• search
  • Live TV
ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೀದರ್ ವೈದ್ಯಕೀಯ ಕಾಲೇಜಿನ ನಿರ್ದೇಶಕರ ವಿರುದ್ಧ ಸುಧಾಕರ್ ಗರಂ

By ಬೀದರ್ ಪ್ರತಿನಿಧಿ
|

ಬೀದರ್, ಜೂನ್ 14: ಹಳಿತಪ್ಪಿರುವ ಬೀದರ್ ವೈದ್ಯಕೀಯ ಕಾಲೇಜಿನ ಆಡಳಿತವನ್ನು ಮರಳಿ ಸರಿಹಾದಿಗೆ ತರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಸಂಸ್ಥೆಯ ಆಡಳಿತ ಗೊಂದಲದ ಗೂಡಿನಂತಾಗಿದೆ. ಕಾಲೇಜು ಆರಂಭವಾಗಿ 13 ವರ್ಷಗಳಾದರೂ ಸರಿಯಾಗಿ ನಡೆಯುತ್ತಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ್ದು, ಕೆಲ ತಿಂಗಳಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ಬೀದರ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿ ಭಾನುವಾರ ಅವರು ಮಾತನಾಡಿದರು.

ಖಾಲಿಯಿರುವ 16 ಬೋಧಕ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡುವಂತೆ, ಅದಕ್ಕೆ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದರು. ಹದಿಮೂರು ವರ್ಷಗಳಾದರೂ ಸಂಸ್ಥೆಯ ಆಡಳಿತ ಹಳಿ ಮೇಲೆ ಬಂದಿಲ್ಲ. ಇನ್ನಾದರೂ ಈ ಪರಿಸ್ಥಿತಿ ಸರಿಯಾಗಬೇಕು ಎಂದರು.

ವಿಶ್ವ ರಕ್ತದಾನಿಗಳ ದಿನ; ಜಿಮ್ಸ್‌ ನಲ್ಲಿ ರಕ್ತದಾನ ಮಾಡಿದ ಸುಧಾಕರ್

ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿ ಮೆಡಿಕಲ್ ಕಾಲೇಜು ಸ್ಥಾಪಿಸಿದಾಗ ಉದ್ದೇಶವೇ ಈಡೇರದಿದ್ದಾಗ ಇಷ್ಟೆಲ್ಲಾ ಸೌಲಭ್ಯಗಳನ್ನು ಏಕೆ ಕೊಡಬೇಕಿತ್ತು? ಎಂದು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.

ಸಚಿವರು ಕೇಳಿದ ಮಾಹಿತಿ ನೀಡಲು ನಿರ್ದೇಶಕರು ವಿಫಲರಾದ ಬೆಂಗಳೂರಿನಲ್ಲಿ ಮತ್ತೊಂದು ದಿನ ಸಭೆ ನಿಗದಿ ಮಾಡಿ ಪರಿಶೀಲಿಸುವುದಾಗಿ ಸಚಿವರು ಸೂಚನೆ ನೀಡಿದರು. ಸಂಸದರು, ಜಿಲ್ಲೆಯ ಶಾಸಕರು ಜಿಲ್ಲೆಯ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಜೂನ್ 14ರಂದು ಬೀದರ್ ಅಪ್ಡೇಟ್:

ಬೀದರ್ ಜಿಲ್ಲೆಯಲ್ಲಿಇಂದು 20 ಕೇಸ್ ಗಳು ಪತ್ತೆಯಾಗಿದ್ದು, ಒಟ್ಟಾರೆ, 370 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಬಹುತೇಕ ಎಲ್ಲಾ ಕೇಸ್ ಗಳಿಗೂ ಮಹಾರಾಷ್ಟ್ರನಂಟಿದೆ.

ಹುಮನಾಬಾದ 02,ಭಾಲ್ಕಿ 02,ಬೀದರ ನಗರ 01, ಬಸವಕಲ್ಯಾಣ 05 ಹಾಗೂ ಔರಾದ ತಾಲೂಕಿನಲ್ಲಿ 10 ಪಾಸಿಟಿವ್ ಕೇಸುಗಳು ಕಂಡು ಬಂದಿವೆ. ಇಲ್ಲಿಯವರೆಗೆ 203 ಜನ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ161 ಸಕ್ರಿಯ ಪ್ರಕರಣಗಳಿವೆ. 06 ಜನರು‌ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.

English summary
Medical Education Minister K. Sudhakar told media persons as he toured Kalaburagi and Bidar districts to visit medical colleges, meet people and officials to discuss the Covid scenario.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X