Get Updates
Get notified of breaking news, exclusive insights, and must-see stories!

ಡಿಸೆಂಬರ್ 26ರಂದು 10 ಲಕ್ಷ ಸಿಬ್ಬಂದಿಯಿಂದ ಪ್ರತಿಭಟನೆ, ಏಕೆ?

ಮುಂಬೈ, ಡಿಸೆಂಬರ್ 24: ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್ ವಿಲೀನ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್(UFBU) ಡಿಸೆಂಬರ್ 26ರಂದು ಬಂದ್, ಮೆರವಣಿಗೆ ಹಮ್ಮಿಕೊಂಡಿದೆ.

UFBUನ ಒಂಭತ್ತು ಒಕ್ಕೂಟ ಸೇರಿದಂತೆ ಆಲ್ ಇಂಡಿಯಾ ಬ್ಯಾಂಕ್ ಸಿಬ್ಬಂದಿ, ನೌಕರರ ಒಕ್ಕೂಟದ 10 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಕ್ಷಿಣ ಮುಂಬೈನ ಅಜಾದ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ಬ್ಯಾಂಕುಗಳ ವೀಲಿನದ ಬಳಿಕ ಗ್ರಾಹಕರಿಗೆ ಗೊಂದಲ ಉಂಟಾಗಲಿದೆ. ಜನ ಧನ್, ಮುದ್ರಾ, ವಿಮೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಸ್ಥಿತಿ ಗತಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ, ಈ ವಿಲೀನದಿಂದ ಬ್ಯಾಂಕ್ ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲಕ್ಕಿಂತ ತೊಂದರೆಯನ್ನು ಉಂಟು ಮಾಡಲಿದೆ.

10 lakh employees to protest against Bank of Baroda-Dena Bank-Vijaya Bank merger

ಈ ವಿಲೀನ ಪ್ರಕ್ರಿಯೆಯಿಂದ ಬ್ಯಾಡ್ ಲೋನ್ ಸಮಸ್ಯೆಯು ನಿವಾರಣೆ ಆಗುವುದಿಲ್ಲ ಮತ್ತು ದೊಡ್ಡ ಬ್ಯಾಂಕ್ ಗಳನ್ನು ಸೃಷ್ಟಿ ಮಾಡುವುದು ಯಾರಿಗೂ ಒಳಿತಲ್ಲ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ ಅಭಿಪ್ರಾಯ ಪಟ್ಟಿದೆ.

ಸೆಪ್ಟಂಬರ್ ತಿಂಗಳಲ್ಲಿ ಸಾರ್ವಜನಿಕ ವಲಯದ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸುವುದಾಗಿ, ಕೇಂದ್ರ ಸರಕಾರ ಪ್ರಕಟಿಸಿತ್ತು. ಈ ವಿಲೀನದ ಬಳಿಕ ಎಸ್ಬಿಐ, ಐಸಿಐಸಿಐ ನಂತರ ಮೂರನೇ ಅತಿದೊಡ್ಡ ಬ್ಯಾಂಕಿಂಗ್ ಜಾಲ ಸೃಷ್ಟಿಯಾಗಲಿದೆ.

ಕರ್ನಾಟಕದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಿಜಯಾ ಬ್ಯಾಂಕ್ ಅನ್ನು ಇತರ ಬ್ಯಾಂಕ್ ಜೊತೆ ವಿಲೀನಗೊಳಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಂದೇನು ಎಂಬುದು ಸ್ಪಷ್ಟವಿಲ್ಲ: ವಿಲೀನದ ಬಳಿಕ ಬ್ಯಾಂಕಿಗೆ ಹೊಸ ಹೆಸರು ಇಡಬಹುದಾದರೂ ಲೋಗೋ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅಂದಾಜು ವಿಜಯ ಬ್ಯಾಂಕ್ ನ ಐನೂರು ಶಾಖೆಗಳನ್ನು ಮುಚ್ಚಬಹುದು. ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಕ್ಕೆ ದಕ್ಷಿಣ ಭಾರತದಲ್ಲಿ ಇರುವ ಶಾಖೆಗಳು ಕಡಿಮೆ.

ಬ್ಯಾಂಕ್ ಆಫ್ ಬರೋಡ, ದೇನಾ ಬ್ಯಾಂಕ್ ಜತೆಗೆ ವಿಜಯ ಬ್ಯಾಂಕ್ ವಿಲೀನ ಆದ ನಂತರವೂ ತನ್ನದೇ ಅಸ್ಮಿತೆ ಉಳಿಸಿಕೊಳ್ಳಲಿದೆ ಎಂದು ಕಾರ್ಯನಿರ್ವಹಣಾ ನಿರ್ದೇಶಕ ಹಾಗೂ ಸಿಇಒ ಆಗಿರುವ ಶಂಕರ್ ನಾರಾಯಣನ್ ಹೇಳಿದ್ದಾರೆ.

ಡಿಸೆಂಬರ್ ತಿಂಗಳ ಅಂತ್ಯಕ್ಕೆ ವಿಲೀನ ಪ್ರಕ್ರಿಯೆ ಅಂತ್ಯಗೊಳಿಸಿ, ಸಂಸತ್ತಿನಲ್ಲಿ(ಜನವರಿ 8ಕ್ಕೆ ಚಳಿಗಾಲದ ಅಧಿವೇಶನ ಮುಕ್ತಾಯ) ಮಂಡಿಸಿ, ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+