ಅಮೆಜಾನ್ ಪ್ರೈಂ ಬಳಕೆದಾರರಿಗೆ ಭರ್ಜರಿ ಆಫರ್
ಬೆಂಗಳೂರು, ಜೂನ್ 22: ಅಮೆಜಾನ್ ಇಂಡಿಯಾ ಬಳಕೆದಾರರಿಗಾಗಿ ಭರ್ಜರಿ ಆಫರ್ ನೀಡುತ್ತಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರತಿ ತಿಂಗಳ ಚಂದಾದಾರಿಕೆ ನೀಡುತ್ತಿದೆ.
ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯದ ಗ್ರಾಹಕರು ಇನ್ಮುಂದೆ ಪ್ರತಿ ತಿಂಗಳಿಗೆ 129 ರೂಪಾಯಿ ನೀಡಿ, ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯ ನೀಡಿ ಚಂದದಾರರಾಗಬಹುದು.
ಈ ಹಿಂದೆ ಅಮೆಜಾನ್ ಕೇವಲ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ತಿಂಗಳ ಚಂದದಾರರಾಗುವ ಗ್ರಾಹಕರಿಗೆ ದಿನಾಂಕ ಮುಗಿಯಲು ಮೂರು ದಿನವಿರುವ ಮೊದಲು ಕಂಪನಿ ಮಾಹಿತಿ ನೀಡಲಿದೆ. ಮುಂದಿನ ತಿಂಗಳ ಹಣ ಪಾವತಿ ಮಾಡಿದರೆ, ಚಂದಾದಾರತ್ವ ಮುಂದುವರೆಯಲಿದೆ. ಹಣ ನೀಡದ ಚಂದಾದಾರತ್ವವನ್ನು ರದ್ದು ಕೂಡ ಮಾಡಬಹುದಾಗಿದೆ.

ಚಂದಾದಾರರಿಗೆ ಅಮೆಜಾನ್ ವಿಡಿಯೋ ಹಾಗೂ ಮ್ಯೂಸಿಕ್ ಕೂಡ ಸಿಗಲಿದೆ. ಅಮೆಜಾನ್ ಜುಲೈ 2016 ರಿಂದ ಅಮೆಜಾನ್ ಪ್ರೈಂ ಸೌಲಭ್ಯ ಶುರು ಮಾಡಲಿದೆ. ಆರಂಭದಲ್ಲಿ 499 ರೂಪಾಯಿಯಿದ್ದ ವಾರ್ಷಿಕ ಚಂದಾದಾರತ್ವ ಈಗ 999 ರೂಪಾಯಿಯಾಗಿದೆ.
ಗಾನಾ, ಸಾವ್ನ್, ಗೂಗಲ್ ಪ್ಲೇ ಮ್ಯೂಸಿಕ್, ಆಪಲ್ ಮ್ಯೂಸಿಕ್ ಜತೆಗೆ ಅಮೇಜಾನ್ ಪ್ರೈಮ್ ಮ್ಯೂಸಿಕ್ ಸ್ಪರ್ಧಿಸುತ್ತಿದೆ. 1,050, 1.020, 1,200 ಹಾಗೂ 1,400 ರು ವಾರ್ಷಿಕ ಚಂದಾದಾರರಾಗಬಹುದು.
ಸದ್ಯಕ್ಕೆ ಟಿ ಸೀರೀಸ್, ಟಿಪ್ಸ್ ಮ್ಯೂಸಿಕ್ ಹಾಗೂ ಸೋನಿ ಮ್ಯೂಸಿಕ್ ಜತೆ ಅಮೆಜಾನ್ ಪ್ರೈಮ್ ಕೈಜೋಡಿಸಿದೆ.












Click it and Unblock the Notifications