ಸೆ. 10ಕ್ಕೆ ಉದ್ಯಮದಿಂದ ನಿವೃತ್ತಿ ಘೋಷಿಸಿದ ವಿಶ್ವದ ಶ್ರೀಮಂತ ಬ್ಯುಸಿನೆಸ್ ಮ್ಯಾನ್

ಹಾಂಕಾಂಗ್, ಸೆ 8: ಮಗುವೊಂದು ನಡೆಯಲು ಆರಂಭಿಸಿದಾಗ ಹಲವು ಬಾರಿ ಬೀಳುವುದು ಸಹಜ, ಅದೇ ರೀತಿ ಉದ್ಯಮದಲ್ಲಿ ವೈಫಲ್ಯ ಕಂಡರೆನೇ, ಮುಂದೆ ಯಶಸ್ಸುಗಳಿಸಲು ಸಾಧ್ಯವೆಂದಿದ್ದ ವಿಶ್ವದ ಇ-ಕಾರ್ಮಸ್ ದೈತ್ಯ ಆಲಿಬಾಬಾ ಕಂಪೆನಿಯ ಸಹಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಮಾ ಯೂನ್ ಆಲಿಯಾಸ್ ಜ್ಯಾಕ್ ಮಾ, ಸೋಮವಾರ, ಸೆಪ್ಟಂಬರ್ ಹತ್ತರಂದು ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

1999ರಲ್ಲಿ ಆಲಿಬಾಬಾ ಕಂಪೆನಿಯನ್ನು ಹುಟ್ಟುಹಾಕುವ ಮೊದಲು, ಇಂಗ್ಲಿಷ್ ಶಿಕ್ಷಕರಾಗಿದ್ದ ಜ್ಯಾಕ್ ಮಾ, ತನ್ನ ನಿವೃತ್ತಿ ಜೀವನವನ್ನು ಶಿಕ್ಷಣ ಮತ್ತು ಸಾಮಾಜಿಕ ಕೆಲಸಗಳಿಗೆ ಮೀಸಲಿಡುವುದಾಗಿ ಹೇಳಿದ್ದಾರೆ. ಜ್ಯಾಕ್ ಮಾ ಅವರ ನಿವೃತ್ತಿ ನಿರ್ಧಾರ ಚೀನಾ ಉದ್ಯಮ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಶಿಕ್ಷಕನಾಗಿ ಜೊತೆ ಗೈಡ್ ಆಗಿ ಕೆಲಸ ಮಾಡುತ್ತಿದ್ದ ಆಲಿ ಬಾ, ಚೀನಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾಗುವ ಮಟ್ಟಕ್ಕೆ ಬೆಳೆದುಬಂದ ರೀತಿಯಿಂದಾಗಿ, ಚೀನಾದಲ್ಲಿ ಪ್ರಮುಖವಾಗಿ ಯುವಕರ ಪಾಲಿಗೆ ಜ್ಯಾಕ್ ಮಾ ರೋಲ್ ಮಾಡೆಲ್ ಆಗಿದ್ದರು. ಈಗ ಅವರ ನಿವೃತ್ತಿ ನಿರ್ಧಾರ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

Alibaba’s Jack Ma, China’s richest man, to retire from company he co-founded

ನಿವೃತ್ತಿಯ ನಂತರವೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಮುಂದುವರಿದು, ಸೂಕ್ತ ಸಲಹೆಗಳನ್ನು ನೀಡುವುದಾಗಿ ಹೇಳಿರುವ ಜ್ಯಾಕ್ ಮಾ, ನಿವೃತ್ತಿ ಎನ್ನುವುದು ಮನುಷ್ಯನ ಜೀವನದ ಯುಗಾಂತ್ಯವಲ್ಲ, ಹೊಸ ಯುಗಾರಂಭ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ದೇವರ ಜಾಗದಲ್ಲಿ ಜ್ಯಾಕ್ ಮಾ ಫೋಟೋ ಹಾಕಿ ಪೂಜಿಸುವ ಬಹಳಷ್ಟು ಮನೆಗಳು ಚೀನಾದಲ್ಲಿವೆ, ಆ ಮಟ್ಟಿಗೆ ಜನಪ್ರಿಯರಾಗಿರುವ ಮಾ, ಚೀನಾದ ಉದ್ಯಮ ಜಗತ್ತನ್ನೇ ಹೊಸ ದಿಕ್ಕಿಗೆ ಬದಲಾಯಿಸಿದವರು. ಚೀನಾದ ನಂಬರ್ ಒನ್ ಶ್ರೀಮಂತ ವ್ಯಕ್ತಿಯಾಗಿರುವ ಮಾ, ಸುಮಾರು ನಲವತ್ತು ಬಿಲಿಯನ್ ಆಸ್ತಿಯನ್ನು ಹೊಂದಿದ್ದಾರೆ.

ಸೆಪ್ಟಂಬರ್ ಹತ್ತಕ್ಕೆ 54 ವರ್ಷ ತುಂಬುವ ಜ್ಯಾಕ್ ಮಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳಿಂದ ಪ್ರೇರಿತರಾಗಿರುವುದಾಗಿ ಹೇಳಿದ್ದರು. ಭಾರತದ ಟೀ, ಸಾಂಬಾರು ಪದಾರ್ಥಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಮೋದಿ ಅವರ ಕಾಲದಲ್ಲಿ ಭಾರತ ಹಾಗೂ ಚೀನಾದ ನಡುವೆ ಹೆಚ್ಚು ಔದ್ಯೋಗಿಕ ಒಪ್ಪಂದಗಳಿಗೆ ಉತ್ತೇಜನ ನೀಡಲಿದೆ ಎಂದು ಮಾ ತಿಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+