ನೆಗೆಟಿವ್ ಇದ್ದರೂ, ಗ್ರಾಮಸ್ಥರ ಕಾಟ: ಕಾರ್‌ನಲ್ಲೇ ಯುವಕನ ಕ್ವಾರಂಟೈನ್

ಬೆರ್ಹಾಂಪುರ್, ಮೇ 26: ಕೊರೊನಾ ನೆಗೆಟಿವ್ ವರದಿ ಬಂದಿದ್ದರೂ, ಸುಮ್ಮನೆ ಕ್ವಾರಂಟೈನ್ ನಲ್ಲಿ ಇರಲು ಹೇಳಿ ಒಡಿಶಾದಲ್ಲಿ ಯುವಕನೊಬ್ಬನಿಗೆ ಕಾಟ ಕೊಡಲಾಗಿದೆ. ಯುವಕನಿಗೆ ತೊಂದರೆ ನೀಡುವ ಉದ್ದೇಶದಿಂದ ಗ್ರಾಮದ ಕೆಲವು ವ್ಯಕ್ತಿಗಳು ಕಾರ್‌ನಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ಮಾಡಿದ್ದಾರೆ.

Recommended Video

      ಲಾಕ್‌ಡೌನ್ ನಂತರ ಹಾರಿದ ಮೊದಲ ವಿಮಾನದಲ್ಲಿನ ಕನ್ನಡದ ಗಗನಸಖಿ| Kannadati Air Hostess Explain Current situation

      ಮಾಧಾಬಾ ಪತ್ರ ಎಂಬ 30 ವರ್ಷದ ಯುವಕ, ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈತ ಮೇ 3 ರಂದು ಬಿಹಾರಕ್ಕೆ ಕೆಲಸದ ಮೇಲೆ ಹೋಗಿದ್ದರು. ಬಿಹಾರದಿಂದ ಒಡಿಶಾಗೆ ವಾಪಸ್‌ ಬರುವ ಮುನ್ನ ತಮ್ಮ ಹೆಸರನ್ನು ನೊಂದಣಿ ಮಾಡಿಸಿ, ಗಂಜಾಂ ಜಿಲ್ಲಾ ಕಲೆಕ್ಟರ್ ಬಳಿ ತಿಳಿಸಿದ್ದರು.

      ಕೊರೊನಾ ರೋಗ ಲಕ್ಷಣಗಳು ಇಲ್ಲದ ಕಾರಣ ಮಾಧಾಬಾ ಪತ್ರ ಅವರನ್ನು ಬೆರ್ಹಾಂಪುರ್‌ನಲ್ಲಿ 14 ದಿನಗಳ ಕ್ವೌರಂಟೈನ್‌ನಲ್ಲಿ ಇಡಲಾಗಿತ್ತು. ಆ ನಂತರ ಒಡಿಶಾಗೆ ಹೋಗಲು ಅನುಮತಿ ನೀಡಲಾಗಿತ್ತು. ಕೊರೊನಾ ನೆಗೆಟಿವ್ ವರದಿ ಬಂದಿತ್ತು. ಆದರೆ, ಈ ಯುವಕನಿಗೆ ಗ್ರಾಮದಲ್ಲಿ ಕೆಲವರು ತೊಂದರೆ ನೀಡಿದ್ದಾರೆ.

      ಆಶಾ ಕಾರ್ಯಕರ್ತೆಯ ಪತಿ

      ಆಶಾ ಕಾರ್ಯಕರ್ತೆಯ ಪತಿ

      ಬಿಹಾರದಿಂದ ಕ್ವಾರಂಟೈನ್‌ ಮುಗಿಸಿ ಯುವಕ ತನ್ನ ಊರಿಗೆ ಬಂದ. ಆ ವಿಷಯ ತಿಳಿದು, ಗ್ರಾಮದ ಆಶಾ ಕಾರ್ಯಕರ್ತೆಯ ಪತಿ ಹಾಗೂ ಕೆಲವು ಗ್ರಾಮಸ್ಥರು ಅವರ ಮನೆಗೆ ಬಂದು ವಿಚಾರಿಸಿದ್ದಾರೆ. ಬೇರೆ ರಾಜ್ಯದಿಂದ ಬಂದೆ ಎಂದು ಹೇಳಿದಾಗ ಕ್ವಾರಂಟೈನ್‌ನಲ್ಲಿ ಇರಲು ಹೇಳಿದ್ದಾರೆ. ಆದರೆ, ಮಾಧಾಬಾ ಪತ್ರ ಈಗಾಗಲೇ ಕ್ವಾರಂಟೈನ್‌ ಮುಗಿಸಿದ್ದು, ನೆಗೆಟಿವ್ ವರದಿ ಹೀಗಾಗಿ, ಊರಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಆದರೂ, ಇವರು ಒತ್ತಡ ಹೇರಿದ್ದಾರೆ.

      ತಂದೆಯನ್ನು ಅಡ್ಡ ಹಾಕಿದ ಗ್ರಾಮಸ್ಥರು

      ತಂದೆಯನ್ನು ಅಡ್ಡ ಹಾಕಿದ ಗ್ರಾಮಸ್ಥರು

      ಆಶಾ ಕಾರ್ಯಕರ್ತೆ ಪತಿ ಹಾಗೂ ಗ್ರಾಮಸ್ಥರ ಕಾಟ ಜಾಸ್ತಿಯಾಗಿದ್ದು, ಯುವಕ ಪೊಲೀಸ್‌ ಠಾಣೆಗೆ ಹೋಗಿದ್ದಾನೆ. ಪೊಲೀಸರು ಗ್ರಾಮಸ್ಥರು ಮಾಡಿದ್ದು ತಪ್ಪು ಎಂದು ಹೇಳಿ, ಮಾಧಾಬಾ ಪತ್ರನಿಗೆ ಮನೆಗೆ ಹೋಗಲು ಅವಕಾಶ ನೀಡಿದರು. ಆದರೆ, ಒಂದು ದಿನ ಕಳೆದ ನಂತರ ಮಾರುಕಟ್ಟೆಗೆ ಹೋಗಿದ್ದ ಮಾಧಾಬಾ ಪತ್ರ ತಂದೆಯನ್ನು ಆ ವ್ಯಕ್ತಿಗಳ ಅಡ್ಡ ಹಾಕಿದ್ದಾರೆ. ನಿಮ್ಮ ಮಗನಿಗೆ ಕ್ವಾರಂಟೈನ್‌ನಲ್ಲಿ ಇರಲು ಹೇಳಿ ಎಂದಿದ್ದಾರೆ.

      ಪೊಲೀಸರ ಮಾತಿಗೂ ಬೆಲೆಯಿಲ್ಲ

      ಪೊಲೀಸರ ಮಾತಿಗೂ ಬೆಲೆಯಿಲ್ಲ

      ಪೊಲೀಸರು ಹೇಳಿದರೂ, ಯುವಕನಿಗೆ ಕಾಟ ಕೊಡುವುದನ್ನು ಅವರು ಬಿಡಲಿಲ್ಲ. ಕಷ್ಟದಲ್ಲಿದ್ದ ಕುಟುಂಬದ ನೆರವಿಗೆ ಗ್ರಾಮದ ಯಾರೂ ಕೂಡ ಬರಲಿಲ್ಲ. ಇದರಿಂದ ದಾರಿ ಕಾರಣ ಯುವಕ, ಗ್ರಾಮಸ್ಥರು ಹೇಳಿದ ಹಾಗೆ, ಕ್ವಾರಂಟೈನ್‌ನಲ್ಲಿ ಇರಲು ಒಪ್ಪಿಕೊಂಡಿದ್ದಾನೆ. ಕ್ವಾರಂಟೈನ್‌ ಸೆಂಟರ್‌ ಬಳಿ, ತನ್ನ ಕಾರ್‌ನಲ್ಲಿಯೇ ದಿನ ಕಳೆಯುತ್ತಿದ್ದಾನೆ.

      ಕಾರ್‌ನಲ್ಲಿಯೇ ಕ್ವಾರಂಟೈನ್‌

      ಕಾರ್‌ನಲ್ಲಿಯೇ ಕ್ವಾರಂಟೈನ್‌

      ಕ್ವಾರಂಟೈನ್‌ ನಲ್ಲಿ ಇರಲು ಒತ್ತಡ ಹಾಕಿದ್ದ ಕಾರಣ ಯುವಕ ಮಾಧಾಬಾ ಪತ್ರ ಮೇ 21 ರಿಂದ ಇಡೀ ದಿನ ತನ್ನ ಕಾರ್‌ನಲ್ಲಿಯೇ ಇರುತ್ತಿದ್ದಾನೆ. ಊಟ, ತಿಂಡಿ ಎಲ್ಲವೂ ಅಲ್ಲಿಯೇ ಮಾಡುತ್ತಿದ್ದು, ಶೌಚಾಲಯಕ್ಕಾಗಿ ಮಾತ್ರ ಕಾರ್‌ನಿಂದ ಹೊರಗೆ ಬರುತ್ತಿದ್ದೇನೆ ಎಂದು ಮಾಧಾಬಾ ಪತ್ರ ನೋವು ಹಂಚಿಕೊಂಡಿದ್ದಾರೆ. ತನ್ನ ಸಹಾಯಕ್ಕೆ ಯಾರೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+