Get Updates
Get notified of breaking news, exclusive insights, and must-see stories!

ಬೆಂಗಳೂರು ಸಂಸ್ಥೆ ರಾಯಭಾರಿಗಳಾದ ಐಶ್-ಅಭಿ

ಬೆಂಗಳೂರು ಮೂಲದ ಟಿಟಿಕೆ ಪ್ರೆಸ್ಟೀಜ್ ಕಂಪನಿಯ ರಾಯಭಾರಿಗಳಾಗಿ ತಾರಾ ಜೋಡಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಆಯ್ಕೆ ಮಾಡಲಾಗಿದೆ. ಮುಂದಿನ ಮೂರು ವರ್ಷ ಈ ದಂಪತಿ ಟಿಟಿಕೆ ಉತ್ಪನ್ನಗಳ ಪರ ಪ್ರಚಾರ ಮಾಡಲಿದ್ದಾರೆ.

ಅಡುಗೆ ಮನೆ ಉಪಯೋಗಿ ಉತ್ಪನ್ನಗಳ ಜಾಹೀರಾತಿನಲ್ಲಿ ಈ ಜೋಡಿ ಕಾಣಿಸಿಕೊಳ್ಳಲಿದ್ದು ಇದಕ್ಕಾಗಿ ವರ್ಷಕ್ಕೆ ಸುಮಾರು 6 ಕೋಟಿ ರು ಸಂಭಾವನೆ ಪಡೆಯುತ್ತಿದ್ದಾರೆ.

ಸಣ್ಣ ಗೂಡಿನಂತಿರುವ ಅಡುಗೆ ಮನೆಯಿಂದ ಹಿಡಿದು ಓಪನ್ ಕಿಚನ್, ಮಾರ್ಡನ್ ಕಿಚನ್ ಹೀಗೆ ವಿವಿಧ ಸ್ತರದ ಅಡುಗೆಮನೆಗಳಿಗೆ ತಕ್ಕಂತೆ ಕುಕ್ಕರ್ ಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರೆಸ್ಟೀಜ್ ಕಂಪೆನಿ ಎತ್ತಿದ ಕೈ.ಈಗ ಪ್ರೆಸ್ಟೀಜ್ ಗೆ ಬಾಲಿವುಡ್ ನ ಖ್ಯಾತ ದಂಪತಿ ಐಶ್ -ಅಭಿ ಸಾಥ್ ನೀಡುತ್ತಿರುವುದು ಕಂಪನಿಗೆ ಹೆಚ್ಚಿನ ಬಲ ತಂದಿದೆ.

ಸದ್ಯಕ್ಕೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ದೀರ್ಘಾವಧಿಗೆ ದಂಪತಿಯನ್ನು ರಾಯಭಾರಿಗಳಾಗಿ ಮಾಡಿಕೊಳ್ಳಲು ನಾವು ಸಿದ್ಧ ಎಂದು ಟಿಟಿಕೆ ಪ್ರೆಸ್ಟೀಜ್ ಕಂಪನಿ ಸಿಇಒ ಚಂದ್ರು ಕಾಲ್ರೊ ಹೇಳಿದ್ದಾರೆ. ಪ್ರೆಷರ್ ಕುಕ್ಕರ್ ಜತೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಅವರ ಚಿತ್ರಗಳನ್ನು ತಪ್ಪದೇ ನೋಡಿ...

ಟಿಟಿಕೆ ಸಿಇಒ ಹೇಳಿಕೆ

ಟಿಟಿಕೆ ಸಿಇಒ ಹೇಳಿಕೆ

ಪ್ರೆಷರ್ ಕುಕ್ಕರ್ ಮಾರುಕಟ್ಟೆಯ ಅಗ್ರಸ್ಥಾನದಲ್ಲಿರುವ ಟಿಟಿಕೆ, ಹೊಸ ವಿನ್ಯಾಸಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಲು ಉದ್ದೇಶಿಸಿದೆ. ಆಕರ್ಷಕ ವಿನ್ಯಾಸ ಹಾಗೂ ಸುಲಭ ಬಳಕೆ ವಿಧಾನ ಉಳ್ಳ ಪರಿಕರಗಳನ್ನೇ ಯುವಜನತೆ ಹೆಚ್ಚು ಇಷ್ಟಪಡುತ್ತಾರೆ.

ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಷೋರೂಮ್ ಗಳಲ್ಲದೆ ಎಲ್ಲಾ ಪ್ರಮುಖ ಮಳಿಗೆಗಳಲ್ಲಿ ಲಭ್ಯವಿರುತ್ತದೆ. ಐಶ್ ಅಭಿ ಕುಕ್ಕರ್ ಹಿಡಿದು ನಿಂತ ಚಿತ್ರಗಳು ನಿಮ್ಮ ಕಣ್ಮನ ಸೆಳೆಯಲಿದೆ ಎಂದು ಚಂದ್ರು ಹೇಳಿದ್ದಾರೆ.
ಮತ್ತೆ ಆಡ್ ನಲ್ಲಿ ಈ ಜೋಡಿ

ಮತ್ತೆ ಆಡ್ ನಲ್ಲಿ ಈ ಜೋಡಿ

ಮನೆ ಅಡುಗೆ ಇಷ್ಟ ಪಡುವ ಐಶ್ವರ್ಯಾ ಹಾಗೂ ಅಭಿಷೇಕ್ ಈ ಹಿಂದೆ ಕೂಡಾ ಜಾಹೀರಾತೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 2009ರಲ್ಲಿ ಲಕ್ಸ್ ಸೌಂದರ್ಯ ಸಾಬೂನು ಪರ ಜಾಹೀರಾತಿನಲ್ಲಿ ಒಟ್ಟಿಗೆ ಅಭಿನಯಿಸಿದ್ದರು.ಈಗ ಟಿಟಿಕೆ ಸಂಸ್ಥೆ ಕ್ರಿಯಾಶೀಲತೆ ಮೆಚ್ಚುಗೆ ಸೂಸಿರುವ ಐಶ್ವರ್ಯಾ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದ್ದಾರೆ.

ಹ್ಯಾಪಿ ಆನಿವರ್ಸರಿ ಬಗ್ಗೆ

ಹ್ಯಾಪಿ ಆನಿವರ್ಸರಿ ಬಗ್ಗೆ

ಬಾಲಿವುಡ್ ಚಿತ್ರ ಹ್ಯಾಪಿ ಆನಿವರ್ಸರಿಯಲ್ಲಿ ನಟಿಸುವ ಬಗ್ಗೆ ಪ್ರಶ್ನಿಸಿದಾಗ ಪ್ರಹ್ಲಾದ್ ಕಾಕ್ಕರ್ ಅವರು ಐಶ್ ಗೆ ಹಳೆ ಸ್ನೇಹಿತ. ಸ್ನೇಹಕ್ಕೆ ಬೆಲೆ ಕೊಟ್ಟು ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದೆವು ಅಷ್ಟೆ ಎಂದು ಅಭಿಷೇಕ್ ಹೇಳಿದರು. ಆದರೆ, ಚಿತ್ರದಲ್ಲಿ ನಟಿಸುವ ಬಗ್ಗೆ ಐಶ್ ಆಗಲಿ, ಅಭಿಯಾಗಲಿ ಏನು ಹೇಳಲಿಲ್ಲ.

ಟಿಟಿಕೆ ಪ್ರೆಸ್ಟೀಜ್ ಬಗ್ಗೆ

ಟಿಟಿಕೆ ಪ್ರೆಸ್ಟೀಜ್ ಬಗ್ಗೆ

1200 ಕೋಟಿ ರು ತೂಗುವ ಟಿಟಿಕೆ ಸಮೂಹದ ಭಾಗವಾಗಿರುವ ಟಿಟಿಕೆ ಪ್ರೆಸ್ಟೀಜ್ ಲಿ. ಭಾರತದ ಅಡುಗೆಮನೆ ಪರಿಕರ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ

ಟಿಟಿಕೆ ಉತ್ಪನ್ನಗಳು

ಟಿಟಿಕೆ ಉತ್ಪನ್ನಗಳು

ಪ್ರೆಷರ್ ಕುಕ್ಕರ್, ನಾನ್ ಸ್ಟಿಕ್ ಕುಕ್ ವೇರ್, ಗ್ಯಾಸ್ ಸ್ಟವ್, ಮಾರ್ಡನ್ ಕಿಚನ್ ಸೆಟ್ ಇವು ಪ್ರೆಸ್ಟೀಜ್ ನ ಪ್ರಮುಖ ಉತ್ಪನ್ನಗಳು. ಪ್ರೆಸ್ಟೀಜ್ ಸ್ಮಾರ್ಟ್ ಕಿಚನ್ ಮಳಿಗೆ ದೇಶದ ಪ್ರಮುಖ ವ್ಯಾಪಾರ ಕೇಂದ್ರಗಳಾಗಿವೆ.

ವಿದೇಶಕ್ಕೂ ತಲುಪಿದೆ

ವಿದೇಶಕ್ಕೂ ತಲುಪಿದೆ

ರೂರ್ಕಿ, ಕೊಯಮತ್ತೂರು ಅಲ್ಲದೆ ಹೊಸೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಟಿಟಿಕೆ, ಯುಕೆಯ ಮೆಯರ್ ಪ್ರೆಸ್ಟೀಜ್ ನ ಸಹಯೋಗದೊಂದಿಗೆ ಪಶ್ಚಿಮ ಏಷ್ಯಾ ಹಾಗೂ ಆಫ್ರಿಕಾದ ಅಡುಗೆಮನೆಗಳನ್ನು ತಲುಪಿದೆ.

ಟಿಟಿಕೆ ಪ್ರೆಸ್ಟೀಜ್ ಹೆಗ್ಗಳಿಕೆ

ಟಿಟಿಕೆ ಪ್ರೆಸ್ಟೀಜ್ ಹೆಗ್ಗಳಿಕೆ

ISO 9001 ಪ್ರಮಾಣ ಪತ್ರ ಪಡೆದ ಭಾರತದ ಪ್ರಥಮ ಅಡುಗೆಪರಿಕರ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಟಿಟಿಕೆ ಪ್ರೆಸ್ಟೀಜ್ ಪಡೆದಿದೆ. ಇದಲ್ಲದೆ ಜರ್ಮನಿಯ PED / CE ಪ್ರಮಾಣ ಪತ್ರ ಕೂಡಾ ತನ್ನದಾಗಿಸಿಕೊಂಡಿದೆ. ಬಿಎಸ್ ಇ ಹಾಗೂ ಎನ್ ಎಸ್ ಸಿ ಸ್ಯೂಚಂಕದಲ್ಲೂ ಪ್ರೆಸ್ಟೀಜ್ ಷೇರುಗಳ ಏರಿಳಿತ ಕಾಣಸಿಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+