ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 19: ಕೇಂದ್ರ ಸರ್ಕಾರವು ನೂತನ ಭವಿಷ್ಯ ನಿಧಿ (ಪಿಎಫ್) ನೀತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬದಲಾವಣೆ ಮಾಡುತ್ತಾ ಬಂದಿತ್ತು. ಈಗ ಬುಡಕ್ಕೆ ಬೆಂಕಿ ಬಿದ್ದ ಪರಿಣಾಮ ತಣ್ಣೀರು ಹಾಕಿ, ಕಾರ್ಮಿಕರ ಆಕ್ರೋಶದ ಬೆಂಕಿಯಿಂದ ತಾತ್ಕಾಲಿಕವಾಗಿ ಬಚಾವಾಗಿದೆ. ಪಿಎಫ್ ವಿಥ್ ಡ್ರಾ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಬೆಳವಣಿಗೆಗಳ ಬಗ್ಗೆ ವಿವರಣೆ ಇಲ್ಲಿದೆ.

ಲೇಟೆಸ್ಟ್ ಸುದ್ದಿ ಏಪ್ರಿಲ್ 19: ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್ ಒ) ವಿಥ್ ಡ್ರಾ ನಿಯಮಗಳಿಗೆ ಜುಲೈ 31ರ ತನಕ ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಮಂಗಳವಾರ ಸಂಜೆ ಘೋಷಿಸಿದ್ದಾರೆ. ಹೊಸ ನಿಯಮದಲ್ಲಿ ಏನೇ ತಿದ್ದುಪಡಿಯಾದರೂ ಅದು ಆಗಸ್ಟ್ 1, 2016ರಿಂದ ಜಾರಿಗೆ ಬರಲಿದೆ.[ಪಿಎಫ್ ವಿಥ್ ಡ್ರಾ ನಿಯಮಕ್ಕೆ ಜುಲೈ 31ರ ತನಕ ಬ್ರೇಕ್]

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿ ಭತ್ಯೆ (ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. [ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

All you need to know about How New PF withdrawal norms

ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ.

ಪಿಎಫ್ ನಿಯಮಾವಳಿ ಆದೇಶ: ಫೆಬ್ರವರಿ 10, 2016ರಂದು ಪಿಎಫ್ ನಿಯಮಾವಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿತು. ಅದರಂತೆ, ಉದ್ಯೋಗಿಯೊಬ್ಬನು ತಾನು ಇಪಿಎಫ್ ಗೆ ನೀಡುತ್ತಿರುವ ತನ್ನ ಪಾಲಿನ ಮೊತ್ತ(ಬಡ್ಡಿ ಸಮೇತ) ವನ್ನು ಮಾತ್ರ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿತ್ತು. [ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ]

ಉದ್ಯೋಗದಾತರ ಸಂಸ್ಥೆ ಎಪಿಎಫ್ ಗೆ ನೀಡುವ ಪಾಲು ಹಾಗೂ ಅದಕ್ಕೆ ಸಿಗುವ ಬಡ್ಡಿದರ ಎಲ್ಲವೂ 58 ವರ್ಷ(ನಿವೃತ್ತಿ ವಯಸ್ಸು) ವಾದ ಬಳಿಕವಷ್ಟೇ ಉದ್ಯೋಗಿಗೆ ಸಿಗಲಿದೆ ಎನ್ನಲಾಗಿತ್ತು. ಆದರೆ, ಇದಕ್ಕೂ ಮುನ್ನ ಉದ್ಯೋಗಿಯೂ ತನ್ನ ಇಪಿಎಫ್ ತೆರಿಗೆ ಮುಕ್ತ ಮೊತ್ತವನ್ನು ಸಂಪೂರ್ಣವಾಗಿ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿತ್ತು.[ಕಾರ್ಮಿಕರನ್ನು ಕೆರಳಿಸಿದ ಕೇಂದ್ರದ ನೀತಿ ಯಾವುದು?]

ಭವಿಷ್ಯನಿಧಿ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ಏನಿದೆ? : ಇಪಿಎಫ್ ಮೊತ್ತ ಹಾಗೂ ನಿವೃತ್ತಿ ಸಮಯದ ಪಿಎಫ್ ವಿಥ್ ಡ್ರಾ ಎಲ್ಲವೂ ತೆರಿಗೆ ಮುಕ್ತವಾಗಿತ್ತು. ಆದರೆ ಫೆಬ್ರವರಿ 29ರಂದು ಕೇಂದ್ರ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಅವರು ಭವಿಷ್ಯ ನಿಧಿ ವಿಥ್ ಡ್ರಾ ಮೊತ್ತಕ್ಕೆ ತೆರಿಗೆ ಹಾಕುವ ಪ್ರಸ್ತಾವನೆಯನ್ನು ಮಂಡಿಸಿದರು. ಈಗ ಏಪ್ರಿಲ್ 01, 2016ರಿಂದ ಶೇ 60ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ ಎಂದು ನಂತರ ಸ್ಪಷ್ಟನೆ ನೀಡಲಾಯಿತು. [ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ]

ಮಾರ್ಚ್ ತಿಂಗಳಲ್ಲಿ ಕಾರ್ಮಿಕರಿಗೆ ಸಿಹಿ ಸುದ್ದಿ: ಪಿಎಫ್, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುವುದಿಲ್ಲ ಎಂದು ಸರ್ಕಾರ ಘೋಷಿಸಿತು. ಆದರೆ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ಅಡಿಯಲ್ಲಿ ಉಳಿಸಲಾದ ಪೂರ್ತಿ ಮೊತ್ತ ತೆರಿಗೆಗೆ ಒಳಪಡುತ್ತಿತ್ತು. ಆದರೆ, ಈಗ ಏಪ್ರಿಲ್ 01, 2016ರಿಂದ ಶೇ 60ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿತು.[ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

ನೂತನ ಪಿಎಫ್ ನೀತಿಯನ್ನು ಫೆಬ್ರವರಿ 10ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಏಪ್ರಿಲ್ 30ರವರೆಗೆ ಮುಂದೂಡಲಾಗಿತ್ತು. ಈ ನಿರ್ಧಾರದ ವಿರುದ್ಧ ನೌಕರರಿಂದ 'ಆನ್​ಲೈನ್ ಪ್ರಚಾರ ಅಭಿಯಾನ' ನಡೆದಿತ್ತು. ಹೊಸ ನೀತಿಯಲ್ಲಿ 54 ವರ್ಷ ಕೂಡಲೇ ಪಿಎಫ್ ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ, 58 ವರ್ಷ ದಾಟುವ ತನಕ ಕಾಯಬೇಕಿತ್ತು.

ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿಕೆ: ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕರು ಮಾಸಿಕ ಕಂತುಗಳಲ್ಲಿ ಪಾವತಿಸಿದ ಪಿಎಫ್ ಹಣವನ್ನು 58 ವರ್ಷಗಳ ನಂತರ (ನಿವೃತ್ತಿ ನಂತರ) ಹಿಂಪಡೆಯಬೇಕು ಎಂದು ಹೇಳಲಾಗಿತ್ತು. [ವಿಡಿಯೋ : ಎಸ್ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?]

ಆದರೆ, ತೀವ್ರ ವಿರೋಧದ ನಂತರ ಆರೋಗ್ಯದಲ್ಲಿ ತೀವ್ರ ಏರುಪೇರು, ಮನೆ ಕಟ್ಟಲು, ಮಕ್ಕಳ ವೃತ್ತಿಪರ ಉನ್ನತ ವ್ಯಾಸಂಗಕ್ಕಾಗಿ, ಮದುವೆ ಮಾಡಲು ಬೇಕಾದರೆ ಮುಂಚಿತವಾಗಿ ವಿಥ್ ಡ್ರಾ ಮಾಡಿಕೊಳ್ಳುವ ಅವಕಾಶ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿದ್ದಾರೆ.

English summary
Union government first announced complete restriction on the premature withdrawal of retirment fund by an employee. Now after several protest Government today(April 19) kept in abeyance for three more months the proposed move. Here are the are the developments with regards to PF withdrawal case over the past
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X