ಜನವರಿಯಿಂದ ಒಂದು ಗಂಟೆಯ ವಿಮಾನ ಪ್ರಯಾಣಕ್ಕೆ 2,500 ರು.

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಅಕ್ಟೋಬರ್ 22: ಮುಂದಿನ ಜನವರಿಯಿಂದ ವಿಮಾನಯಾನ ಎಲ್ಲರಿಗೂ ಸಲೀಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಸರಕಾರ ಹೊಸ ಯೋಜನೆಯೊಂದನ್ನು ಪರಿಚಯಿಸಲು ನಿರ್ಧರಿಸಿದೆ. ಅದರ ಪ್ರಕಾರ ಒಂದು ಗಂಟೆ ಅವಧಿಯಲ್ಲಿ ಪೂರ್ಣವಾಗುವ ವಿಮಾನ ಪ್ರಯಾಣಕ್ಕೆ 2,500 ನಿಗದಿ ಮಾಡಿ, ದೇಶದ ಸಣ್ಣ-ಪುಟ್ಟ ನಗರಗಳಿಗೂ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಗೆ 'ಉಡಾನ್' ಎಂದು ಹೆಸರು ನೀಡಲಾಗಿದೆ. ದೇಶದ ಮುಖ್ಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಕಡಿಮೆ ಪ್ರಮಾಣದ ತೆರಿಗೆ ಹಾಕುವುದಕ್ಕೆ ನಿರ್ಧರಿಸಲಾಗಿದೆ. ಉಡಾನ್ ಯೋಜನೆಯಲ್ಲಿ ಮೊದಲಿಗೆ ಬಳಕೆಯಾಗದ ಹಾಗೂ ಅತಿ ಕಡಿಮೆ ಬಳಕೆ ಆಗುತ್ತಿರುವ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗುತ್ತದೆ.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

Airplane

ಆ ನಂತರ ಸಣ್ಣ ನಗರಗಳ ಮಧ್ಯ ಒಂಬತ್ತರಿಂದ ನಲವತ್ತು ಸೀಟಿನ ಸಾಮರ್ಥ್ಯವಿರುವ ಪುಟ್ಟ ವಿಮಾನಗಳು ಹಾರಾಡಲಿವೆ. ಆ ಸೀಟುಗಳ ಸಂಖ್ಯೆ ಪೈಕಿ ಅರ್ಧದಷ್ಟರ ಬೆಲೆ 2,500 ಆಗಲಿದ್ದು, ಉಳಿದವರು ನಿಗದಿತ ದರವನ್ನೇ ಕೊಡಬೇಕಾಗುತ್ತದೆ. ಹೆಲಿಕಾಪ್ಟರ್ ಸೇವೆಗಳೂ ಈ ಯೋಜನೆಯಲ್ಲಿ ಬರುತ್ತವೆ.[ವಿಮಾನಯಾನಿಗಳಿಗೆ 10 ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ]

ಪ್ರಯಾಣದ ದೂರ ಹೆಚ್ಚಾದಂತೆ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಉಡಾನ್ ಯೋಜನೆಯಲ್ಲಿ ಮೊದಲ ವಿಮಾನವು ಮುಂದಿನ ವರ್ಷದ ಜನವರಿಯಲ್ಲಿ ಹಾರಾಟ ಆರಂಭಿಸಲಿದೆ. ಇಂಥ ಯೋಜನೆಯು ಜಗತ್ತಿನಲ್ಲೇ ಮೊದಲ ಬಾರಿ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Air fare will be cheaper from January 2017. A new scheme called 'Udaan' will be introduced by central government. Under the scheme air fare will be reduced.
Please Wait while comments are loading...