೆ.

ಆರ್ಟ್ ಆಫ್ ಲಿವಿಂಗ್ ಬಳಿ ನಿರ್ಮಿಸಿರುವ ಈ ಅಪಾರ್ಟ್ ಮೆಂಟ್ ಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಬ್ರಿಗೇಡ್ ಮೆಡೋಸ್ ನಲ್ಲಿ ನಿರ್ಮಾಣವಾಗಿರುವ ವಿಸ್ಟೀರಿಯದಲ್ಲಿ 2 ಮತ್ತು 3 ಬೆಡ್ ರೂಂಗಳ ಐಷಾರಾಮಿ ಅಪಾರ್ಟ್ ಮೆಂಟ್ ಗಳಿವೆ. ಇಷ್ಟಲ್ಲದೇ ಸಿಂಗಲ್ ಬೆಡ್ ರೂಂ ಅಪಾರ್ಟ್ ಮೆಂಟ್ ಸಹ ಇದೆ.

ಡಬಲ್ ಬೆಡ್ ರೂಂ ಅಪಾರ್ಟ್ ಮೆಂಟ್ 1120 ರಿಂದ 1300 ಚದರಡಿ ವಿಸ್ತೀರ್ಣವಿದ್ದರೆ, ಮೂರು ಬೆಡ್ ರೂಂಗಳು 1430 ರಿಂ 1630 ಚದರಡಿ ವಿಸ್ತೀರ್ಣ ಹೊಂದಿವೆ. ಅದೇ ರೀತಿ ಸಿಂಗಲ್ ಬೆಡ್ ರೂಂ 680 ರಿಂದ 900 ಚದರಡಿ ವಿಸ್ತೀರ್ಣದ್ದಾಗಿವೆ.

ವಿಸ್ಟೀರಿಯದಲ್ಲಿ ಜಿಮ್ನಾಸಿಯಂ, ಈಜುಕೊಳ, ಪಾರ್ಟಿಹಾಲ್ ಸೇರಿದಂತೆ ಕ್ಲಬ್ ಹೌಸ್ ಇದ್ದು ಐಷಾರಾಮಿ ಜೀವನಕ್ಕೆ ಈ ಅಪಾರ್ಟ್ ಮೆಂಟ್ ಹೇಳಿ ಮಾಡಿಸಿದಂತಿದೆ. ಅತ್ಯುತ್ತಮ ಲ್ಯಾಂಡ್ ಸ್ಕೇಪ್ ನೊಂದಿಗೆ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ಲಕ್ಸುರಿ ಅಪಾರ್ಟ್ ಮೆಂಟ್ ಉತ್ತಮ ಗುಣಮಟ್ಟದ ರಸ್ತೆ ವ್ಯವಸ್ಥೆ ಹೊಂದಿದೆ.

ಇಲ್ಲಿ ವಾಸ ಮಾಡುವವರಿಗೆ ಹಲವಾರು ಮನರಂಜನೆಯ ವ್ಯವಸ್ಥೆಯಡಿ ಒಂದು ಸಮುದಾಯದ ವಾತಾವರಣ ಸೃಷ್ಟಿಯಾಗಲಿದೆ. 60 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಬ್ರಿಗೇಡ್ ಮೆಡೋಸ್ ಇಂಟಿಗ್ರೇಟೆಡ್ ಎನ್ ಕ್ಲೇವ್, ಆಫೀಸ್ ಮತ್ತು ರಿಟೇಲ್ ಜಾಗಗಳನ್ನು ಹೊಂದಿದೆ. ಇದರೊಂದಿಗೆ ಶಾಪಿಂಗ್ ಆರ್ಕೇಡ್, ಕಿಂಡರ್ ಗಾರ್ಡನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಹೊಂದಿದೆ.

Brigade Group launch Wisteria at Brigade Meadows

ಬ್ರಿಗೇಡ್ ಗ್ರೂಪ್ ಈ ಐಷಾರಾಮಿ ಅಪಾರ್ಟ್ ಮೆಂಟ್ ಗಳನ್ನು ವಿಶೇಷ ಉದ್ಘಾಟನಾ ದರದಲ್ಲಿ ಅಂದರೆ 45.5 ಲಕ್ಷ ರೂಪಾಯಿಯಿಂದ ಮಾರಾಟ ಮಾಡುತ್ತಿದೆ. ಈ ಅವಕಾಶ ಸೀಮಿತ ಅವಧಿಯವರೆಗೆ ಇರಲಿದ್ದು, ಸೀಮಿತ ಅಪಾರ್ಟ್ ಮೆಂಟ್ ಗಳಿಗೆ ಅನ್ವಯವಾಗುತ್ತದೆ. ಸ್ವಂತ ಮನೆಯ ಕನಸು ಹೊತ್ತವರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಚ್ಚಿಸುವವರು ಮ್ಯಾಥ್ಯೂ ಅಬ್ರಾಹಂ- 080 4046 7600 ಸಂಖ್ಯೆಗೆ ಕರೆ ಮಾಡಬಹುದು ಅಥವಾ www.BrigadeMeadows.in/wisteria, www.BrigadeGroup.com ಇಲ್ಲಿ ಪಡೆಯಬಹುದು. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+