Google Pay & PhonePe: ಇನ್ಮುಂದೆ ಗೂಗಲ್ ಪೇ, ಫೋನ್‌ಪೇ ಬಳಕೆಗೆ ಬ್ಯಾಂಕ್‌ನಿಂದ ಶುಲ್ಕ, ಇಲ್ಲಿದೆ ಸಂಪೂರ್ಣ ಮಾಹಿತಿ!
Google Pay & PhonePe: ಗೂಗಲ್ ಪೇ, ಫೋನ್ ಪೇ ಹಾಗೂ ಯುಪಿಐ ಪೇಮೆಂಟ್‌ಗಳ ತೆರಿಗೆ ವಿಧಿಸಲಾಗುತ್ತದೆ ಎನ್ನುವ ಗೊಂದಲ ಬಗೆಹರಿಯುವ ಸಮಯದಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಗೂಗಲ್ ಪೇ ಹಾಗೂ ಫೋನ್ ಪೇ ಸೇರಿದಂತೆ ಆನ್‌ಲೈನ್ ಪೇಮೆಂಟ್‌ಗಳಿಗೆ ಇನ್ಮುಂದೆ ಹಣ ಕಟ್ ಆಗಲಿದೆ. ಹೌದು ಈಗ ಪ್ರಮುಖ ಬ್ಯಾಂಕ್ ಮಾತ್ರ ಆನ್‌ಲೈನ್ ಪೇಮೆಂಟ್‌ಗೆ ಹಣ ನಿಗದಿ ಮಾಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕ್‌ಗಳು ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. ಇದರ ಸಂಪೂರ್ಣ ವಿವರ ನೋಡೋಣ.
ದೇಶದಲ್ಲಿ ಆನ್‌ಲೈನ್ ಪೇಮೆಂಟ್‌ನಲ್ಲಿ ಗೊಂದಲಗಳು ಈಚೆಗಷ್ಟೇ ಪರಿಹಾರವಾಗಿತ್ತು. ಇದರ ಬೆನ್ನಲ್ಲೇ ಇದೀಗ ಆನ್‌ಲೈನ್ ವಹಿವಾಟಿಗೂ ಬ್ಯಾಂಕ್‌ನಿಂದಲೇ ಶುಲ್ಕ ನಿಗದಿಯಾಗಿದೆ. ಇದರಿಂದ ಇನ್ಮುಂದಿನ ದಿನಗಳಲ್ಲಿ ಆನ್‌ಲೈನ್ ವಹಿವಾಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೀಗ ಐಸಿಐಸಿಐ ಬ್ಯಾಂಕ್ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ. ಗೂಗಲ್ ಪೇ ಹಾಗೂ ಫೋನ್‌ಪೇ ಸೇರಿದಂತೆ ಆನ್‌ಲೈನ್‌ನ ಮೂಲಕ ಹಣ ಕಳುಹಿಸುವುದಕ್ಕೆ ದುಡ್ಡು ಪಾವತಿ ಮಾಡಬೇಕು. ಇಷ್ಟು ದಿನಗಳ ಕಾಲ ಈ ಸೇವೆ ಉಚಿತವಾಗಿತ್ತು. ಇದೀಗ ಇದಕ್ಕೂ ದುಡ್ಡು ಕೊಡಬೇಕು. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳು ಅನುಸರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಐಸಿಐಸಿಐ ಬ್ಯಾಂಕ್ "ವ್ಯಾಪಾರಿ ವೇದಿಕೆ" (Merchant Platforms)ಗಳಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುವ ಪಾವತಿ ಸಂಗ್ರಾಹಕರಿಗೆ (ಪಿಎ) ಹೊಸ ಶುಲ್ಕ ವಿಧಿಸಲಿದೆ. ಇದು ವ್ಯಾಪಾರಿಗಳಿಗೆ ಅಥವಾ ವ್ಯಾಪಾರ ಮಾಡುವುದಕ್ಕೆ ಆನ್‌ಲೈನ್ ಯುಪಿಐ ಬಳಕೆ ಮಾಡುವವರಿಗೆ ಅನ್ವಯವಾಗಲಿದೆ. ಗೂಗಲ್ ಪೇ ಹಾಗೂ ಫೋನ್‌ಪೇ ಸೇರಿದಂತೆ ಹಲವು ಆನ್‌ಲೈನ್ ಪೇಮೆಂಟ್‌ಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಯಾವುದಕ್ಕ ಎಷ್ಟು ಹಣ ಪಾವತಿ ಮಾಡಬೇಕು: ಐಸಿಐಸಿಐ ಬ್ಯಾಂಕ್ ಇನ್ಮುಂದೆ ಪ್ರತಿಯೊಂದು ಯುಪಿಐ ವಹಿವಾಟಿಗೆ 10 ರೂವರೆಗೆ ಶುಲ್ಕ ವಿಧಿಸಲಿದೆ. ಗೂಗಲ್ ಪೇ, ಫೋನ್‌ಪೇ ಸೇರಿದಂತೆ ವಿವಿಧ ಪೇಮೆಂಟ್ ಅಗ್ರಿಗೇಟರ್ಗಳಿಗೆ ದುಡ್ಡು ಪಾವತಿ ಮಾಡಬೇಕಾಗುತ್ತದೆ. ಐಸಿಐಸಿಐ ಬ್ಯಾಂಕ್‌ನಲ್ಲಿ ಎಸ್ಕ್ರೋ ಅಕೌಂಟ್ ಇದ್ದರೆ, 100 ರೂಪಾಯಿಗೆ 2 ರೂಪಾಯಿ ಶುಲ್ಕ ಇರಲಿದೆ. ಒಂದೊಮ್ಮೆ ಎಸ್ಕ್ರೋ ಅಕೌಂಟ್ ಇಲ್ಲದಿದ್ದರೆ, 4 ರೂಪಾಯಿ ಶುಲ್ಕ ಇರಲಿದೆ (ಮೂಲಾಂಕ) ಎಂದು ಹೇಳಲಾಗಿದೆ.
ಆನ್‌ಲೈನ್ ಪೇಮೆಂಟ್ ಮೇಲೆ ಪರಿಣಾಮ: ಇನ್ನು ದೇಶದಲ್ಲಿ ಆನ್‌ಲೈನ್ ಪೇಮೆಂಟ್ ಮೇಲೆ ಶುಲ್ಕ ವಿಧಿಸುತ್ತಿರುವುದು ಹಾಗೂ ಜಿಎಸ್‌ಟಿ ಸೇರಿದಂತೆ ವಿವಿಧ ಕಾರಣಗಳಿಗೆ ಆನ್‌ಲೈನ್ ಪೇಮೆಂಟ್ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಗೂಗಲ್ ಪೇ, ಫೋನ್ ಪೇ ಹಾಗೂ ಆನ್‌ಲೈನ್ ಪೇಯಲ್ಲಿ ಉಂಟಾದ ಗೊಂದಲದಿಂದಾಗಿ ಜನ ಹಾಗೂ ಕೆಲವು ವ್ಯಾಪಾರಿಗಳು ನಗದು ವಹಿವಾಟಿಗೆ ಮರಳಿದ್ದಾರೆ. ಇದರಿಂದ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications