• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದ ಅಮುಲ್

|

ನವದೆಹಲಿ, ಡಿಸೆಂಬರ್ 02: ದೇಶದ ದೈತ್ಯ ಹಾಲು ಸಂಸ್ಕಾರಕ, ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಫೆಡರೇಶನ್ ಲಿಮಿಟೆಡ್ (ಜಿಸಿಎಂಎಂಎಫ್) ನ ಬ್ರ್ಯಾಂಡ್ ಆಗಿರುವ ಅಮುಲ್ ವಿಶ್ವದ ಎಂಟನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿದೆ.

ಇಂಟರ್‌ನ್ಯಾಷ್‌ನಲ್ ಫಾರ್ಮ್ ಕಂಪೇರಿಶನ್ ನೆಟ್‌ವರ್ಕ್ (ಐಎಫ್‌ಸಿಎನ್) ಬಿಡುಗಡೆ ಮಾಡಿದ ವಿಶ್ವದ ಅಗ್ರ ಹಾಲು ಸಂಸ್ಕಾರಕಗಳ ಪಟ್ಟಿಯಲ್ಲಿ ಅಮುಲ್ ಎಂಟನೇ ಸ್ಥಾನ ಪಡೆದಿದೆ.

'ಎಕ್ಸಿಟ್ ದಿ ಡ್ರ್ಯಾಗನ್' ಫೋಸ್ಟ್‌: ಅಮೂಲ್‌ ಅಧಿಕೃತ ಅಕೌಂಟ್‌ ನಿರ್ಬಂಧಿಸಿದ್ದ ಟ್ವಿಟ್ಟರ್

ದೇಶೀಯ ಬ್ರ್ಯಾಂಡ್ ಆಗಿರುವ ಅಮುಲ್ ಕಳೆದ ವರ್ಷದ ಶ್ರೇಯಾಂಕದಿಂದ, ಒಂದು ಶ್ರೇಯಾಂಕ ಏರಿಕೆಗೊಂಡಿದೆ. 2018 ರಲ್ಲಿ ಇದು ಜಾಗತಿಕವಾಗಿ 9 ನೇ ಅತಿದೊಡ್ಡ ಹಾಲು ಸಂಸ್ಕಾರಕವಾಗಿ ಹೊರಹೊಮ್ಮಿತು.

2012 ರಲ್ಲಿ ಅಮುಲ್ 18 ನೇ ಸ್ಥಾನದಲ್ಲಿತ್ತು, ಆದರೆ 8 ವರ್ಷಗಳಲ್ಲಿ ಇದು 10 ಸ್ಥಾನ ಬಡ್ತಿ ಪಡೆದು 8ನೇ ಸ್ಥಾನಕ್ಕೆ ಜಿಗಿದಿದೆ. ಅಮುಲ್ ಎರಡು ವರ್ಷಗಳ ನಂತರ ಜಾಗತಿಕವಾಗಿ ಟಾಪ್ 10ನಲ್ಲಿದ್ದ ಅಮೆರಿಕಾ ಡೀನ್ ಫುಡ್ಸ್‌ ಸ್ಥಾನವನ್ನು ಅಲಂಕರಿಸಿದೆ. ಅಮೆರಿಕಾದ ಈ ಸಂಸ್ಥೆಯು 2018ರಲ್ಲಿ ವಿಶ್ವದ ಒಟ್ಟಾರೆ ಹಾಲು ಉತ್ಪಾದನೆಯಲ್ಲಿ ಶೇಕಡಾ 1.1ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿತ್ತು. ಆದರೆ ಈಗ ಕಂಪನಿಯು ದಿವಾಳಿಯಾಗಿದ್ದು, 2020 ರ ರ್ಯಾಂಕಿಂಗ್‌ನಿಂದ ಹೊರಬಿದ್ದಿದೆ.

ಇದರ ನಡುವೆ ನ್ಯೂಜಿಲೆಂಡ್‌ನ ಫಾಂಟೆರಾ, ಸ್ವಿಟ್ಜರ್‌ಲ್ಯಾಂಡ್‌ನ ನೆಸ್ಲೆ ಡೈರಿ, ಕೆನಡಾದ ಸಪುಟೊ, ಅಮೆರಿಕಾದ ಡೈರಿ ಫಾರ್ಮರ್ಸ್ ಆಫ್ ಅಮೇರಿಕಾ, ಫ್ರಾನ್ಸ್ನ ಗ್ರೂಪ್ ಲ್ಯಾಕ್ಟಾಲಿಸ್, ನೆದರ್‌ಲ್ಯಾಂಡ್ಸ್‌ನ ಫ್ರೈಸ್‌ಲ್ಯಾಂಡ್ ಕ್ಯಾಂಪಿನಾ ಮತ್ತು ಡೆನ್ಮಾರ್ಕ್‌ನ ಅರ್ಲಾ ಫುಡ್ಸ್ ಅಗ್ರ 20ರಲ್ಲಿ ಸ್ಥಾನ ಪಡೆದಿವೆ.

English summary
Amul is ranked 8th in the list of top 20 global dairy processors released by the IFCN
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X