ಮಾ. 25ರಿಂದ ಏ. 1ರವರೆಗೆ ಬ್ಯಾಂಕುಗಳಿಗೆ ರಜೆ ಇಲ್ಲ
ತೆರಿಗೆ ವಸೂಲಾತಿಗೆ ಯಾವುದೇ ತೊಂದರೆಯಾಗದಿರಲೆಂದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ನವದೆಹಲಿ, ಮಾರ್ಚ್ 24: ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳೂ ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಆಯ್ದ ಕಚೇರಿಗಳಿಗೆ ಮಾ. 25ರಿಂದ ಏ.1ರವರೆಗೆ ಯಾವುದೇ ರಜೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ತಿಳಿಸಿದೆ.
ತೆರಿಗೆ ವಸೂಲಾತಿಗೆ ಯಾವುದೇ ತೊಂದರೆಯಾಗದಿರಲೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮಾ. 25 ರಂದು ಮಾರ್ಚ್ ತಿಂಗಳ ಕೊನೆಯ ಶನಿವಾರ, ಮಾರ್ಚ್ 26 ಭಾನುವಾರ ಹಾಗೂ ಮಾರ್ಚ್ 29ರ ಯುಗಾದಿ ಹಬ್ಬ ಇದೆ. ಈ ದಿನಗಳಲ್ಲಿ ಬ್ಯಾಂಕುಗಳು ರಜೆ ಘೋಷಿಸುವುದರಿಂದಾಗಿ ತೆರಿಗೆ ಸಲ್ಲಿಸುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ ಎಂಬುದನ್ನು ಅರಿತ ಆರ್ ಬಿಐ ಸುಗಮ ವ್ಯವಹಾರಕ್ಕಾಗಿ ಈ ನಿರ್ಧಾರ ಕೈಗೊಂಡಿದೆ.












Click it and Unblock the Notifications