Bank Holidays in May 2022 : ಮೇ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ?

ನವದೆಹಲಿ, ಏಪ್ರಿಲ್ 14: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ ತಿಂಗಳ ಬ್ಯಾಂಕ್‌ ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟ ಮಾಡಿದೆ. ಆರ್‌ಬಿಐ ಹಂಚಿಕೊಂಡ ರಜಾ ಕ್ಯಾಲೆಂಡರ್ ಪ್ರಕಾರ, ಮೇ ತಿಂಗಳಿನಲ್ಲಿ ಬ್ಯಾಂಕುಗಳು ಹತ್ತು ದಿನ ಬಂದ್‌ ಆಗಲಿದೆ. ಮುಂದಿನ ತಿಂಗಳು ನೀವು ಬ್ಯಾಂಕುಗಳಿಗೆ ತೆರಳುವ ಮುನ್ನ ಯಾವೆಲ್ಲಾ ದಿನಗಳು ಬ್ಯಾಂಕ್‌ ರಜೆ ಇರಲಿದೆ ಎಂದು ನೋಡಿಕೊಳ್ಳಿ. ಆದರೆ ಬ್ಯಾಂಕ್‌ ರಜೆಗಳು ಆಯಾ ರಾಜ್ಯಗಳಿಗೆ ಅನ್ವಯ ಆಗಲಿದೆ ಎಂಬುವುದು ಗಮನಾರ್ಹವಾಗಿದೆ.

ಮೇನಲ್ಕಿ ಇರುವ 10 ದಿನಗಳ ಬ್ಯಾಂಕ್‌ ರಜೆಗಳಲ್ಲಿ ರಾಷ್ಟ್ರೀಯ ರಜಾದಿನಗಳ ಹೊರತಾಗಿ, ಕೆಲವು ರಾಜ್ಯ-ವಾರು ರಜಾದಿನಗಳು ಎಲ್ಲಾ ಭಾನುವಾರಗಳ ರಜೆ, ಎರಡನೇ ನಾಲ್ಕನೇ ಶನಿವಾರ ಇದರಲ್ಲಿ ಸೇರ್ಪಡೆ ಆಗಿದೆ. ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಏಕಕಾಲದಲ್ಲಿ ನಡೆಯುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳ ಮೇಲೆ ಆಧಾರಿತವಾಗಿರುತ್ತದೆ. ಈ ಎಲ್ಲಾ ರಜಾದಿನಗಳು ಎಲ್ಲಾ ರಾಜ್ಯಗಳಲ್ಲಿ ಅನ್ವಯಿಸುವುದಿಲ್ಲ. ಮೇನಲ್ಲಿ ಎಷ್ಟು ರಜೆಗಳಿವೆ ಮತ್ತು ಎಲ್ಲಿ ಅನ್ವಯಿಸುತ್ತವೆ ಎಂಬುದನ್ನು ತಿಳಿಯಲು ಮುಂದೆ ಓದಿ...

Bank Holidays in May 2022: Banks Will Be Closed on These Days

ಮೇ ರಜಾದಿನಗಳ ಪಟ್ಟಿ:
ಮೇ 1 (ಭಾನುವಾರ): ಮೇ ಡೇ-ದೇಶದೆಲ್ಲೆಡೆ/ಮಹಾರಾಷ್ಟ್ರ ದಿನಾಚರಣೆ-ಮಹಾರಾಷ್ಟ್ರ
ಮೇ 2 (ಸೋಮವಾರ): ಮಹರ್ಷಿ ಪರುಶರಾಮ್ ಜಯಂತಿ- ಹಲವಾರು ರಾಜ್ಯಗಳು
ಮೇ 3 (ಮಂಗಳವಾರ): ಈದುಲ್ ಫಿತ್ರ್, ಬಸವ ಜಯಂತಿ (ಕರ್ನಾಟಕ)
ಮೇ 4 (ಬುಧವಾರ): ಈದುಲ್ ಫಿತ್ರ್ -ತೆಲಂಗಾಣ
ಮೇ 9 (ಸೋಮವಾರ): ಗುರು ರವೀಂದ್ರನಾಥ್ ಜಯಂತಿ- ಪಶ್ಚಿಮ ಬಂಗಾಳ, ತ್ರಿಪುರಾ
ಮೇ 13 (ಗುರುವಾರ): ಈದುಲ್ ಫಿತ್ರ್-ರಾಷ್ಟ್ರದೆಲ್ಲೆಡೆ
ಮೇ 14 (ಶನಿವಾರ): ಎರಡನೇ ಶನಿವಾರ
ಮೇ 16 (ಸೋಮವಾರ): ಬುದ್ಧ ಪೂರ್ಣಿಮಾ, ರಾಜ್ಯ ಸ್ಥಾಪನಾ ದಿನ(ಸಿಕ್ಕಿಂ ಇತರೆ ರಾಜ್ಯ)
ಮೇ 24 (ಮಂಗಳವಾರ): ಖಾಜಿ ನಜ್ರುಲ್ ಇಸ್ಲಾಂ- ಸಿಕ್ಕಿಂ
ಮೇ 28 (ಶನಿವಾರ): ನಾಲ್ಕನೇ ಶನಿವಾರ

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ.
ಅವುಗಳು ಈ ಕೆಳಕಂಡಂತಿವೆ:
1. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ
2. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ
3. ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+