ಕಲಬುರಗಿ ಮೂಲಕ ಬೀದರ್-ಯಶವಂತಪುರ ರೈಲು ಸಂಚಾರ
ಬೀದರ್, ಮಾರ್ಚ್ 03 : ಬೀದರ್ ಜಿಲ್ಲೆಯ ಜನರ ಬಹು ದಿನದ ಬೇಡಿಕೆ ಈಡೇರಿದೆ. ಬೀದರ್ ಮತ್ತು ಯಶವಂತಪುರ ನಡುವಿನ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ಒಪ್ಪಿಗೆ ನೀಡಲಾಗಿದೆ.
ಬೀದರ್ ಕ್ಷೇತ್ರದ ಬಿಜೆಪಿ ಸಂಸದ ಭಗವಂತ ಖೂಬಾ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭೇಟಿ ಮಾಡಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬೀದರ್ ಮತ್ತು ಬೆಂಗಳೂರಿನ ಯಶವಂತಪುರ ನಡುವಿನ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ನೈಋತ್ಯ ರೈಲ್ವೆ ಒಪ್ಪಿಗೆ ಕೊಟ್ಟಿದೆ. ಈ ಮೊದಲು ತೆಲಂಗಾಣದ ಸಿಕಂದರಾಬಾದ್ ಮಾರ್ಗವಾಗಿ ಬೀದರ್-ಯಶವಂತಪುರ ರೈಲು ಸಂಚಾರ ನಡೆಸುತ್ತಿತ್ತು.

ಬೀದರ್-ಯಶವಂತಪುರ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಿದರೆ ಸಮಯ ಉಳಿತಾಯವಾಗಲಿದೆ. ಆದ್ದರಿಂದ, ಬೀದರ್ ಜಿಲ್ಲೆಯ ಜನರು ಕಲಬುರಗಿ ಮೂಲಕ ರೈಲು ಸಂಚಾರಕ್ಕೆ ಬೇಡಿಕೆ ಇಟ್ಟಿದ್ದರು.
ಬೀದರ್-ಯಶವಂತಪುರ ರೈಲು ಕಲಬುರಗಿ ಮೂಲಕ ಸಂಚಾರ ನಡೆಸಲು ಒಪ್ಪಿಗೆ ಸಿಕ್ಕಿದೆ. ಆದರೆ, ದಿನಾಂಕ ಮಾತ್ರ ನಿಗದಿಯಾಗಿಲ್ಲ. ಶೀಘ್ರವೇ ಈ ಕುರಿತು ಅಧಿಕೃತ ಆದೇಶ ಮತ್ತು ರೈಲು ಸಂಚಾರದ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.
ಭಗವಂತ ಖೂಬಾ ಮಾಡಿರುವ ಟ್ವೀಟ್
Met to Hon'ble Railway Minster for State Shri. @SureshAngadi_ ji & thanked him for sanctioning the train diversion of Bidar- Yesvantpur via kalburgi. This train service will start shortly, & also I thanks to our beloved PM Shri. @narendramodi ji & our RM Shri.@PiyushGoyal ji pic.twitter.com/59ggDKsktz
— Bhagwant Khuba (@bhagwantkhuba) March 2, 2020












Click it and Unblock the Notifications