ಐಬಿ ರಿಯಲ್ ಎಸ್ಟೇಟ್ ಒಂದೇ ದಿನ ಶೇ 40ರಷ್ಟು ಏರಿಕೆ-ಇನ್ ಸೈಡ್ ಸ್ಟೋರಿ

By: ಕೆಜಿ ಕೃಪಾಲ್
Subscribe to Oneindia Kannada

ಸಾಮಾನ್ಯವಾಗಿ ನಾನು ಬರೆದ ಅಂಕಣಗಳಿಗೆ ಓದುಗರು ಪ್ರತಿಕ್ರಿಯಿಸುವುದು "ಏಕೆ ನೀವು ಲಾಂಗ್ ಟರ್ಮ್ ಇನ್ವೆಸ್ಟ್ ಮೆಂಟ್ ಗೆ ಪ್ರೋತ್ಸಾಹಿಸುವುದಿಲ್ಲ" ಎಂಬ ಪ್ರಶ್ನೆಯೊಂದಿಗೆ. ಇದಕ್ಕೆ ಏಪ್ರಿಲ್ 17ರ ಸೋಮವಾರದಂದು ಪೇಟೆಯಲ್ಲಿ ಕೆಲವು ಷೇರುಗಳು ಚಲಿಸಿದ, ತೋರಿದ ಏರಿಳಿತಗಳು ಉತ್ತರವಾಗಬಹುದು.

ದಿನದ ಆರಂಭದಿಂದಲೂ ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಕಂಪೆನಿಯ ಷೇರು ಏರಿಕೆ ಕಾಣಲಾರಂಭಿಸಿತು. ಇದಕ್ಕೆ ಕಾರಣ ಈ ಕಂಪೆನಿಯು ಗೃಹ ನಿರ್ಮಾಣ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಚಟುವಟಿಕೆಯನ್ನು ಬೇರ್ಪಡಿಸಿ ಪ್ರತ್ಯೇಕ ಕಂಪೆನಿಗಳನ್ನಾಗಿಸುವ ಪ್ರಕ್ರಿಯೆ. ಈ ರೀತಿಯ ಸುದ್ಧಿಗೆ ಸ್ಪಂದಿಸಿದ ಪೇಟೆಯು ಒದಗಿಸುವ ಲಾಭದ ಅವಕಾಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು ಸೂಕ್ತವೆನ್ನಬಹುದು.[120.22 ಲಕ್ಷ ಕೋಟಿ ತಲುಪಿದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಬಂಡವಾಳ]

40 percent raise in IB Real estate share, Inside story

ಕಾರಣ ಈ ಕಂಪೆನಿಯ ಷೇರಿನ ಬೆಲೆಯೂ 18ನೇ ಏಪ್ರಿಲ್ 2016ರಲ್ಲಿ 54 ರುಪಾಯಿ ಸಮೀಪವಿದ್ದು, ಅದು ವಾರ್ಷಿಕ ಕನಿಷ್ಠವಾಗಿತ್ತು. ಸರಿಯಾಗಿ ಒಂದು ವರ್ಷದ ಸಮಯದಲ್ಲಿ ರು 150.90ರ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದೆ. ಇದರಲ್ಲೇನು ವಿಶೇಷ ಎನ್ನಬಹುದಲ್ಲವೇ?

40 percent raise in IB Real estate share, Inside story

ಇದರ ವಿಶೇಷವೆಂದರೆ ವಾರ್ಷಿಕ ಕನಿಷ್ಠ ತಲುಪಿದ ದಿನದಿಂದ ಒಂದು ವರ್ಷದ ಕೊನೆಗೆ ಅಂದರೆ ಏಪ್ರಿಲ್ 17ರ ಸೋಮವಾರದಂದು ಒಂದೇ ದಿನ ಶೇ 42ರಷ್ಟು ಏರಿಕೆ ದಾಖಲಿಸಿದೆ. ಇದು ಖಂಡಿತ ಸಹಜ ಚಟುವಟಿಕೆಯಲ್ಲ. ಈ ಏರಿಕೆಯ ಪ್ರಭಾವವು ತಾತ್ಕಾಲಿಕವಾಗಿದ್ದು, ಈ ರಭಸದ ಏರಿಕೆಯು ಭಾರಿ ಪ್ರಮಾಣದ ಮಾರಾಟಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಅಂದಹಾಗೆ ಈ ಕಂಪೆನಿಯು 2014ರಿಂದ ಲಾಭಾಂಶ (ಡಿವಿಡೆಂಡ್) ಕೂಡ ನೀಡಿಲ್ಲ.

40 percent raise in IB Real estate share, Inside story

ರಿಯಲ್ ಎಸ್ಟೇಟ್ ವಲಯದ ಘಟಾನುಘಟಿ ಕಂಪೆನಿಗಳು ತಮ್ಮ ಷೇರಿನ ಬೆಲೆಗಳನ್ನು ಸ್ಥಿರವಾಗಿ ಇರಿಸಿಕೊಳ್ಳಲು ಸಾಧ್ಯವಾಗದೆ ಇರುವಾಗ ಕೇವಲ ಡಿ ಮರ್ಜರ್ ಕಾರಣದಿಂದ ಈ ರೀತಿ ಪುಟಿದೇಳುವ ಬೆಳವಣಿಗೆಯು ಡೆರಿವೇಟಿವ್ ವಿಭಾಗದಲ್ಲಿನ ವಹಿವಾಟುದಾರರು ತಮ್ಮ ಅನುಕೂಲಕ್ಕಾಗಿ ಪರಿವರ್ತಿಸಿಕೊಳ್ಳಲು ಈ ರೀತಿಯ ಯೋಚನೆ ಮಾಡಿರಲೂಬಹುದು.[ಎಚ್ಚರ, ಏನನ್ನಾದರೂ ಮಾರಲು ಸಿದ್ಧವಿರುವ ಲಾಭಕೋರ ಜಗತ್ತಿದು...]

40 percent raise in IB Real estate share, Inside story

ಈ ಕಂಪೆನಿಯ ಷೇರು ಡೆರಿವೇಟಿವ್ ವಲಯದಲ್ಲಿ ವಹಿವಾಟಿನಿಂದ ಅಮಾನತುಗೊಂಡಿರುವ ಸುದ್ಧಿಯು ಹೆಚ್ಚಿನವರ ಗಮನಕ್ಕೆ ಬಾರದೆ ಇರಲು ಸಾಕು. ಇದರೊಂದಿಗೆ ಭಾರತ್ ಫೈನಾನ್ಷಿಯಲ್ ಇನ್ ಕ್ಲುಷನ್, ಇನ್ ಫೀ ಬೀಮ್ ಮತ್ತು ಜಿಂದಾಲ್ ಸ್ಟಿಲ್ ಅಂಡ್ ಪವರ್ ಕಂಪೆನಿಗಳು ಸಹ ಡೆರಿವೇಟಿವ್ ಪೇಟೆಯಲ್ಲಿ ವಹಿವಾಟಿನಿಂದ ಅಮಾನತುಗೊಂಡಿವೆ.

40 percent raise in IB Real estate share, Inside story

ಈ ಅಮಾನತು ತಾತ್ಕಾಲಿಕವಾಗಿದ್ದು, ಒಂದು ಕಂಪೆನಿಯ ಷೇರು ಮಿತಿ ಮೀರಿದ ಪ್ರಮಾಣದಲ್ಲಿ ಚಟುವಟಿಕೆಯಾಗಿ, ಡೆರಿವೇಟಿವ್ ವಿಭಾಗದಲ್ಲಿ 'ಓಪನ್ ಇಂಟರೆಸ್ಟ್' ಹೆಚ್ಚಾಗಿರುವುದೇ ಈ ಅಮಾನತಿಗೆ ಕಾರಣವಾಗಿರುತ್ತದೆ. ಈ ರೀತಿಯ ಏರಿಕೆಯು ಅಸಹಜ ರೀತಿಯಾಗಿದ್ದು ಅವಕಾಶದ ಲಾಭ ಪಡೆದು ಎನ್ ಕ್ಯಾಶ್ ಮಾಡಿಕೊಂಡಿದ್ದರೆ, ಮುಂದಿನ ದಿನಗಳಲ್ಲಿ ಇದೇ ಕಂಪೆನಿಯ ಷೇರು ಇಳಿಕೆ ಕಂಡಾಗ ಮತ್ತೆ ಕೊಳ್ಳಲೂಬಹುದು. ಕಳ್ಳ ಮತ್ತು ಲಾಭ ಸಿಕ್ಕಾಗ ಹಿಡಿಯಬೇಕು, ಬಿಟ್ಟರೆ ಸಿಕ್ಕದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
40 percent raise in IB Real estate share on asingle day on April 17th, 2017. Here is an inside story about IB Real Estate by market expert and columnist KG Kripal.
Please Wait while comments are loading...