ಬಂದ್ ಬಿಸಿ ನಡುವೆ ಬ್ಯಾಂಕುಗಳಿಗೆ ಸಾಲು ಸಾಲು ರಜೆ

ಬೆಂಗಳೂರು, ಜನವರಿ 24: ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗಳಿಗೆ 4 ದಿನಗಳ ಸರಣಿ ರಜೆ ನಾಳೆಯಿಂದ ಸಿಗಲಿದೆ. ಗ್ರಾಹಕರು ಈ ದಿನವೇ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆಗೆ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದು ತಪ್ಪುತ್ತದೆ. ಜನವರಿ 25ರಂದು ಮಹಾದಾಯಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಜನವರಿ 25 ಗುರುವಾರದಿಂದ ಚೆಕ್ ಕ್ಲಿಯರೆನ್ಸ್, ನಗದು ಜಮೆಗೆ ತೊಂದರೆಯಾಗಬಹುದು.ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಸಾಲು ಸಾಲು ರಜೆ ಜತೆಗೆ ಬ್ಯಾಂಕ್ ಸಿಬ್ಬಂದಿ ರಜೆ ಹಾಕಿದ್ದರೆ, ಪರಿಸ್ಥಿತಿ ಕಷ್ಟವಾಗುತ್ತದೆ.

All banks will be closed for four days in a row- Karnataka Bandh Republic day

ಯಾವಾಗ ರಜೆ:

ಜನವರಿ 25 : ಗುರುವಾರದಂದು ಕರ್ನಾಟಕ ಬಂದ್
ಜನವರಿ 26 : ಶುಕ್ರವಾರ ಗಣರಾಜ್ಯೋತ್ಸವ,
ಜನವರಿ 27 : 4ನೇ ಶನಿವಾರದ ರಜೆ ಇರುತ್ತದೆ.
ಜನವರಿ 28 ರಂದು ಭಾನುವಾರ ರಜೆ ಇದೆ.

ಕರ್ನಾಟಕ ಬಂದ್ ಇರುವುದರಿಂದ ಗುರುವಾರ(ಜನವರಿ 25)ದಂದು ಬಹುತೇಕ ಶಾಲಾ, ಕಾಲೇಜು, ಕಚೇರಿ ಬಂದ್ ಆಗಲಿವೆ. ಬ್ಯಾಂಕ್ ಗಳು ಕೂಡ ಬಂದ್ ಆಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+