ದಸರಾ: ಹೆಲ್ಪ್ ಚಾಟ್ ನಿಂದ ಭಾರಿ ರಿಯಾಯಿತಿ ಆಫರ್ಸ್
ಬೆಂಗಳೂರು, ಅ.21: ಬೆಂಗಳೂರು ಮೂಲದ ಮೆಸೆಂಜರ್ ಆಧಾರಿತ ವೈಯಕ್ತಿಕ ಸಲಹೆ ವೇದಿಕೆ ಹೆಲ್ಪ್ ಚಾಟ್, ತನ್ನ ಬಳಕೆದಾರರ ಅನುಕೂಲಕ್ಕಾಗಿ 'ಹಬ್ಬದ ಅವಧಿ ಸಹಾಯ' (ಫೆಸ್ಟಿವ್ ಸೀಸನ್ ಹೆಲ್ಪ್) ಸೌಲಭ್ಯವನ್ನು ಬಿಡುಗಡೆಗೊಳಿಸಿದೆ.
ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಸಾಕಷ್ಟು ರೀಟೇಲ್ ಜಾಲಗಳು ನೀಡುವ ಆಫರ್ ಗಳನ್ನು ಗುರುತಿಸಿ, ವಿಶ್ಲೇಷಿಸಿ ಉತ್ತಮವಾದ ಆಯ್ಕೆ ಮಾಡಲು ಹೆಲ್ಪ್ ಚಾಟ್ ನಿಮಗೆ ನೆರವಾಗಲಿದೆ. [ದೀಪಾವಳಿ ಹಬ್ಬಕ್ಕೆ ಟಾಪ್ 20 ಆನ್‌ಲೈನ್ ಆಫರ್‌ಗಳು]
ಹಬ್ಬದ ಸಂದರ್ಭದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಕೊಡುಗೆಗಳು, ರಿಯಾಯಿತಿ ಮಾಹಿತಿಯನ್ನು ಕಲೆ ಹಾಕಿ ಆಯ್ಕೆ ಮಾಡಲು ಬಳಕೆದಾರರಿಗೆ ಹೆಲ್ಪ್ ಚಾಟ್ ನೆರವಾಗುತ್ತದೆ. ಅತ್ಯುತ್ತಮ ಕೊಡುಗೆ ಗುರುತಿಸಲು, ಉತ್ಪನ್ನ ಲಭ್ಯತೆ ಕುರಿತು ಮಾಹಿತಿಗೆ ಮತ್ತು ಬಳಕೆದಾರರ ರಿವ್ಯೂ ಆಧಾರದಲ್ಲಿ ಖರೀದಿಗೆ ಇದು ಸಹಕಾರಿ.
ಹೆಲ್ಪ್ ಚಾಟ್ ಜನರಿಗೆ ಸಮಯ ಮತ್ತು ಹಣವನ್ನು ಉಳಿಸಲು ಈ ಸೇವೆಯನ್ನು ನೀಡುತ್ತಿದೆ. ಇದನ್ನು ಪಡೆಯಲು ಬಳಕೆದಾರರು ಹೆಲ್ಪ್ ಚಾಟ್ ಮುಖಪುಟದಲ್ಲಿ ಕೂಪನ್ ಟೈಲ್ ಮೇಲೆ ಕ್ಲಿಕ್ ಮಾಡಿದರೆ, ಅಲ್ಲಿ ಫೆಸ್ಟೀವ್ ಸೀಸನ್ ಹೆಲ್ಪ್ ಎಂದು ಇರುತ್ತದೆ. ಅಲ್ಲಿ ಅವರಿಗೆ ಸೂಕ್ತ ಮಾರಾಟ ಅಥವಾ ಸರಕಿನ ಮಾಹಿತಿ ಪಡೆಯಬಹುದು. ಹೆಲ್ಪ್ ಚಾಟ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

'ಹಬ್ಬದ ಅವಧಿ ಸಹಾಯ’ (ಫೆಸ್ಟಿವ್ ಸೀಸನ್ ಹೆಲ್ಪ್) ಸೇವೆ
ಹಬ್ಬದ ಸಂದರ್ಭದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಕೊಡುಗೆಗಳು, ರಿಯಾಯಿತಿ ಮಾಹಿತಿಯನ್ನು ಕಲೆ ಹಾಕಿ ಆಯ್ಕೆ ಮಾಡಲು ಬಳಕೆದಾರರಿಗೆ ಹೆಲ್ಪ್ ಚಾಟ್ ನೆರವಾಗುತ್ತದೆ. ಅತ್ಯುತ್ತಮ ಕೊಡುಗೆ ಗುರುತಿಸಲು, ಉತ್ಪನ್ನ ಲಭ್ಯತೆ ಕುರಿತು ಮಾಹಿತಿಗೆ ಮತ್ತು ಬಳಕೆದಾರರ ರಿವ್ಯೂ ಆಧಾರದಲ್ಲಿ ಖರೀದಿಗೆ ಇದು ಸಹಕಾರಿ.

ಹಬ್ಬದ ಅವಧಿಯಲ್ಲಿ ಹೆಲ್ಪ್ ಚಾಟ್ ಆಫರ್ಸ್
ಹಬ್ಬದ ಅವಧಿಯಲ್ಲಿ ಹೆಲ್ಪ್ ಚಾಟ್ ಆಹಾರದ ಬೇಡಿಕೆ ಮೇಲೆ ಶೇ.30ರಷ್ಟು ನಗದು ವಾಪಾಸ್ ಕೊಡುಗೆ ಘೋಷಿಸಿದೆ. ಲಾಂಡ್ರಿ ಸೇವೆಗೆ ಶೇ.50ರಷ್ಟು ನಗದು ವಾಪಾಸ್. ದೆಹಲಿ, ಮುಂಬೈ, ಹೈದ್ರಾಬಾದ್ ಮತ್ತು ಪುಣೆಯಲ್ಲೂ ಈ ಕೊಡುಗೆ ಲಭ್ಯವಿದ್ದು, ಪ್ರತಿ ರಿಚಾರ್ಜ್ ಮೇಲೆ ಶೇ. 20ರಷ್ಟು ನಗದು ವಾಪಾಸ್ ಸಿಗಲಿದೆ.

ಹೆಲ್ಪ್ ಚಾಟ್ ಸಂಸ್ಥಾಪಕ ಮತ್ತು ಸಿಇಒ ಅಂಕುರ್ ಸಿಂಗ್ಲ
ಹಬ್ಬದ ಅವಧಿಯಲ್ಲಿ ಎಲ್ಲ ರೀಟೇಲ್ ಬ್ರ್ಯಾಂಡ್ ಗಳಿಂದ ಸಾಕಷ್ಟು ಕೊಡುಗೆಗಳು ಇರುತ್ತವೆ. ಇದರ ಮಾಹಿತಿ ನೀಡುವ ಮೂಲಕ ನಾವು ಬಳಕೆದಾರರ ಕೆಲಸವನ್ನು ಸುಲಭವಾಗಿಸುತ್ತಿದ್ದೇವೆ. ಅವರು ನೋಡುತ್ತಿರುವ ಉತ್ಪನ್ನದ ಮೇಲೆ ಇರುವ ಅತ್ಯುತ್ತಮ ಮಾರಾಟ ಕೊಡುಗೆ ಮತ್ತು ರಿಯಾಯಿತಿಗಳ ಮಾಹಿತಿಯನ್ನು ನಾವು ನೀಡುತ್ತೇವೆ.

ಗ್ರಾಹಕರ ವಿಮರ್ಶೆಗೂ ಅವಕಾಶವಿದೆ
ಅತ್ಯುತ್ತಮ ಮಾರಾಟ ಕೊಡುಗೆ ಮತ್ತು ರಿಯಾಯಿತಿಗಳ ಮಾಹಿತಿಯನ್ನು ವಿಶೇಷ ತಜ್ಞರಿಂದ ಪಡೆದು ನೀಡಲಾಗುತ್ತದೆ. ಜೊತೆಗೆ ಗ್ರಾಹಕರ ವಿಮರ್ಶೆ ಆಧಾರದ ಮೇಲೆ ಅವರು ಖರೀದಿ ನಿರ್ಧಾರ ಮಾಡಬಹುದು. ಹೀಗಾಗಿ ಹೆಲ್ಪ್ ಚಾಟ್ ಗ್ರಾಹಕರು ಅವರು ಖರೀದಿಸಲು ಬಯಸುವ ಎಲ್ಲದರ ಮಾಹಿತಿ ಪಡೆಯಬಹುದು

ಹೆಲ್ಪ್ ಚಾಟ್ ಅಪ್ಲಿಕೇಷನ್ ಬಗ್ಗೆ
ಇದೊಂದು ವೈಯಕ್ತಿಕ ಸಲಹೆ ಅಪ್ಲಿಕೇಷನ್ ಆಗಿದೆ. ಜನಕ್ಕೆ ಹೆಚ್ಚಿನ ಕೆಲಸಗಳನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುತ್ತದೆ. ಹಿಂದೆ ಅಕೋಶಾ(akosha) ಎಂದು ಜನಪ್ರಿಯವಾಗಿದ್ದ ಅಪ್ಲಿಕೇಷನ್ ಈಗ ಹೆಲ್ಪ್ ಚಾಟ್ ಆಗಿ ಗ್ರಾಹಕರ ಮೆಚ್ಚುಗೆ ಗಳಿಸಿದೆ.'ಡು ಮೋರ್ ಡುಯಿಂಗ್ ಲೆಸ್' ಎಂಬ ಧ್ಯೇಯವಾಕ್ಯ ಹೊಂದಿದೆ.

ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ
ಏರ್ ಸೆಲ್, ವೋಲ್ಟಾಸ್, ಯೂರೆಕ ಫೋರ್ಬ್ಸ್, ಸ್ಪೈಸ್ ಮೊಬೈಲ್ಸ್, ರೆಡಿಫ್ ಶಾಪಿಂಗ್ ಮತ್ತಿತರ ಬೃಹತ್ ಬ್ರ್ಯಾಂಡ್ ಗಳ ಜೊತೆ ಹೊಂದಾಣಿಕೆ ಪಡೆದಿದೆ. ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ಕಚೇರಿಯೊಂದಿಗೆ 600ಕ್ಕೂ ಅಧಿಕ ನೌಕರರನ್ನು ಹೊಂದಿದೆ. ಮೇ 2015ರಲ್ಲಿ ಸೆಕ್ಯೊಯಿಯ ಕ್ಯಾಪಿಟಲ್ ನಿಂದ 100 ಕೋಟಿ ರೂ.ಸಂಗ್ರಹಿಸಿದೆ.











Click it and Unblock the Notifications