ಐಟಿ ಉದ್ಯೋಗಿಗಳು ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ್ಯಾಕೆ?

ಬೆಂಗಳೂರು, ಜೂನ್ 5 : ಐಟಿ ಕಂಪೆನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಐಟಿ ಕಂಪೆನಿಗಳ ಉದ್ಯೋಗಿಗಳ ಪರವಾಗಿ ಕೆಲವು ಪ್ರತಿನಿಧಿಗಳು ರಾಜ್ಯದ ಐಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸೋಮವಾರ ಭೇಟಿ ಮಾಡಿದರು.

ತಮ್ಮ ಆತಂಕದ ಬಗ್ಗೆ ಅವರೊಂದಿಗೆ ಚರ್ಚಿಸಿದರು. "ಕಾಗ್ನಿಜೆಂಟ್ ನಿಂದ ಹತ್ತು ಸಾವಿರ ಮಂದಿಯ ತೆಗೆಯಲು ಯೋಜನೆ ಹಾಕಲಾಗಿದೆ. ಟೆಕ್ ಮಹೀಂದ್ರಾ ಬಗ್ಗೆಯೂ ಅಂಥದೇ ಮಾತಿದೆ. ನಮಗೆ ದೊರೆತ ಮಾಹಿತಿಯ ಮೇಲೆ ಇದನ್ನು ಹೇಳುತ್ತಿದ್ದೇವೆ" ಎಂದು ಪ್ರತಿನಿಧಿಯೊಬ್ಬರು ಹೇಳಿದ್ದಾರೆ.[ದಲಿತರ ಮನೆ ಊಟ ಎಂಬುದು ಬಿಜೆಪಿಯ ಗಿಮಿಕ್: ಪ್ರಿಯಾಂಕ್ ಖರ್ಗೆ]

Bengaluru Techies Meet IT Minister To Share Complaints Of Lay-Offs

ಕರ್ನಾಟಕದ ಕಾನೂನಿನ ಪ್ರಕಾರ ಟೆಕಿಗಳು ಸಂಘಟನೆ ಮಾಡಿಕೊಳ್ಳುವ ಹಾಗಿಲ್ಲ. ಎಲ್ಲ ಐಟಿ ಉದ್ಯೋಗಿಗಳ ಸದ್ಯದ ಸಾಮಾನ್ಯ ಬೇಡಿಕೆಗಳನ್ನು ಸಲ್ಲಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಭೇಟಿ ವೇಳೆ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ನಿಯೋಗದ ಜತೆ ಭೇಟಿಯಾಗಿ ಒಂದು ಗಂಟೆ ಚರ್ಚಿಸಿದ ನಂತರ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಾವು ಅವರಿಗೆ ಏನು ಬೇಕೋ ಅನ್ನೋದನ್ನು ತಿಳಿಯುವುದಕ್ಕೆ ಪ್ರಯತ್ನಿಸ್ತಿದ್ದೀವಿ. ಏಕೆಂದರೆ ಹಲವರಿದ್ದಾರೆ, ಹಲವು ಒಕ್ಕೂಟಗಳಿವೆ. ನಾವು ಏಕಪ್ಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗಲ್ಲ ಎಂದಿದ್ದಾರೆ.[ಮಂಗಳೂರು, ಮೈಸೂರು, ಧಾರವಾಡದಲ್ಲಿ ಐಟಿ ಪಾರ್ಕ್ : ಪ್ರಿಯಾಂಕ್ ಖರ್ಗೆ]

"ಕೆಲಸದಿಂದ ತೆಗೆಯುವಾಗ ಅವರು ನೀಡುವ ಕಾರಣ ಅಂಡರ್ ಪರ್ಫಾಮೆನ್ಸ್. ಆದರೆ ಅದು ನಿಜವಾದ ಕಾರಣವಲ್ಲ. ಕಳೆದ ವರ್ಷ ಒಳ್ಳೆ ರೇಟಿಂಗ್ ಬಂದವರಿಗೆ ಈ ವರ್ಷ ಚೆನ್ನಾಗಿ ಕೆಲಸ ಮಾಡಿಲ್ಲ ಎಂದು ದಿಢೀರ್ ಅಂತ ಹೇಗೆ ಕಡಿಮೆ ರೇಟಿಂಗ್ ಬರುತ್ತದೆ?" ಎಂದು ಪ್ರತಿನಿಧಿಯೊಬ್ಬರು ಹೇಳಿದರು.

ಆದರೆ, ನಾಸ್ಕಾಂ ಪ್ರಕಾರ ಐಟಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಿಲ್ಲ. ನೇಮಕಾತಿ ಪ್ರಮಾಣ ಕಡಿಮೆ ಆಗುತ್ತದೆ. ಸಾಫ್ಟ್ ವೇರ್ ವಲಯದಲ್ಲಿ ನಲವತ್ತು ಲಕ್ಷ ಭಾರತೀಯರು ಉದ್ಯೋಗ ಮಾಡುತ್ತಿದ್ದಾರೆ. ಅವರಿಂದ ನೂರೈವತ್ತು ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಆದಾಯ ಗಳಿಕೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+