• search
  • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದರ್; ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ, ಮೂರು ಸಾವು

|

ಬೀದರ್, ಜನವರಿ 22 : ಗೂಡ್ಸ್ ಕ್ಯಾರಿಯರ್‌ಗೆ ಪಂಕ್ಚರ್ ಹಾಕುತ್ತಿದ್ದವರಿಗೆ ಲಾರಿ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬೀದರ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಮಿನಕೇರಾ ಕ್ರಾಸ್ ಬಳಿ ಬುಧವಾರ ಮುಂಜಾನೆ 4ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ವೇಗವಾಗಿ ಬಂದ ಲಾರಿ ರಸ್ತೆ ಬದಿಯಲ್ಲಿ ಗೂಡ್ಸ್ ಕ್ಯಾರಿಯರ್‌ಗೆ ಪಂಕ್ಚರ್ ಹಾಕುತ್ತಿದ್ದ ಮೂವರಿಗೆ ಡಿಕ್ಕಿ ಹೊಡೆದಿದೆ.

ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ರಸ್ತೆ ಅಪಾಯಕಾರಿ!

ಮೃತಪಟ್ಟವರನ್ನು ಅನ್ಸರ್ ಬಸಂತಪೂರ್, ವಿಜಯ ಕುಮಾರ್ ಬಸಂತಪೂರ್ ಮತ್ತು ಇಸ್ಮೈಲ್ ಎಂದು ಗುರುತಿಸಲಾಗಿದೆ. ಮೃತರು ಗೂಡ್ಸ್‌ ಕ್ಯಾರಿಯರ್‌ನಲ್ಲಿ ಈರುಳ್ಳಿ ತುಂಬಿಕೊಂಡು ಹೈದರಾಬಾದ್‌ಗೆ ಹೊರಟಿದ್ದರು.

ದುಬೈನಲ್ಲಿ ರಸ್ತೆ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

ಮಿನಕೇರಾ ಕ್ರಾಸ್ ಬಳಿ ಟೈರ್ ಪಂಕ್ಚರ್ ಆಗಿತ್ತು. ವಾಹನವನ್ನು ಬದಿಗೆ ನಿಲ್ಲಿಸಿ ಪಂಕ್ಚರ್ ಹಾಕುತ್ತಿದ್ದರು. ಆಗ ಲಾರಿ ಡಿಕ್ಕಿ ಹೊಡೆದಿದೆ. ಬೀದರ್ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಲಾರಿ ಚಾಲಕನಿಗಾಗಿ ಹುಡುಕಾಟ ನಡೆದಿದೆ.

ಮೈಸೂರಿನಲ್ಲಿ ರಸ್ತೆ ಅಗೆದ ಜಿಯೋಗೆ ಬಿತ್ತು ಭಾರೀ ದಂಡ

English summary
3 killed on spot in road accident national highway 9 at Bidar. Truck hit the goods auto which parked road side after tyre puncture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X