• search

ಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್ 08: ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ರಾತ್ರಿ ಸುಮಾರು 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಮರೆಯುವಂತಿಲ್ಲ. ಅದರಲ್ಲೂ ಕಾಳಧನಿಕರಿಗೆ ಈಗಲೂ ಕನಸಿನಲ್ಲಿ ಕಾಡುತ್ತಿದ್ದರೂ ಅಚ್ಚರಿಯೇನಲ್ಲ. ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಇಲ್ಲಿದೆ.

  ದೀಪಾವಳಿ ವಿಶೇಷ ಪುರವಣಿ

  ಆದರೆ, ಅಪನಗದೀಕರಣ, ಕಪ್ಪುಹಣ ಮೇಲೆ ನಿಯಂತ್ರಣದ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು ಎಂಬುದರ ಸಮೀಕ್ಷೆ ಇಲ್ಲಿದೆ. ಕಪ್ಪುಹಣ ಸಂಪೂರ್ಣ ಸತ್ತಿಲ್ಲ ಎಂಬ ಅಭಿಪ್ರಾಯಬಂದಿದೆ.

  ಮೋದಿ ಸರಕಾರದ ಡಿಜಿಟಲ್ ವ್ಯವಹಾರದ ಜಾದೂ ಭಾರತವನ್ನು ಬದಲಿಸಿದ್ದು ಹೇಗೆ?

  ಕಪ್ಪುಹಣ, ಭ್ರಷ್ಟಾಚಾರದ ವಿರುದ್ಧದ ಪರಿಣಾಮ ಬೀರಿದ ಅಪನಗದೀಕರಣ, ನೋಟ್ ಬ್ಯಾನ್ ಘೋಷಣೆಯನ್ನು ಎನ್ಡಿಎ ಸರ್ಕಾರ ತನ್ನ ಹೆಮ್ಮೆಯ ಆರ್ಥಿಕ ನಡೆ ಎಂದೇ ಹೇಳಿಕೊಂಡಿದೆ. ಆದರೆ, ಇತ್ತೀಚೆಗೆ ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರಕ್ಕೆ ಹಿತವೆನಿಸದ ಫಲಿತಾಂಶ ಬಂದಿದೆ.

  ಕಪ್ಪುಹಣ ಇನ್ನೂ ಸತ್ತಿಲ್ಲ ಎಂದ ಜನತೆ

  ಕಪ್ಪುಹಣ ಇನ್ನೂ ಸತ್ತಿಲ್ಲ ಎಂದ ಜನತೆ

  ಅಪನಗದೀಕರಣ ಜಾರಿಗೆ ಬಂದು ಎರಡು ವರ್ಷವಾಗಿದ್ದರೂ ದೇಶದಲ್ಲಿ ಕಪ್ಪುಹಣ ಇನ್ನೂ ಸಂಪೂರ್ಣವಾಗಿ ಸತ್ತಿಲ್ಲ ಎಂದು ಶೇ 60ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆ ವೇಳೆಯಲ್ಲಿ ಕಪ್ಪುಹಣ ಚಲಾವಣೆ ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ, ಕಪ್ಪುಹಣ ಬಳಕೆ ಈಗ ಅಷ್ಟು ಸುಲಭವಾಗಿಲ್ಲ, ಆನ್ ಲೈನ್ ವ್ಯವಹಾರದಿಂದ ಲಾಭ ನಷ್ಟ ಎರಡು ಆಗುತ್ತಿದೆ ಎಂದಿದ್ದಾರೆ.

  ಅಪನಗದೀಕರಣದಿಂದ ನಕಲಿ ನೋಟುಗಳ ಹಾವಳಿಗೆ ಭರ್ತಿ ಪೆಟ್ಟು: ಇಲ್ಲಿದೆ ಲೆಕ್ಕಾಚಾರ

  ಕಪ್ಪುಹಣದ ಮೇಲೆ ನಿಯಂತ್ರಣ ಸಾಧ್ಯ

  ಕಪ್ಪುಹಣದ ಮೇಲೆ ನಿಯಂತ್ರಣ ಸಾಧ್ಯ

  ಶೇ40ರಷ್ಟು ಮಂದಿ ಮಾತ್ರ ಕಪ್ಪುಹಣದ ಮೇಲೆ ನಿಯಂತ್ರಣ ಸಾಧ್ಯವಿದೆ. ತೆರಿಗೆ ವಂಚಕರಿಗೆ ಶಿಕ್ಷೆಯಾಗಲಿದೆ, ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಪನಗದೀಕರಣದಿಂದಾಗಿ ಬೇರೆ ಬೇರೆ ಮಾರ್ಗದಲ್ಲಿ ಹಣ ವ್ಯವಹಾರ ಮಾಡುವುದನ್ನು ಸಾರ್ವಜನಿಕರು ಅರಿಯಲು ತೊಡಗಿದ್ದಾರೆ. ಹೀಗಾಗಿ ಇದು ಹೊಸ ಕ್ರಾಂತಿ ಎಂದು ಹೇಳಿದ್ದಾರೆ.

  2000 ನೋಟು ನಿಷೇಧಕ್ಕೆ ಚಂದ್ರಬಾಬು ನಾಯ್ಡು ಆಗ್ರಹ

  ಯಾರಿಗೂ ಉಪಯೋಗವಾಗಿಲ್ಲ

  ಯಾರಿಗೂ ಉಪಯೋಗವಾಗಿಲ್ಲ

  ಅಪನಗದೀಕರಣ ಅಥವಾ 500 ಹಾಗೂ 1000 ರು ನೋಟ್ ಬ್ಯಾನ್ ನಿಂದಾಗಿ ಯಾರಿಗೂ ಪ್ರಯೋಜನವಾಗಿಲ್ಲ. ಇದರಿಂದ ಗೊಂದಲ ಹೆಚ್ಚಾಗಿದೆ. ಎರಡು ವರ್ಷವಾದರೂ ಸಾರ್ವಜನಿಕರಿಗೆ ಹೊಸ ಪದ್ಧತಿಗೆ, ಹೊಸ ನೋಟುಗಳ ಬಳಕೆಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ಶೇ 25ರಷ್ಟು ಮಂದಿ ಹೇಳಿದ್ದಾರೆ. ಶೇ13ರಷ್ಟು ಮಂದಿ ಕಪ್ಪುಹಣದ ಮೇಲೆ ಸಂಪೂರ್ಣ ನಿಯಂತ್ರಣ ಮಾಡಲಾಗಿದೆ ಎಂದಿದ್ದಾರೆ.

  ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...

  ನೇರ ತೆರಿಗೆದಾರರ ಸಂಖ್ಯೆ ಹೆಚ್ಚಳ

  ನೇರ ತೆರಿಗೆದಾರರ ಸಂಖ್ಯೆ ಹೆಚ್ಚಳ

  ಅಪನಗದೀಕರಣದಿಂದ ನೇರ ತೆರಿಗೆದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದು ಶೇ 23ರಷ್ಟು ಹೇಳಿದಾರೆ. ಆದರೆ, ಇದು ಕೇವಲ ಅಪನಗದೀಕರಣದಿಂದ ಆದ ಬೆಳವಣಿಗೆಯಲ್ಲ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ ಶೇ39ರಷ್ಟು ಮಂದಿ ರಸೀತಿ ಇಲ್ಲದೆ ವಸ್ತುಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ. 2017ರಲ್ಲಿ ರಿಯಲ್ ಎಸ್ಟೇಟ್ ಗೆ ಮಾರಕವಾದ ಅಪನಗದೀಕರಣಕ್ಕೆ 2018ರಲ್ಲಿ ಮಾರುಕಟ್ಟೆ ಒಗ್ಗಿಕೊಂಡಿದೆ ಎಂಬ ಅಂಶ ಬೆಳಕಿಗೆ ಬಂದಿದೆ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  After two years of Demonetisation: A whopping 60% Indians said that black money in the country has not died; in fact, its circulation is going to only increase before the 2019 General Elections, a survey by LocalCircles showed.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more