ಅಕ್ಷಯ ತೃತೀಯಾ : ಚಿನ್ನ ಖರೀದಿ ಬೇಡ ಎನ್ನಲು 7 ಕಾರಣ
ಯಾವ ಪತ್ರಿಕೆ ನೋಡಿ, ಚಾನಲ್ ನೋಡಿ ಎಲ್ಲ ಕಡೆ ಒಂದೇ ಮಾತು ಅಕ್ಷಯ ತೃತೀಯ ಬಂದಿದೆ ಚಿನ್ನ ಖರೀದಿ ಮಾಡಿ, ಇದನ್ನೆ ಹೊತ್ತುಕೊಂಡು ಆಗಮಿಸುವ ಮುಖಪುಟದ ಜಾಹೀರಾತುಗಳಿಗೂ ಕಡಿಮೆಯೇನಿಲ್ಲ.
ಆದರೆ ಇದಕ್ಕೆಲ್ಲ ತಲೆಯಾಡಿಸಿ, ಕೂಡಿಟ್ಟಿದ್ದ ಒಂದಷ್ಟು ಹಣವನ್ನೋ, ಇಲ್ಲಾ ಸಾಲ ಮಾಡಿ ತಂದ ಹಣವನ್ನೋ ಚಿನ್ನದ ಮೇಲೆ ಹಾಕುವುದು ಔಚಿತ್ಯವೇ? ಉತ್ತರ ಹುಡುಕಿಕೊಳ್ಳಬೇಕಾದೆ.
[ಅಕ್ಷಯ ತೃತೀಯಾ: ಚಿನ್ನ ಖರೀದಿ ಮಾಡಿದವರು ಏನು ಹೇಳಿದರು?]
ಅಕ್ಷಯ ತೃತೀಯಾ ದಿನ ಚಿನ್ನ, ಬೆಳ್ಳಿ ಕೊಳ್ಳುವುದು ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಇಂಥವರನ್ನು ಬುಟ್ಟಿಗೆ ಹಾಕಿಕೊಳ್ಳಲು ಚಿನ್ನ ಬೆಳ್ಳಿ ವ್ಯಾಪಾರಸ್ಥರು ಕೂಡ ಸಿದ್ಧವಾಗಿ ನಿಂತಿರುತ್ತಾರೆ.
ಚಿನ್ನ ಖರೀದಿಸಿ ಎಂದು ಜನರು ನೂರಾರು, ತರಹೆವಾರಿ ಕಾರಣಗಳನ್ನು ನೀಡಬಹುದು. ಆದರೆ ಚಿನ್ನ ಖರೀದಿ ಮಾಡುವುದು ಯಾಕೆ ತರವಲ್ಲ ಎಂಬುದಕ್ಕೆ ನಾವು ಏಳು ಕಾರಣಗಳನ್ನು ನೀಡುತ್ತಿದ್ದೇವೆ. ಗಮನವಿಟ್ಟು ಓದಿ.....
[ಒಂದೇ ಕ್ಲಿಕ್ ನಲ್ಲಿ ವಿವಿಧ ನಗರಗಳ ಚಿನ್ನದ ಬೆಲೆ ತಿಳಿದುಕೊಳ್ಳಿ]

ಕಾರಣ 1: ಯೋಚನೆ ಮಾಡದೇ ಖರೀದಿ
ನೀವು ಚಿನ್ನ ಖರೀದಿಗೆ ಕುಟುಂಬದ ಸಮೇತ ಹೊರಟಿದ್ದೀರಿ. ಯಾಕೆಂದರೆ ಅಕ್ಷಯ ತೃತೀಯ! ಇಲ್ಲಿ ನೀವು ಯಾವುದೇ ಯೋಚನೆ ಮಾಡದೆ ಕೇವಲ ಅಕ್ಷಯ ತೃತೀಯ ಎಂಬ ಏಕೈಕ ಕಾರಣಕ್ಕೆ ಬಂಗಾರ ಖರೀದಿ ಮಾಡುತ್ತೀರಿ.

ಕಾರಣ 2: ನಷ್ಟವಾದರೆ ಯಾರು ಜವಾಬ್ದಾರಿ?
ನೀವು ಒಂದು ಮೊತ್ತದ ಚಿನ್ನ ಖರೀದಿ ಮಾಡುತ್ತೀರಿ. ಅದರ ಬೆಲೆ ನಿರಂತರವಾಗಿ ಏರಲಿ ಎಂದು ಭಾವಿಸುತ್ತೀರಿ. ನಂತರ ಬೆಲೆ ಇಳಿದರೆ ಯಾರೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ.

ಕಾರಣ 3: ಮನೆ ಕಟ್ಟಲು ಸಾಲ ಮಾಡ್ತೀರಾ?
ಈಗಾಗಲೇ ಚಿನ್ನ ನಿಮ್ಮ ಹಣದ ಉಳಿತಾಯದ ಶೇ. 10 ಪಾಲನ್ನು ಆವರಿಸಿದೆ. ಈಗ ಮತ್ತಷ್ಟು ಹಣವನ್ನು ಇದರ ಮೇಲೆ ಹೂಡಿಕೆ ಮಾಡಿದರೆ ಮನೆ ಕಟ್ಟಲು ಸಾಲ ಮಾಡಬೇಕಾದೀತು!

ಕಾರಣ 4: ದಿಢೀರ್ ಮೋಹ ಯಾಕೆ ಬಂತು?
ನೀವು ಒಂದೇ ಒಂದು ಕಾರಣಕ್ಕೆ ಚಿನ್ನ ಖರೀದಿ ಮಾಡುತ್ತಿದ್ದೀರಿ. ನಿಮ್ಮ ಸ್ನೇಹಿತರೋ ಅಥವಾ ದಲ್ಲಾಳಿ ಹೇಳಿದ ಮಾತ್ರಕ್ಕೆ ಚಿನ್ನದ ಮೇಲೆ ದಿಢೀರ್ ಎಂದು ಮೋಹ ಬಂದಿದೆ ಅಲ್ಲವೇ?

ಕಾರಣ 5: ಬೆಲೆ ಏರಿಕೆಗೂ ಇದು ಕಾರಣ
ಚಿನ್ನ ಖರೀದಿ ಮಾಡಿದ ನಂತರ ಉಳಿತಾಯ, ದೇಶದ ಅರ್ಥ ವ್ಯವಸ್ಥೆ ಬಗ್ಗೆ ಮಾತನಾಡಲು ನೀವು ಮರೆಯುವುದಿಲ್ಲ. ಆದರೆ ದೇಶದ ಅರ್ಥ ವ್ಯವಸ್ಥೆಯ ಕಲ್ಪನೆ ನಮಗೆ ಗೊತ್ತಿರುವುದಿಲ್ಲ! ಚಿನ್ನಾಭರಣದ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಹಣ ಹೂಡಿಕೆ ಮಾಡುತ್ತಿರುವುದು ಬೆಲೆ ಏರಿಕೆಗೂ ಕಾರಣವಾಗುತ್ತದೆ ಎಂಬುದನ್ನು ಒಂದು ಕ್ಷಣ ತಿಳಿದುಕೊಳ್ಳಿ.

ಕಾರಣ 6: ನಿಮ್ಮ ಆಸ್ತಿಯೇನು ಹೆಚ್ಚಾಗಲ್ಲ
ಚಿನ್ನ ನಿಮ್ಮ ಆಸ್ತಿಯನ್ನು ಹೆಚ್ಚಳ ಮಾಡುತ್ತದೆ ಎಂದು ನಂಬಿದ್ದರೆ ಅದರಿಂದ ಹೊರಬನ್ನಿ. ಚಿನ್ನ ನಿಮ್ಮ ಆಸ್ತಿ ಹೆಚ್ಚು ಮಾಡಲ್ಲ. ಬದಲಾಗಿ ಸಂರಕ್ಷಣೆ ಮಾಡುತ್ತದೆ ಅಷ್ಟೇ.

ಕಾರಣ 7: ಜೋಪಾನವಾಗಿ ಹೆಜ್ಜೆ ಇಡಿ
ಚಿನ್ನ ಹಣದುಬ್ಬರ ತಡೆಗೆ ನೆರವಾಗುತಯ್ತದೆ ಎಂದು ಹಲವರು ನಂಬಿದ್ದಾರೆ. ಆದರೆ ಅಂಕಿ ಅಂಶಗಳು ಹೇಳುವುದೇ ಬೇರೆ. ಷೇರು ಮಾರುಕಟ್ಟೆ ಸೂಚ್ಯಂಕಕ್ಕೂ, ಚಿನ್ನದ ಬೆಲೆ ಏರಿಲೆ ಸೂಚ್ಯಂಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮಾರುಕಟ್ಟೆಯ ಆಳ-ಅರಿವನ್ನು ತಿಳಿದುಕೊಂಡು ಹೆಜ್ಜೆ ಇಡುವುದೇ ಉತ್ತಮ.

ಹಿಂದಿನ ಸಾಧನೆ ಲೆಕ್ಕ ಹಾಕೋಣ
ಕಳೆದ 33 ವರ್ಷಗಳಲ್ಲಿ ಚಿನ್ನ ಏನು ಸಾಧನೆ ಮಾಡಿದೆ ಎಂಬುದನ್ನು ಲೆಕ್ಕ ಹಾಕಿದೆರೆ ಹೂಡಿಕೆ ಮಾಡಬೇಕೋ, ಬಿಡಬೇಕೋ ಎಂಬ ಬಗ್ಗೆ ತೀರ್ಮಾನಕ್ಕೆ ಬರಬಹುದು. ಚಿನ್ನ ಶೇ. 12 ರಿಟರ್ನ್ಸ್ ತಂದು ಕೊಟ್ಟಿದ್ದರೆ, ಷೇರುಗಳಿ ಶೇ. 16 ರಿಟರ್ನ್ಸ್ ತಂದುಕೊಟ್ಟಿವೆ.

ಹೂಡಿಕೆ ಮಾಡೋದು ನಿಮಗೆ ಬಿಟ್ಟಿದ್ದು
1979 ರಲ್ಲಿ ಚಿನ್ನದ ಮೇಲೆ 100 ರೂ. ಹೂಡಿಕೆ ಮಾಡಿದ್ದರೆ ಇಂದು ಅದು 4,300 ರು. ಆಗಿದೆ. ಅದೇ ಅಂದು ನೀವು ಷೇರು ಮಾರುಕಟ್ಟೆಯ ಮೇಲೆ 100 ರು. ಹೂಡಿಕಡ ಮಾಡಿದ್ದರೆ ಇಂದು 13,700 ರು ಆಗಿದೆ.

ಖರೀದಿ ಮಾಡಲೇಬೇಡಿ ಎಂದು ಹೇಳುತ್ತಿಲ್ಲ
ಇದನ್ನೆಲ್ಲಾ ಇಟ್ಟುಕೊಂಡು ಚಿನ್ನ ಖರೀದಿ ಒಳ್ಳೆಯದಲ್ಲ ಎಂಬುದು ನಮ್ಮ ಅಭಿಪ್ರಾಯವಲ್ಲ. ಆದರೆ ಹೂಡಿಕೆ ದೃಷ್ಟಿಯಿಂದ ಚಿನ್ನದ ಮೇಲೆ ಹೂಡಿಕೆ ಮಾಡುವುದು ಸರಿಯಲ್ಲ.

ಹೆಂಡತಿ ಬಿಡಬೇಕಲ್ಲ
ಸರಿ, ನೀವು ಚಿನ್ನ ಖರೀದಿ ಮಾಡಿ ಅಥವಾ ಬಿಡಿ ನಿಮ್ಮ ತಾಯಿ ಅಥವಾ ಹೆಂಡತಿ ಚಿನ್ನಾಭರಣ ಮಳಿಗೆಗೆ ನಿಮ್ಮನ್ನು ಎಳೆದುಕೊಂಡು ಹೋಗುವುದು ಶತಸಿದ್ಧ. ಈ ಹಳದಿ ಲೋಹದ ವ್ಯಾಮೋಹವೇ ಅಷ್ಟು ಎಂದು ತಿಳಿದುಕೊಂಡು ಸುಮ್ಮನಾಗಬೇಕು.












Click it and Unblock the Notifications