ಪಿಎಫ್ ಉಳಿತಾಯ ಖಾತೆಯಿಂದ ಅಕ್ರಮವಾಗಿ ಕೋಟ್ಯಂತರ ರೂ ವಿತ್‌ಡ್ರಾ

ಮುಂಬೈ, ಆಗಸ್ಟ್‌ 07: ಪಿಎಫ್ ಉಳಿತಾಯ ಖಾತೆಯಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ವಿತ್‌ಡ್ರಾ ಮಾಡಿಕೊಂಡಿರುವ ಸಂಗತಿ ಮುಂಬೈನಲ್ಲಿ ನಡೆದಿದೆ.

ಮುಂಬೈನ ಪ್ರಾದೇಶಿಕ ಕಚೇರಿಯಲ್ಲಿ ಹೀಗೊಂದು ಸಂಗತಿ ಬೆಳಕಿಗೆ ಬಂದಿದೆ. ಬುಧವಾರ ಕೋಟ್ಯಂತರ ರೂ ಲೆಕ್ಕದಲ್ಲಿ ಪಿಎಫ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಿರುವ ಲೆಕ್ಕಾಚಾರ ದೊರೆತಿದೆ. ಅದರಲ್ಲೂ ಇಪಿಎಫ್‌ ಖಾತೆಯಿಂದ ಭಾಗಶಃ ಹಣ ಪಡೆದಿರುವುದು ಹೆಚ್ಚಾಗಿದೆ. ಸುಮಾರು 37 ಕೋಟಿ ರೂಪಾಯಿ ಹಣವನ್ನು ಭವಿಷ್ಯ ನಿಧಿಯಿಂದ ವಿತ್‌ಡ್ರಾ ಮಾಡಲಾಗಿದೆ.

Recommended Video

      ಭವಿಷ್ಯನಿಧಿ (ಪಿಎಫ್) ಕಚೇರಿಯಿಂದ ಮಹತ್ವದ ಸರ್ಕ್ಯೂಲರ್ | Oneindia Kannada

      ಇಪಿಎಫ್‌ಒ ಸಿಬ್ಬಂದಿ ಅಥವಾ ಹೊರಗಿನವರು ಜೊತೆಗೂಡಿ ಈ ರೀತಿ ಪಿಎಫ್‌ ಖಾತೆಗಳಲ್ಲಿ ವಂಚನೆ ಎಸಗಿದ ಹಲವು ನಿದರ್ಶನಗಳು ಈ ಹಿಂದೆಯೂ ದೊರೆತಿವೆ. ಹೀಗಾಗಿ ಕಚೇರಿಯ ಹಿರಿಯ ಅಧಿಕಾರಿಗಳು ಜಾಗರೂಕರಾಗಿರಬೇಕು. ವಿಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆಗಳನ್ನು ನಡೆಸುತ್ತಿರಬೇಕು ಎಂದು ಮುಂಬೈ ವಲಯ ಇಪಿಎಫ್ ಕಚೇರಿ ಪ್ರಾದೇಶಿಕ ಪಿಎಫ್ ಆಯುಕ್ತ ಗಣೇಶ್ ಕುಮಾರ್ ಹೇಳಿದ್ದಾರೆ.

      ಇಂಥ ವಂಚನೆಗಳು ಮರುಕಳಿಸುವುದನ್ನು ತಡೆಯಲು, ಹಣ ವಿತ್‌ಡ್ರಾ ಮಾಡುವ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಯಾವುದೇ ಸಿಬ್ಬಂದಿ ಪಾತ್ರವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಇತರ ಬಳಕೆದಾರರ ಗುರುತಿನ ಚೀಟಿ ಹಾಗೂ ಪಾಸ್‌ವರ್ಡ್ ಬಳಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮುಂದೆ ಓದಿ...

       ಅಕ್ರಮವಾಗಿ ಹಣ ವಿತ್‌ಡ್ರಾ

      ಅಕ್ರಮವಾಗಿ ಹಣ ವಿತ್‌ಡ್ರಾ

      ಅಕ್ರಮವಾಗಿ ಪಿಎಫ್‌ ಖಾತೆಯಿಂದ ಹಣ ವಿತ್‌ಡ್ರಾ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಾಂಡಿವಲಿಯ ಪ್ರಾದೇಶಿಕ ಇಪಿಎಫ್ ಕಚೇರಿಯಲ್ಲಿ ವಹಿವಾಟು ದಾಖಲೆಗಳನ್ನು ಪರಿಶೀಲಿಸಲು ಇಪಿಎಫ್‌ನ ಆಡಿಟ್ ತಂಡವನ್ನು ಕಳುಹಿಸಲಾಗಿದೆ. ಈ ವಿಷಯದಲ್ಲಿ ಆಡಳಿತಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಆರಂಭಿಸಲಾಗಿದೆ ಎಂದು ಇಪಿಎಫ್‌ಒ ಕಚೇರಿ ದೃಢಪಡಿಸಿದೆ.

       ದೀರ್ಘಕಾಲ ಹಣ ಪಾವತಿ ಇಲ್ಲದ ಖಾತೆಗಳಲ್ಲಿ ವಂಚನೆ

      ದೀರ್ಘಕಾಲ ಹಣ ಪಾವತಿ ಇಲ್ಲದ ಖಾತೆಗಳಲ್ಲಿ ವಂಚನೆ

      ಇಪಿಎಫ್ ಖಾತೆಗಳಿಂದ ಹಣ ಪಡೆಯಲು ನಕಲಿ ಮನವಿಗಳನ್ನು ಸಲ್ಲಿಸಿರುವುದು ತಿಳಿದುಬಂದಿದೆ. ದೀರ್ಘಕಾಲದವರೆಗೆ ಯಾವುದೇ ಹಣ ಪಾವತಿಸಿಲ್ಲದ ಅಥವಾ ಉದ್ಯೋಗಿಯು ವಿದೇಶಕ್ಕೆ ಹೋಗಿರುವ, ಖಾತೆಗಳನ್ನು ಅಪ್‌ಡೇಟ್ ಮಾಡದೇ ಉದ್ಯೋಗಗಳನ್ನು ಬದಲಾಯಿಸಿರುವ ಖಾತೆಯಿಂದ ಹಣ ಪಡೆದ ಸಂಗತಿ ಕಂಡುಬಂದಿದೆ.

       ಖಾತೆಯಿಂದ 25-30% ಹಣ ಪಡೆಯಲಾಗಿದೆ

      ಖಾತೆಯಿಂದ 25-30% ಹಣ ಪಡೆಯಲಾಗಿದೆ

      ಇಪಿಎಫ್‌ ಖಾತೆಗಳಲ್ಲಿನ 25-30% ಹಣವನ್ನು ಹಿಂಪಡೆಯಲಾಗಿದೆ ಮತ್ತು NEFT ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ವರ್ಗಾಯಿಸಲಾಗಿದೆ. ಸಾಮಾಜಿಕ ಭದ್ರತಾ ಸಹಾಯಕರು ಸೇರಿದಂತೆ ಕಿರಿಯ ಹಾಗೂ ಕ್ಲೆರಿಕಲ್ ಮಟ್ಟದ ಅಧಿಕಾರಿಗಳು ಕೂಡ ಇದಕ್ಕೆ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

      ಈ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಮುಂಬೈನ ಇಪಿಎಫ್ ಕಚೇರಿಯಲ್ಲಿ ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿ ವಿತ್‌ಡ್ರಾ ಪ್ರಕ್ರಿಯೆಗಳನ್ನು ಬಿಗಿಗೊಳಿಸಿದೆ. ಖಾತೆ ದುರುಪಯೋಗಗೊಳ್ಳದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇತರೆ ಪಿಎಫ್ ಕಚೇರಿಗಳಲ್ಲಿಯೂ ಇದೇ ಪುನರಾವರ್ತನೆಯಾಗಬಹುದು ಎಂದು ಎಚ್ಚರಿಕೆ ನೀಡಿದೆ.

       ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ ಹಣ ವಿತ್‌ಡ್ರಾ

      ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ ಹಣ ವಿತ್‌ಡ್ರಾ

      ಕೇಂದ್ರೀಯ ಪಿಎಫ್ ಆಯುಕ್ತ ಸುನೀಲ್ ಬಾರ್ತವಾಲ್ ಅವರ ಕಚೇರಿ, ಆಂತರಿಕ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ. ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ ಹಣ ಪಡೆಯಲಾಗಿದೆ. ಸದಸ್ಯರ ಖಾತೆಯಲ್ಲಿನ ಇಪಿಎಫ್ ಬ್ಯಾಲನ್ಸ್ ವಂಚನೆಯಾಗಿಲ್ಲ ಹಾಗೂ ಇಪಿಎಫ್ ಸದಸ್ಯರ ಬ್ಯಾಲೆನ್ಸ್ ಸುರಕ್ಷಿತವಾಗಿದೆ ಎಂದು ಕಚೇರಿ ಹೇಳಿಕೆ ನೀಡಿದೆ.

      ಯಾವುದೇ ಇಪಿಎಫ್ ಸದಸ್ಯರಿಗೆ ಸಂಬಂಧಿಸದ ಹಾಗೂ ಅಸ್ತಿತ್ವವಿಲ್ಲದ ಖಾತೆಗಳಿಂದ ಸಾಲಗಳನ್ನು ಪಡೆಯಲಾಗಿದೆ ಎಂದು ಆಂತರಿಕ ವಿಚಾರಣೆ ತಿಳಿಸಿದೆ. ಅಸ್ತಿತ್ವದಲ್ಲಿಲ್ಲದ ಖಾತೆಗಳಿಂದ ಸಾಲ ಪಡೆದವರನ್ನು ಕಂಡುಹಿಡಿಯಲಾಗುತ್ತಿದೆ ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+