Amazon, Microsoft, Google: ಕೇವಲ 2 ತಿಂಗಳಲ್ಲಿ 417 ಕಂಪನಿಗಳು ಕಿತ್ತುಹಾಕಿದ್ದು ಎಷ್ಟು ಲಕ್ಷ ನೌಕರರನ್ನು ಗೊತ್ತೇ? ಅಂಕಿಅಂಶ
2022 ಹಾಗೂ 2023ನೇ ವರ್ಷಗಳು ನೌಕರರಿಗೆ ಕೆಟ್ಟ ಸುದ್ದಿಗಳನ್ನೇ ಕೊಡುತ್ತಿವೆ. ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಕೇವಲ ಎರಡು ತಿಂಗಳಲ್ಲಿ, 417 ಕ್ಕೂ ಹೆಚ್ಚು ಕಂಪನಿಗಳು ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಕೆಲಸದಿಂದ ಕಿತ್ತುಹಾಕಿವ
ಬೆಂಗಳೂರು, ಫೆಬ್ರವರಿ 28: 2022 ಹಾಗೂ 2023ನೇ ವರ್ಷಗಳು ನೌಕರರಿಗೆ ಕೆಟ್ಟ ಸುದ್ದಿಗಳನ್ನೇ ಕೊಡುತ್ತಿವೆ. ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಉದ್ಯೋಗಿಗಳು ಜಗತ್ತಿನಾದ್ಯಂತ ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಕೇವಲ ಎರಡು ತಿಂಗಳಲ್ಲಿ, 417 ಕ್ಕೂ ಹೆಚ್ಚು ಕಂಪನಿಗಳು ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಕೆಲಸದಿಂದ ಕಿತ್ತುಹಾಕಿವೆ.
ಅಮೆಜಾನ್, ಮೈಕ್ರೋಸಾಫ್ಟ್, ಗೂಗಲ್, ಸೇಲ್ಸ್‌ಫೋರ್ಸ್ ಮತ್ತು ಇತರ ಕಂಪನಿಗಳು ಜನವರಿಯಲ್ಲಿ ಸುಮಾರು 1 ಲಕ್ಷ ಟೆಕ್ ಉದ್ಯೋಗಿಗಳನ್ನು ಕೆಲಸದಿಂದ ವಜಾಗಳಿಸಿವೆ. ಒಟ್ಟಾರೆಯಾಗಿ, 2022 ರಲ್ಲಿ ಮತ್ತು ಈ ವರ್ಷದ ಫೆಬ್ರವರಿವರೆಗೆ 3 ಲಕ್ಷಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಕಳೆದ ಎರಡು ತಿಂಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. 1,046 ಟೆಕ್ ಕಂಪನಿಗಳು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆಯಲ್ಲಿವೆ. ಬಿಗ್ ಟೆಕ್ ಕಂಪನಿಗಳಿಂದ ಹಿಡಿದು ಸ್ಟಾರ್ಟ್‌ಅಪ್‌ಗಳ ವರೆಗೆ ವಜಾಗಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. 2022 ರಲ್ಲಿ 1,61 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಲೇಆಫ್ಸ್ ಟ್ರ್ಯಾಕಿಂಗ್ ಸೈಟ್ Layoffs.fyi ಡೇಟಾ ಮಾಹಿತಿ ನೀಡಿದೆ.
ವೆಚ್ಚ ಕಡಿತ ಕ್ರಮಗಳ ಭಾಗವಾಗಿ, ಹಲವಾರು ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುವುದನ್ನು ಮುಂದುವರೆಸಿವೆ. ಈ ಕ್ರಮದ ಹಿಂದೆ ವಿವಿಧ ಕಾರಣಗಳನ್ನು ಉಲ್ಲೇಖಿಸಲಾಗಿದೆ. ಅತಿಯಾದ ನೇಮಕ, ಅನಿಶ್ಚಿತ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳು, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಸಂಕಷ್ಟಗಳನ್ನು ಉಲ್ಲೇಖಿಸಲಾಗಿದೆ.
ಯಾವ ಕಂಪನಿಗಳು?
ಮೆಟಾ: ವರದಿಗಳ ಪ್ರಕಾರ, ಮೆಟಾ (ಹಿಂದೆ ಫೇಸ್‌ಬುಕ್) ಮತ್ತೊಂದು ದೊಡ್ಡ ಸುತ್ತಿನ ವಜಾಗೊಳಿಸುವಿಕೆಗೆ ಸಿದ್ದವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದಂತೆಯೇ ಈ ಭಾರಿಯೂ ವಜಾಗೊಳಿಸುವಿಕೆಯನ್ನು ಘೋಷಿಸಲಾಗುತ್ತದೆ ಎಂದು ತಿಳಿದುಬಂದಿದೆ. ಮೆಟಾ ಕಂಪನಿಯು ಇತ್ತೀಚಿನ ಸುತ್ತಿನ ಕಾರ್ಯಕ್ಷಮತೆಯ ವಿಮರ್ಶೆಗಳಲ್ಲಿ ಸಾವಿರಾರು ಉದ್ಯೋಗಿಗಳಿಗೆ 'ಸಬ್‌ಪಾರ್ ರೇಟಿಂಗ್‌ಗಳನ್ನು' ನೀಡಿದೆ ಎಂದು ವರದಿಯಾಗಿದೆ ಇದು ಕಂಪನಿಯಲ್ಲಿ ಹೆಚ್ಚಿನ ವಜಾಗೊಳಿಸುವಿಕೆಗೆ ವೇದಿಕೆಯಾಗಿದೆ.

ಎರಿಕ್ಸನ್: ಸ್ವೀಡಿಷ್ ಟೆಲಿಕಾಂ ಗೇರ್-ತಯಾರಕ ಎರಿಕ್ಸನ್ ಜಾಗತಿಕ ಸ್ಥೂಲ ಆರ್ಥಿಕ ಪರಿಸ್ಥಿತಿಗಳಲ್ಲಿ ವೆಚ್ಚವನ್ನು ಕಡಿತಗೊಳಿಸಲು ಸುಮಾರು 8,500 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
McKinsey & Co: ಜಾಗತಿಕ ಸಲಹಾ ಸಂಸ್ಥೆ McKinsey & Co ಸುಮಾರು 2,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿದೆ.
KPMG: ಮತ್ತೊಂದು ಪ್ರಮುಖ ಸಲಹಾ ಸಂಸ್ಥೆ KPMG ತನ್ನ 2 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದು US ನಲ್ಲಿ ಸುಮಾರು 700 ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.

ಡಿಜಿಟಲ್ ಓಷನ್: ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ ಡಿಜಿಟಲ್ ಓಷನ್ ತನ್ನ ಉದ್ಯೋಗಿಗಳ ಶೇಕಡಾ 11 ರಷ್ಟು ಅಥವಾ ಸುಮಾರು 200 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications