AI Model: ತಿಂಗಳಿಗೆ 9 ಲಕ್ಷ ರೂಪಾಯಿ ಗಳಿಸುವ AI ಮಾಡೆಲ್: ಈಕೆ ಸೌಂದರ್ಯ ನೋಡಿ ಬೆರಗಾಗದವರೇ ಇಲ್ಲ...
ಬಾರ್ಸಿಲೋನಾ ನವೆಂಬರ್ 27: ತಂತ್ರಜ್ಞಾನ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇತ್ತೀಚೆಗೆ ಜನರಿಗೆ ಅಚ್ಚರಿ ಮೂಡಿಸುತ್ತಿರುವ ಹೊಸ ತಂತ್ರಜ್ಞಾನವೊಂದು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದು ಎಲ್ಲೆಡೆ ಸುದ್ದಿಯಲ್ಲಿದೆ.
ಅದು ಎಐ (AI). ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್. ಈ AI ದಿನೇ ದಿನೇ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು ದೊಡ್ಡ ಕಂಪನಿಗಳು ಈ ಕೃತಕ ಬುದ್ದಿಮತ್ತೆಯ ಕ್ಷೇತ್ರದಲ್ಲಿ ತುಂಬಾನೇ ಆಸಕ್ತಿ ತೋರುತ್ತಿವೆ. ಹೀಗೆ ಸ್ಪೇನ್‌ನ ಮಾಡೆಲ್ ಕಂಪನಿಯೊಂದು AI ಮಾದರಿಯನ್ನು ಅಭಿವೃದ್ಧಿಪಡಿಸಿದ್ದು ಇದರ ಮೂಲಕ ತಿಂಗಳಿಗೆ ಸುಮಾರು 9 ಲಕ್ಷ ರೂಪಾಯಿ ಗಳಿಸುತ್ತಿದೆ. ಇದರ ನೈಜ ಸೌಂದರ್ಯವನ್ನು ನೋಡಿ ಜನರು ಕೂಡ ಬೆರಗಾಗಿದ್ದಾರೆ.

ಅಷ್ಟಕ್ಕೂ ಏನಿದು ಎಐ?
ಸಾಮಾನ್ಯವಾಗಿ ಹೇಳುವುದಾದರೆ ಈ ಕ್ರಿಯೆಟಿವ್ ಎಐ ತನ್ನ ಬಳಕೆದಾರರಿಗೆ ಪಠ್ಯಗಳು, ಚಿತ್ರಗಳು, ಕವನ, ವಿಡಿಯೋಗಳು, ಆಡಿಯೋಗಳು ಇತ್ಯಾದಿಗಳಂತಹ ವಿಷಯಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ. ಜನರು ತಮ್ಮ ಫೋಟೋಗಳ ಆಧಾರದ ಮೇಲೆ ತಮ್ಮ ಸ್ಟೈಲೈಸ್ಟ್ ಭಾವಚಿತ್ರಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಅನುವು ಮಾಡಿಕೊಡುವ ಸಾಧನಗಳನ್ನು ಹೊಂದಿದೆ.
ಇದನ್ನು ಬಳಸಿಕೊಂಡು ಸ್ಪೇನ್‌ನ ಏಟಾನಾ ಲೋಪೆಜ್ (Aitana Lopez) ಎಂಬ ನೈಜ ವ್ಯಕ್ತಿಯಂತೆ ತೋರುವ ಮಾಡೆಲ್ ಅನ್ನು ರಚಿಸಿದೆ. ಇದು ಎಷ್ಟೊಂದು ನೈಜವಾಗಿದೆ ಅಂದರೆ ಲ್ಯಾಟಿನ್ ಅಮೇರಿಕಾದ ಖ್ಯಾತ ನಟನೊಬ್ಬ ಆಕೆ ಅಸ್ತಿತ್ವದಲ್ಲಿಲ್ಲ ಎಂದು ತಿಳಿದಿದ್ದರೂ ಆಕೆಯನ್ನು ಭೇಟಿಯಾಗುವಂತೆ ಸಂದೇಶ ಕಳುಹಿಸಿದ್ದರಂತೆ. ಕ್ಲೂಲೆಸ್ ಎಂಬ ಸ್ಪೇನ್ ಮೂಲದ ಕಂಪನಿ ಇದನ್ನು ತಯಾರಿಸಿದೆ. ಇದನ್ನು ತಯಾರಿಸುವ ಹಿಂದಿನ ಕಾರಣಗಳನ್ನೂ ಕಂಪನಿ ವಿವರಿಸಿದೆ.
ಏಕೆ ರಚಿಸಲಾಗಿದೆ?
ಯುರೋನ್ಯೂಸ್‌ನೊಂದಿಗೆ ಮಾತನಾಡುತ್ತಾ, ಕ್ಲೂಲೆಸ್ ಅನ್ನು ಸ್ಥಾಪಿಸಿದ ಏಟಾನಾ ಡಿಸೈನರ್ ರೂಬೆನ್ ಕ್ರೂಜ್, ಅದರ ರಚನೆಯ ಹಿಂದಿನ ಕಾರಣಗಳು ಮತ್ತು ಸಂದರ್ಭಗಳನ್ನು ಬಹಿರಂಗಪಡಿಸಿದ್ದಾರೆ. ಕ್ರೂಜ್ ಅವರು (ಕಂಪನಿ) ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಅವರ ಹಲವು ಯೋಜನೆಗಳು ರದ್ದಾಗಿದ್ದವು. ಕಷ್ಟದ ಸಮಯದಲ್ಲಿ ಕಂಪನಿಯನ್ನು ಕಾಪಾಡಿಕೊಳ್ಳಲು ಇದನ್ನು ರಚಿಸಲಾಗಿದೆ. ಹಾಗಾದರೆ ಏಟಾನಾ ಲೋಪೆಜ್ ಎಂಬ ಎಐ ಮಾಡೆಲ್ ರಚನೆಗೂ ಕಂಪನಿ ಕಷ್ಟದ ಸಮಯದಿಂದ ಮೇಲೆ ಬರುವುದಕ್ಕೂ ಏನ್ ಸಂಬಂಧ ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಎಟಾನಾ ಲೋಪೆಜ್ ಹುಟ್ಟಿದ್ದು ಹೀಗೆ?
ರೂಬೆನ್ ಕ್ರೂಜ್ ಅವರು ಅದನ್ನು ವಿಶ್ಲೇಷಿಸಿದಾಗ, ಇದು ಹೆಚ್ಚಾಗಿ ಪ್ರಭಾವಿ ವ್ಯಕ್ತಿಗಳ ತಪ್ಪಿನಿಂದಾಗಿ ಬೆಳಕಿಗೆ ಬಂದಿದೆ. ಏಜೆನ್ಸಿಗಳು ತಮ್ಮ ಬ್ರಾಂಡ್‌ಗಳಿಗೆ ಸಂಪರ್ಕ ಸಾಧಿಸಲು ನಿರ್ಧರಿಸುತ್ತವೆ. ಇದು ಏಟಾನಾ 'ಹುಟ್ಟಿಗೆ' ಕಾರಣವಾಯಿತು. ಅಷ್ಟಕ್ಕೂ ಈ ಏಟಾನಾ ಏನು ಮಾಡುತ್ತದೆ. ಇದರಿಂದ ಆಗುವ ಲಾಭವೇನು.
ನೈಜ ವ್ಯಕ್ತಿಯಂತೆ ತೋರುವ ಮಾಡೆಲ್ ನ ಸುಂದರವಾದ ಫೋಟೋಗಳನ್ನು Instagram ಪುಟಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ. ಆ ಮೂಲಕ ನೋಡುಗರನ್ನು ಸೆಳೆಯುವ AI ಮಾಡೆಲ್ ನಿಂದ ಬ್ರಾಂಡ್‌ಗಳನ್ನು ಪ್ರದರ್ಶಿಸುವ ಮೂಲಕ ಹಣ ಗಳಿಸಲಾಗುತ್ತದೆ. ಜಾಹಿರಾತುಗಳನ್ನು ನೀಡಲಾಗುತ್ತದೆ.
Instagram ನಲ್ಲಿ ಲಕ್ಷಾಂತರ ಅನುಯಾಯಿಗಳು
ಈ AI ಮಾದರಿಯು Instagram ನಲ್ಲಿ 121,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಆಶ್ಚರ್ಯಕರ ಸಂಗತಿ ಅಂದರೆ ಈ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತಜ್ಞರು ವಿವಿಧ ಸ್ಥಳಗಳಲ್ಲಿ ಈ ಮಾದರಿಯನ್ನು ಸೂಪರ್‌ಇಂಪೋಸ್ ಮಾಡುವ ಮೂಲಕ ಮತ್ತು ಇತರ AI ಚಿತ್ರಗಳನ್ನು ಸಂಯೋಜಿಸುವ ಮೂಲಕ ಫೋಟೋಶಾಪ್ ಬಳಸಿ ಏಟಾನಾ ಅವರ ಚಿತ್ರಗಳನ್ನು ರಚಿಸುತ್ತಾರೆ.

ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಈ AI ಮಾಡೆಲ್
ಗುಲಾಬಿ ಕೂದಲಿನ 25 ವರ್ಷ ವಯಸ್ಸಿನ ಏಟಾನಾ ಅವರು ಫಿಟ್‌ನೆಸ್ ಉತ್ಸಾಹಿ ಎಂದು ವಿವರಿಸಲಾಗಿದೆ. ಕ್ರೂಜ್ ಪ್ರಕಾರ, ಅವರು ರಾಜಧಾನಿ ಮ್ಯಾಡ್ರಿಡ್ ನಂತರ ಸ್ಪೇನ್‌ನ ಎರಡನೇ ಅತಿದೊಡ್ಡ ನಗರವಾದ ಬಾರ್ಸಿಲೋನಾದಲ್ಲಿ ಏಟಾನಾ ಸಾಕಷ್ಟು ಜನಪ್ರಿಯತೆ ಪಡೆದಿದೆ. ಇದರಿಂದ ಕ್ರೂಜ್ ಅವರು ಪ್ರತಿ ಜಾಹೀರಾತಿಗೆ 1000 ಯುರೋಗಳನ್ನು ಗಳಿಸುತ್ತಾರೆ. ಅಂದರೆ ಸುಮಾರು 91,000 ರೂಪಾಯಿ. Aitana ಪ್ರತಿ ತಿಂಗಳು 10,000 ಯೂರೋಗಳವರೆಗೆ ಗಳಿಸುತ್ತದೆ. ಅಂದರೆ ಸರಿಸುಮಾರು 9.1 ಲಕ್ಷ ರೂಪಾಯಿ ಆದಾಯ ಇದರಿಂದ ಬರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ
ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಟೀಕೆ ವ್ಯಕ್ತವಾಗಿದೆ. ಆದಾಗ್ಯೂ ಈ ಯೋಜನೆಯಿಂದ ಮಾಡೆಲ್ ಅನ್ನು ಹೆಚ್ಚು ಅಸಭ್ಯವಾಗಿ ತೋರಿಸಲಾಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದಿ ಕ್ಲೂಲೆಸ್ ಹೇಳುವಂತೆ ಇದು 'ನೈಜ ಪ್ರಭಾವಿಗಳು ಮತ್ತು ಬ್ರ್ಯಾಂಡ್‌ಗಳಿಂದ ಈಗಾಗಲೇ ರಚಿಸಲಾದ ಸೌಂದರ್ಯವನ್ನು ಸರಳವಾಗಿ ಅನುಸರಿಸುತ್ತಿದೆ' ಎಂದಿದೆ. ಒಟ್ಟಿನಲ್ಲಿ ಇಂತಹ ಕೃತಕ ಮಾಡೆಲ್‌ಗಳು ಸಾಕಷ್ಟು ಜನಪ್ರಯತೆಯನ್ನು ಪಡೆದಿದ್ದು ಇದರಿಂದ ಸಂಪಾದನೆ ಕೂಡ ಅಷ್ಟೇ ವೇಗವಾಗಿದೆ.












Click it and Unblock the Notifications