ವಿಡಿಯೋ: ಉಮಾ ಭಾರತಿ ನೋಡಿ ಕಣ್ಣೀರಿಟ್ಟ ಸಾಧ್ವಿ ಪ್ರಜ್ಞಾ

ಭೋಪಾಲ್, ಏಪ್ರಿಲ್ 29: ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಬಿಜೆಪಿ ನಾಯಕಿ ಉಮಾ ಭಾರತಿಯವರನ್ನು ಕಂಡು ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವೆ ಉಮಾ ಭಾರತಿ ಅವರು ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಭೋಪಾಲ್ ನಲ್ಲಿ ಭೇಟಿಯಾದರು. ಕಾರಿನಲ್ಲಿ ಕುಳಿತಿದ್ದ ಪ್ರಜ್ಞಾ ಅವರ ಮುಖವನ್ನು ತಮ್ಮ ಬೊಗಸೆಯಲ್ಲಿ ಉಮಾ ಭಾರತಿ ಅವರು ಹಿಡಿಯುತ್ತಿದ್ದಂತೆಯೇ ಸಾಧ್ವಿ ಭಾವುಕರಾಗಿ ಬಿಕ್ಕಿದರು. ನಂತರ ಉಮಾಭಾರತಿ ಅವರು ಸಾಧ್ವಿ ಅವರನ್ನು ಸಂತೈಸಿದರು.

ಭೋಪಾಲ್ ನಲ್ಲಿ ಸಾಧ್ವಿ ಅವರನ್ನು ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ ವಿಪಕ್ಷಗಳು ಬಿಜೆಪಿ ಮೇಲೆ ಸಾಕಷ್ಟು ವಾಗ್ದಾಳಿ ನಡೆಸಿತ್ತು. ಅಂತೆಯೇ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಧ್ವಿ ಅವರೂ ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. 'ನನ್ನ ಶಾಪದಿಂದಲೇ ಹೇಮಂತ್ ಕರ್ಕರೆ ಮೃತರಾಗಿದ್ದು' 'ದಿಗ್ವಿಜಯ್ ಸಿಂಗ್ ಭಯೋತ್ಪಾದಕ' ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಯಿಂದಾಗಿ ಸಾಧ್ವಿ ಚುನಾವಣಾ ಆಯೋಗದಿಂದ ನೋಟಿಸ್ ಸಹ ಪಡೆದಿದ್ದರು.

Bhopal: Pragya Singh becomes emotional with Uma Bharti

2008 ರ ಮಾಲೇಗಾಂವ್ ಸ್ಫೋಟದ ಆರೋಪಿಯಾಗಿ ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿದ್ದ ಸಾಧ್ವಿ ಜಾಮೀನಿನ ಮೇಲೆ ಹೊರಬಂದಿದ್ದರು. ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ, ಸಾಂಧ್ವಿ ಅವರಿಗೆ ಮಧ್ಯಪ್ರದೇಶದ ಭೋಪಾಲ್ ನಿಂದ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಸಾಧ್ವಿ ಎದುರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+