ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಯುಕೆಯಲ್ಲೂ ದೋಖಾ

ಲಂಡನ್, ನವೆಂಬರ್ 11: ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಯುನೈಟೆಡ್ ಕಿಂಗ್ಡಮ್ ನಲ್ಲಿ ಇನ್ನು ಐವರು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಭಾರತದಲ್ಲಿ 13 ಸಾವಿರ ಕೋಟಿ ರೂ. ವಂಚನೆಗೆ ಒಳಗಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ (ಪಿಎನ್​ಬಿ) ಬ್ರಿಟನ್​ನಲ್ಲಿ 271 ಕೋಟಿ ರೂ. ವಂಚನೆಯಾಗಿದೆ.

ವಿದೇಶದಲ್ಲಿ ಪಿಎನ್​ಬಿ ಸಹವರ್ತಿಯಾಗಿ ಬ್ಯಾಂಕ್ ಆಗಿರುವ ಪಂಜಾಬ್ ಇಂಟರ್​ನ್ಯಾಷನಲ್ ಲಿಮಿಟೆಡ್​ಗೆ ನಕಲಿ ದಾಖಲೆ ನೀಡಿ ಐವರು ಭಾರತೀಯರು ಮತ್ತು ಒಬ್ಬ ಅಮೆರಿಕ ಪ್ರಜೆ ಮೋಸ ಮಾಡಿದ್ದಾರೆ. ಈ ಐವರ್ ಉನಡೆಸುತ್ತಿರುವ 4 ಕಂಪನಿಗಳಿಂದ ಪಡೆದ ಸಾಲ ಇನ್ನೂ ಚುಕ್ತಾ ಆಗಿಲ್ಲ. ಪಡೆದುಕೊಂಡ ಮೊತ್ತ ಮರುಪಾವತಿ ಮಾಡದೆ ವಂಚಿಸಿದ್ದಾರೆ. ಈ ಐವರ ವಿರುದ್ಧ ಬ್ರಿಟನ್ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗಿದೆ.

After Nirav-Mehul, PNB now lapsed Rs 271 crore in UK

2011 ರಿಂದ 2014ರ ಅವಧಿಯಲ್ಲಿ ಸೌತ್ ಈಸ್ಟ್ರನ್ ಪೆಟ್ರೋಲಿಯಂ ಎಲ್​ಎಲ್​ಸಿ (ಎಸ್​ಇಪಿಎಲ್), ಪೆಸ್ಕೊ ಬೀಮ್ ಯುಎಸ್​ಎ ಮತ್ತು ಇಂಡಿಯಾ ತ್ರಿಶೆ ವಿಂಡ್ ಮತ್ತು ತ್ರಿಶೆ ರಿಸೋರ್ಸ್​ಗೆ ಡಾಲರ್ ರೂಪದಲ್ಲಿ ಸಾಲ ನೀಡಲಾಗಿದೆ.

ಪೆಸ್ಕೊ ಬೀಮ್ ಎನ್ವಿರಾನಮೆಂಟಲ್ ಸೆಲ್ಯೂಷನ್ಸ್ ಕಂಪನಿಯು ತೈಲ ಸಂಸ್ಕರಣೆಗೆ ಅಗತ್ಯವಾದ ಸಲಕರಣೆ ತಯಾರಿಸುತ್ತಿದ್ದು, ತಮಿಳುನಾಡಿನ ಶ್ರೀಪೆರಂಬದೂರು ಮತ್ತು ಅಮೆರಿಕದ ವರ್ಜಿನಿಯಾದಲ್ಲಿ ಘಟಕ ಹೊಂದಿದೆ. ಈ ಕಂಪನಿ 2014ರಲ್ಲಿ ದಿವಾಳಿಯಾಗಿದ್ದು, ಇದರ ಆಸ್ತಿಗಳನ್ನು ತ್ರಿಶೆ ರಿಸೋರ್ಸಸ್​ಗೆ ವರ್ಗಾಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+