Adani Logistics: ಕೇರಳದ ಕಲಾಮಸ್ಸೆರಿಯಲ್ಲಿ ಅದಾನಿ ಲಾಜಿಸ್ಟಿಕ್ಸ್ ಪಾರ್ಕ್‌ಗೆ ಶಿಲಾನ್ಯಾಸ
ಕೇರಳದ ಕಲಾಮಸ್ಸೆರಿಯಲ್ಲಿ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಅದಾನಿ ಲಾಜಿಸ್ಟಿಕ್ಸ್ ಪಾರ್ಕ್‌ನ ಶಿಲಾನ್ಯಾಸದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಕೇರಳ ಸಿಎಂ ಪಿಣರಾಯಿ ವಿಜಯನ್ ಪಾರ್ಕ್ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
'ಇನ್ವೆಸ್ಟ್ ಇನ್ ಕೇರಳ' ಕಾರ್ಯಕ್ರಮದ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಈ ಮಹತ್ವದ ಯೋಜನೆ, ಕೇರಳ ರಾಜ್ಯವನ್ನು ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಶಕ್ತಿ ಕೇಂದ್ರವಾಗಿ ಪರಿವರ್ತಿಸಲು ಮಹತ್ವದ ಬಲ ತುಂಬಲಿದೆ. ವೇಗವಾಗಿ ಕೈಗಾರಿಕಾ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಕೊಚ್ಚಿಯಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಈಗ ಸ್ಥಾಪನೆ ಆಗುತ್ತಿರುವ ಈ ಪಾರ್ಕ್ 70 ಎಕರೆಗಿಂತ ಹೆಚ್ಚು ವಿಸ್ತಾರವಾಗಿದೆ. ಹಾಗೇ ಸಾರಿಗೆ ವೆಚ್ಚ ಕಡಿಮೆ ಮಾಡಿ, "ಜಸ್ಟ್-ಇನ್-ಟೈಮ್" ಕಾರ್ಯಾಚರಣೆಗೆ ಅನುಕೂಲ ಮಾಡಲು ಮತ್ತು ಇ-ಕಾಮರ್ಸ್, FMCG/FMCD, ಔಷಧ, ವಾಹನೋದ್ಯಮ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ಮುಖ್ಯ ಕ್ಷೇತ್ರಗಳಲ್ಲಿ ರಫ್ತು ಸಾಮರ್ಥ್ಯ ಹೆಚ್ಚು ಮಾಡಲು ಈ ಯೋಜನೆಯು ಈಗ ಸಹಕಾರಿ ಆಗಲಿದೆ.

1,500ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಮತ್ತೊಂದು ಕಡೆ ಈ ಸೌಲಭ್ಯ EV ಚಾರ್ಜಿಂಗ್ ಸ್ಟೇಷನ್ಸ್, ಸ್ಮಾರ್ಟ್ ಲಾಜಿಸ್ಟಿಕ್ಸ್ ಹಾಗೂ ಡಿಜಿಟಲ್ ಪ್ಲಾನ್ ಒಳಗೊಂಡಿದ್ದು, ಸ್ಥಿರತೆ ಮತ್ತು ಹೊಸತನ ತಿಳಿಸುತ್ತದೆ. ಈ ಯೋಜನೆಗಾಗಿ 600 ಕೋಟಿ ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದ್ದು, 1,500ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ನಿರೀಕ್ಷೆ ಇದೆ. ಇದು ಸ್ಥಳೀಯ ಉದ್ಯೋಗ, ಕೌಶಲಾಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆ ಉತ್ತೇಜಿಸಿ, ಪೂರೈಕೆ ಸರಪಳಿ ಪರಿಸರದಲ್ಲಿ MSMEಗಳಿಗೆ ಅಂದರೆ ಸಣ್ಣ-ಮಧ್ಯಮ ಉದ್ಯಮಗಳಿಗೆ ಅವಕಾಶ ಸೃಷ್ಟಿಸಲಿದೆ.
ಅತಿದೊಡ್ಡ ಪ್ರಯತ್ನಗಳಲ್ಲಿ ಒಂದಾಗಿದೆ
ಇದೇ ವೇಳೆ ಮಾತನಾಡಿದ ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್‌ನ ನಿರ್ದೇಶಕ & ಸಿಇಒ ಅಶ್ವಾನಿ ಗುಪ್ತಾ ಅವರು, ಕಲಾಮಸ್ಸೆರಿ ಲಾಜಿಸ್ಟಿಕ್ಸ್ ಪಾರ್ಕ್ APSEZ ನ ಬಂದರು-ಕೇಂದ್ರೀಕೃತ ಸಂಸ್ಥೆಯಿಂದ ಸಂಪೂರ್ಣ ಏಕೀಕೃತ ಸಾರಿಗೆ & ಲಾಜಿಸ್ಟಿಕ್ಸ್ ಉದ್ಯಮವಾಗಿ ಪರಿವರ್ತನೆಯ ಮಹತ್ವದ ಘಟ್ಟವಾಗಿದೆ ಎಂದು ವಿವರಿಸಿದ್ದಾರೆ. ಈ ದಾರಿಯಲ್ಲಿ ನಮ್ಮ ಅತಿದೊಡ್ಡ ಪ್ರಯತ್ನಗಳಲ್ಲಿ ಒಂದಾಗಿರುವ ಈ ಯೋಜನೆ, ದಕ್ಷಿಣ ಭಾರತದಲ್ಲಿ ನಮ್ಮ ಲಾಜಿಸ್ಟಿಕ್ಸ್ ಸ್ಥಿತಿರತೆಯನ್ನ ಬಲಪಡಿಸುವಲ್ಲಿ, ಸ್ಥಳೀಯ ತಯಾರಿಕೆ ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸ್ಥಿರತೆ, ಸಂಪರ್ಕ ಮತ್ತು ರಾಷ್ಟ್ರದ ಪ್ರಗತಿಯತ್ತ ಕೊಂಡೊಯ್ಯುವ ವಿಶ್ವದರ್ಜೆ ಮೂಲಸೌಕರ್ಯವನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಕೂಡ ಅವರು ಮಾಹಿತಿ ನೀಡಿದರು.
ಡಿಜಿಟಲ್ ಅನುಭವದ ಮೂಲಕ ಕಾರ್ಯಾಚರಣೆ
ಕೈಗಾರಿಕೆ ಮತ್ತು ಕೊಯರ್ ಸಚಿವರಾದ ಪಿ. ರಾಜೀವ್ ಮಾತನಾಡಿ, ಕಲಾಮಸ್ಸೆರಿ ಲಾಜಿಸ್ಟಿಕ್ಸ್ ಪಾರ್ಕ್ ವಾಣಿಜ್ಯ ಚಟುವಟಿಕೆಗೆ ನಾಂದಿ ಹಾಡುವ, ಸಮುದಾಯ ಸಬಲಗೊಳಿಸುವುದು ಹಾಗೂ ಮಾರುಕಟ್ಟೆ ಸಂಪರ್ಕಿಸುವ ಸ್ಮಾರ್ಟ್, ಸ್ಥಿರ ಮೂಲಸೌಕರ್ಯ ಒದಗಿಸುವ APSEZ ನ ದೃಷ್ಟಿಕೋನ ಪ್ರತಿಬಿಂಬಿಸುತ್ತದೆ ಎಂದರು. ಇದು ಕೇವಲ ಲಾಜಿಸ್ಟಿಕ್ಸ್ ಹಬ್ ಮಾತ್ರವಲ್ಲದೆ, ಬೆಳವಣಿಗೆ ಮತ್ತು ಪ್ರಾದೇಶಿಕ ಪರಿವರ್ತನೆಗೆ ದಿಕ್ಕು ತೋರಿಸುವ ಸಾಧನೆಯಾಗಿದೆ ಎಂದರು. ಕೊಚ್ಚಿಯಲ್ಲಿ APSEZನ ಮೊದಲ ಲಾಜಿಸ್ಟಿಕ್ಸ್ ಪಾರ್ಕ್ ಆಗಿರುವ ಇದು, ಗೇಟ್ ಎಂಟ್ರಿಯಿಂದ ಇನ್ವಾಯ್ಸಿಂಗ್ ತನಕ ಪೂರ್ಣ ಪ್ರಮಾಣದ ಡಿಜಿಟಲ್ ಅನುಭವ ಒದಗಿಸಿ ಶೂನ್ಯ-ಸ್ಪರ್ಶ ಕಾರ್ಯಾಚರಣೆ ಮೂಲಕ ಗ್ರಾಹಕ ಸೌಲಭ್ಯ, ಕಾರ್ಯಾಚರಣೆಯ ಪಾರದರ್ಶಕತೆ ಮತ್ತು ಪೂರೈಕೆ ಸರಪಳಿಯ ನೈಜ-ಕಾಲದ ದೃಶ್ಯಾವಲೋಕನ ಖಚಿತಪಡಿಸುತ್ತದೆ ಎಂದು ತಿಳಿಸಿದರು.












Click it and Unblock the Notifications