ಬೀದರ್‌; ಶಾಹಿನ್ ಶಾಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ

ಬೀದರ್, ಫೆಬ್ರವರಿ 14 : ಬೀದರ್‌ನ ಶಾಹಿನ್ ಶಾಲೆಯಲ್ಲಿ ಮಾಡಿದ ಒಂದು ಸಣ್ಣ ನಾಟಕ ದೇಶದ್ರೋಹದ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಶಾಲೆಯ ವಿದ್ಯಾರ್ಥಿನಿ ಇನ್ನೂ ಆಘಾತದಿಂದ ಹೊರ ಬಂದಿಲ್ಲ. ತಾಯಿ ಜೈಲು ಸೇರಿದ್ದು, ಮಗು ಹಾಸ್ಟೆಲ್‌ನಲ್ಲಿ ಆಶ್ರಯ ಪಡೆಯುತ್ತಿದೆ.

ಶುಕ್ರವಾರ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಶಾಹಿನ್ ಶಾಲೆಗೆ ಭೇಟಿ ನೀಡಿದರು. ಬಿಜೆಪಿ ಸರ್ಕಾರವು ಪೊಲೀಸ್ ಇಲಾಖೆಯನ್ನು ದುರುಪಯೋಗಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಕಾರಣಕ್ಕೆ ಶಿಕ್ಷಕರು ಮತ್ತು ಪೋಷಕರ ಮೇಲೆ ದೇಶದ್ರೋಹದ ಮೊಕದ್ದಮೆ ಹಾಕಿದ್ದಾರೆ ಎಂದು ಆರೋಪಿಸಿದರು.

ನಾಟಕವಾಡಿದ್ದ ವಿದ್ಯಾರ್ಥಿನಿ ತಾಯಿ ನಜಮುನ್ನೀಸಾ ಜೈಲು ಸೇರಿದ್ದು ಇನ್ನೂ ಜಾಮೀನು ಸಿಕ್ಕಿಲ್ಲ. 11 ವರ್ಷದ ಮಗು ಅತಂತ್ರಳಾಗಿದ್ದಾಳೆ. ಖಾಸಗಿ ಹಾಸ್ಟೆಲ್‌ನಲ್ಲಿ ಆಕೆಗೆ ವಾಸ್ತವ್ಯ ಒದಗಿಸಲಾಗಿದ್ದು, ಆಕೆ ಆಘಾತಕ್ಕೆ ಒಳಗಾಗಿದ್ದಾಳೆ. ಪರೀಕ್ಷೆ ಬರೆಯಲು ಸಹ ಹೋಗುತ್ತಿಲ್ಲ.

Siddaramaiah Visited Bidar Shaheen School

ಫೆಬ್ರವರಿ 7ರಂದು ಬಾಲಕಿ ಶಾಲೆಗೆ ಬಂದಿಲ್ಲ. ತಾಯಿ ಬಂಧನದ ಬಳಿಕ ಪಕ್ಕದ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ, ಪೊಲೀಸರು ಹಾಗೂ ಮಾಧ್ಯಮದವರು ಘಟನೆ ಸಂಬಂಧ ವಿಚಾರಿಸಲು ಪದೇ ಪದೇ ಬರುತ್ತಿರುವ ಕಾರಣ ಮಕ್ಕಳ ಕಲ್ಯಾಣ ಸಮಿತಿ ನಿರ್ದೇಶನದ ಅನ್ವಯ ಬಾಲಕಿಯನ್ನು ಖಾಸಗಿ ಹಾಸ್ಟೆಲ್‌ಗೆ ಕಳಿಸಲಾಗಿದೆ.

ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಮೇಲೆ ಬೀದರ್‌ನ ಶಾಹಿನ್ ಶಿಕ್ಷಣ ಸಂಸ್ಥೆ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನಾಟಕ ಮಾಡಿದ ವಿದ್ಯಾರ್ಥಿನಿ ತಾಯಿ, ಇಬ್ಬರು ಶಿಕ್ಷಕಿಯನ್ನು ಬಂಧಿಸಲಾಗಿದ್ದು ಜಾಮೀನು ಸಿಕ್ಕಿಲ್ಲ.

ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವರು ಶಾಲೆಗೆ ಬೆಂಬಲಕ್ಕೆ ನಿಂತಿದ್ದಾರೆ. ನಜಮುನ್ನೀಸಾಗೆ ಜಾಮೀನು ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+