Get Updates
Get notified of breaking news, exclusive insights, and must-see stories!

ವಿದೇಶದಲ್ಲಿ ದುಡಿಯುತ್ತಿರುವವರ ಪೈಕಿ ದಕ್ಷಿಣ ಭಾರತದ ರಾಜ್ಯದವರು ಮುಂಚೂಣಿಯಲ್ಲಿ

ಸಮೀಕ್ಷೆಯೊಂದರಲ್ಲಿ ಕಂಡುಬಂದ ಆಸಕ್ತಿಕರ ಸಂಗತಿಯೊಂದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬಯಲು ಮಾಡಿದೆ. ಅದೇನು ಅಂತೀರಾ? ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ವಿದೇಶಗಳಿಂದ ಬಂದಿರುವ ಒಟ್ಟು ಮೊತ್ತ $ 31.74 ಬಿಲಿಯನ್. ಭಾರತದ ರುಪಾಯಿ ಲೆಕ್ಕದಲ್ಲಿ 2,30,900 ಕೋಟಿ ರುಪಾಯಿ.

ವಿದೇಶದಿಂದ ದೇಶದೊಳಕ್ಕೆ ಬಂದಿರುವ ಒಟ್ಟಾರೆ ಮೊತ್ತವಾದ $ 69 ಬಿಲಿಯನ್ ಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳ ಪಾಲು 46%. ಇನ್ನು ಕೇರಳಕ್ಕೆ ಬಂದಿರುವ ವಿದೇಶಿ ಹಣ $ 13.11 ಬಿಲಿಯನ್ (ಭಾರತದ ರುಪಾಯಿಗಳಲ್ಲಿ 95 ಸಾವಿರ ಕೋಟಿ). ಆ ಮೂಲಕ ದಕ್ಷಿಣದ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿದೆ. ಈ ಅಂಕಿ-ಅಂಶ 2017ರಲ್ಲಿ ಬಯಲಾಗಿರುವುದು.

ಆರ್ ಬಿಐ ಸಮೀಕ್ಷೆ ಬಯಲು ಮಾಡಿರುವ ಮಾಹಿತಿ ಪ್ರಕಾರ ಬಂದಿರುವ $ 69 ಬಿಲಿಯನ್ ಪೈಕಿ 58.7%ನಷ್ಟು ಹಣ ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡಿಗೆ ಬಂದಿದೆ. ಇದರಲ್ಲಿ ಕೇರಳ ಮೊದಲ ಸ್ಥಾನದಲ್ಲಿ (19%) ಇದ್ದರೆ, ಮಹಾರಾಷ್ಟ್ರ (16.7% $11.52 ಬಿಲಿಯನ್), ಕರ್ನಾಟಕ (15% $ 10.35 ಬಿಲಿಯನ್) ನಂತರದ ಸ್ಥಾನಗಳಲ್ಲಿವೆ.

ಉತ್ತರಪ್ರದೇಶ, ಬಿಹಾರದಿಂದ ವಲಸೆ ಹೋಗುವವರು ಹೆಚ್ಚು

ಉತ್ತರಪ್ರದೇಶ, ಬಿಹಾರದಿಂದ ವಲಸೆ ಹೋಗುವವರು ಹೆಚ್ಚು

ಸ್ವತಂತ್ರ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಫಲಿತಾಂಶ ಇದು. ಇನ್ನು ಶ್ರೀಮಂತ ರಾಜ್ಯಗಳಾದ ಕೇರಳ ಹಾಗೂ ಕರ್ನಾಟಕದಿಂದ ವಲಸೆ ಹೋಗುವವರಿಗಿಂತ ಇತರ ಕಡೆಯಿಂದ ವಲಸೆ ಬರುವವರ ಬಗ್ಗೆ ಗಮನ ಸೆಳೆಯಲಾಗಿದೆ. ಉತ್ತರಪ್ರದೇಶ, ಬಿಹಾರದಲ್ಲಿ ಕಡಿಮೆ ಅಥವಾ ಅರೆ ಕೌಶಲ ಇರುವವರು ಗುತ್ತಿಗೆ ಆಧಾರದಲ್ಲಿ ಕಡಿಮೆ ಆದಾಯಕ್ಕೆ ವಲಸೆ ಹೋಗುತ್ತಿದ್ದಾರೆ. 2016-17ರಲ್ಲಿ ಒಟ್ಟಾರೆ ವ್ಯವಹಾರ ನಡೆದಿರುವ ಹಣದಲ್ಲಿ ಈ ಎರಡು ರಾಜ್ಯಗಳ (ಉತ್ತರಪ್ರದೇಶ ಹಾಗೂ ಬಿಹಾರ) ಪಾಲು 4.4% ಎನ್ನಲಾಗಿದೆ.

$ 69 ಬಿಲಿಯನ್ ದೇಶದೊಳಕ್ಕೆ ಬಂದಿರುವ ಮೊತ್ತ

$ 69 ಬಿಲಿಯನ್ ದೇಶದೊಳಕ್ಕೆ ಬಂದಿರುವ ಮೊತ್ತ

ಕೌಶಲ ಇರುವವರು, ಅರೆ ಕೌಶಲ ಅಥವಾ ಕೌಶಲವೇ ಇಲ್ಲದ ಭಾರತೀಯರು ಜಗತ್ತಿನಾದ್ಯಂತ ಉದ್ಯೋಗ ಕಂಡುಕೊಂಡಿದ್ದಾರೆ. ಅವರ ಮೂಲಕ 2017ರಲ್ಲಿ ಭಾರತಕ್ಕೆ ಬಂದಿರುವುದು ದಾಖಲಾರ್ಹ ಮೊತ್ತವಾದ $ 69 ಬಿಲಿಯನ್. ಹೀಗೆ ಭಾರತದ ಹೊರಭಾಗದಿಂದ ಬರುತ್ತಿರುವ ಆದಾಯದ ಪೈಕಿ 82%ನಷ್ಟು ಏಳು ದೇಶಗಳಿಂದ ಬರುತ್ತಿವೆ. ಅವುಗಳ ಪಟ್ಟಿ ಹೀಗಿವೆ: ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಸ್ಟೇಟ್ಸ್, ಸೌದಿ ಅರೇಬಿಯಾ, ಕತಾರ್, ಕುವೈತ್, ಯುನೈಟೆಡ್ ಕಿಂಗ್ ಡಮ್ ಹಾಗೂ ಒಮನ್. 90%ಗೂ ಹೆಚ್ಚು ಭಾರತೀಯರು ಗಲ್ಫ್ ಭಾಗದಲ್ಲಿ ಹಾಗೂ ಪೂರ್ವ ಏಷ್ಯಾದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರಲ್ಲಿ ಬಹುತೇಕರು ಅರೆ ಕೌಶಲ ಇರುವವರು ಹಾಗೂ ಕೌಶಲವೇ ಇಲ್ಲದವರು. ಗಲ್ಫ್ ಕೋ ಆಪರೇಷನ್ ಕೌನ್ಸಿಲ್ (ಜಿಸಿಸಿ) ದೇಶಗಳಿಂದ ಬರುತ್ತಿರುವ ಮೊತ್ತವೇ 50%ಗೂ ಹೆಚ್ಚಿದೆ.

ಯಾರು, ಎಷ್ಟು ಹಣವನ್ನು ಭಾರತಕ್ಕೆ ಕಳುಹಿಸುತ್ತಾರೆ?

ಯಾರು, ಎಷ್ಟು ಹಣವನ್ನು ಭಾರತಕ್ಕೆ ಕಳುಹಿಸುತ್ತಾರೆ?

ಅಮೆರಿಕದಲ್ಲಿರುವ ಭಾರತೀಯ ಸಮುದಾಯ ಹೆಚ್ಚಿನ ಕೌಶಲ ಇರುವ ಹಾಗೂ ಅತಿ ಹೆಚ್ಚು ಆದಾಯ ಇರುವ, ಅತಿ ಹೆಚ್ಚು ಕೊಡುಗೆ ನೀಡುವವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದೆ. ದೇಶದೊಳಗೆ ಬರುತ್ತಿರುವ ಒಟ್ಟಾರೆ ಹಣದಲ್ಲಿ ವಿಭಾಗ ಕೂಡ ಮಾಡಲಾಗಿದ್ದು, 70.3% ವ್ಯವಹಾರಗಳು $ 500 ಅಥವಾ ಅದಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡುತ್ತಾರೆ. ಕೇವಲ 2.7%ನಷ್ಟು ಮಂದಿ $ 200 ಅಥವಾ ಅದಕ್ಕಿಂತ ಕಡಿಮೆ ಮೊತ್ತವನ್ನು ವರ್ಗಾವಣೆ ಮಾಡುತ್ತಾರೆ. ಇದರರ್ಥ ದೊಡ್ಡ ಸಂಖ್ಯೆಯ ಕೌಶಲ ಇಲ್ಲದ ದುಡಿಯುವ ವರ್ಗವು ಹೆಚ್ಚಿನ ಸಂಖ್ಯೆಯಲ್ಲಿ ಗಲ್ಫ್ ಕೋ ಆಪರೇಷನ್ ಕೌನ್ಸಿಲ್ ದೇಶಗಳಿಂದ ಹಣ ವರ್ಗಾವಣೆ ಮಾಡಿದೆ.

ದೇಶದೊಳಕ್ಕೆ ಬಂದ ಹಣ ಹೇಗೆ ಖರ್ಚಾಗುತ್ತದೆ?

ದೇಶದೊಳಕ್ಕೆ ಬಂದ ಹಣ ಹೇಗೆ ಖರ್ಚಾಗುತ್ತದೆ?

ಇನ್ನು ವಿದೇಶಗಳಿಂದ ಬಂದ ಹಣದಲ್ಲಿ ಯಾವುದಕ್ಕೆ ಅದರ ಬಳಕೆ ಆಗುತ್ತಿದೆ ಎಂಬುದನ್ನು ಸಹ ಪಟ್ಟಿ ಮಾಡಲಾಗಿದೆ. ಅದರ ವಿವರ ಹೀಗಿದೆ:

ಕುಟುಂಬ ನಿರ್ವಹಣೆ (50% ಗೂ ಹೆಚ್ಚು)

ಬ್ಯಾಂಕ್ ನಲ್ಲಿ ಠೇವಣಿ (20 %)

ಭೂಮಿ, ಆಸ್ತಿ ಹಾಗೂ ಷೇರಿನಲ್ಲಿ ಹೂಡಿಕೆ (8.3%)

ಇನ್ನು ಹಣ ವರ್ಗಾವಣೆಗಾಗಿ ರುಪೀ ಡ್ರಾಯಿಂಗ್ ಅರೇಂಜ್ ಮೆಂಟ್ಸ್ ಗೆ(ಆರ್ ಡಿಎ) ಶೇ 75.2ರಷ್ಟು ಮಂದಿ ಪ್ರಾಶಸ್ತ್ಯ ನೀಡಿದ್ದಾರೆ. ಅದರಲ್ಲೂ ಜಿಸಿಸಿ ದೇಶಗಳಿಂದ ಹಣ ವರ್ಗಾವಣೆ ಆಗುವುದು ಇದೇ ಮಾರ್ಗದಿಂದ. ಆರ್ ಡಿಎ ಮೂಲಕ ವಿವಿಧ ಬ್ಯಾಂಕ್ ಗಳು ವಿದೇಶದಲ್ಲಿನ ವಿನಿಮಯ ಕೇಂದ್ರಗಳ ಮೂಲಕ ಸಲೀಸಾಗಿ ಹಣ ವರ್ಗಾವಣೆ ಮಾಡಬಹುದು. ಬ್ಯಾಂಕ್ ಗಳು ತಕ್ಷಣವೇ ಹಣ ವರ್ಗಾಯಿಸುತ್ತವೆ. ಅಂಥ ಗರಿಷ್ಠ ಇಪ್ಪತ್ತು ಹೊಂದಾಣಿಕೆಯನ್ನು ಒಂದು ಬ್ಯಾಂಕ್ ಜತೆ ಮಾಡಿಕೊಳ್ಳಬಹುದು. ಹಣ ವರ್ಗಾವಣೆಗೆ ಮತ್ತೊಂದು ವಿಧಾನ ಅಂದರೆ 'ಸ್ವಿಫ್ಟ್'. ಆ ನಂತರ ನೇರ ವರ್ಗಾವಣೆ, ಚೆಕ್, ಡ್ರಾಫ್ಟ್ ಇತ್ಯಾದಿ.

ಎಷ್ಟು ಮೊತ್ತದ ಹಣ ವರ್ಗಾವಣೆಗೆ ಎಷ್ಟು ವೆಚ್ಚ?

ಎಷ್ಟು ಮೊತ್ತದ ಹಣ ವರ್ಗಾವಣೆಗೆ ಎಷ್ಟು ವೆಚ್ಚ?

ಬ್ಯಾಂಕ್ ಗಳಲ್ಲಿ ಆರ್ ಡಿಎ ವ್ಯವಸ್ಥೆ ವ್ಯಾಪಕವಾಗಿದೆ. ಹಣ ವರ್ಗಾವಣೆ ಆಪರೇಟರ್ಸ್ ತುಂಬ ಕಡಿಮೆ ಮೊತ್ತವನ್ನು ವರ್ಗಾವಣೆಗಾಗಿ ಪಡೆಯುತ್ತಾರೆ. ಏಕೆಂದರೆ ಅವರು ಕಡಿಮೆ ಮೊತ್ತದ ವರ್ಗಾವಣೆ ಮಾಡುತ್ತಾರೆ ಹಾಗೂ ಅವರ ವೆಚ್ಚದ ಪ್ರಮಾಣ ಕೂಡ ಅದಕ್ಕೆ ಕಾರಣ. ಹಾಗಿದ್ದರೆ ವಿದೇಶದಿಂದ ಭಾರತಕ್ಕೆ ಹಣ ಕಳುಹಿಸುವುದಕ್ಕೆ ಎಷ್ಟು ಹಣ ಖರ್ಚಾಗಬಹುದು ಎಂಬ ಪ್ರಶ್ನೆ ಬರುವುದು ಸಹಜ. $ 200 ಹಣ ವರ್ಗಾವಣೆಗೆ 2013ರಲ್ಲಿ 9.1% ವೆಚ್ಚ ಆಗುತ್ತಿತ್ತು. 2018ರ Q1 ವೇಳೆಯಲ್ಲಿ ಅದು 5.6% ಆಗಿದೆ. ($ 500ಗೆ 4.9% ವೆಚ್ಚ ಆಗುತ್ತಿದ್ದದ್ದು 3.3%ಗೆ ಇಳಿಕೆ ಆಗಿದೆ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+