• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

10ನೇ ಕ್ಲಾಸ್‌ ಮಕ್ಕಳಿಗಾಗಿ ಶಿಕ್ಷಕರಾದ ಮಾಜಿ ಶಾಸಕ ವೈಎಸ್‌ವಿ ದತ್ತ

|

ಬೆಂಗಳೂರು, ಮೇ 6: ಮಾಜಿ ಶಾಸಕ ವೈಎಸ್‌ವಿ ದತ್ತ 10ನೇ ಕ್ಲಾಸ್‌ ಮಕ್ಕಳಿಗಾಗಿ ಶಿಕ್ಷಕರಾಗಿದ್ದಾರೆ. ಅವರ ಈ ಪ್ರಯತ್ನ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ.

ದೇಶದಾದ್ಯಂತ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದ ಸರ್ಕಾರ

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದಕ್ಕೆ ಹೋಗಿದೆ. ಆದರೆ, ಲಾಕ್‌ಡೌನ್ ವಿಸ್ತರಣೆಯಾದ ಹಾಗೆ ಪರೀಕ್ಷೆ ಸಹ ಮುಂದಕ್ಕೆ ಹೋಗುತ್ತಲೇ ಇದೆ. ಇದರಿಂದ ವಿದ್ಯಾರ್ಥಿಗಳು ಸಹ ಯಾವಾಗ ಪರೀಕ್ಷೆ ನಡೆಯುತ್ತದೆ ಎನ್ನುವ ಗೊಂದಲದಲ್ಲಿ ಇದ್ದಾರೆ. ಈ ನಡುವೆ ವಿದ್ಯಾರ್ಥಿಗಳಿಗೆ ಪುನರ್ಮನನ ಪಾಠದ ಅಗತ್ಯ ಇದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು..

ಚಿಕ್ಕಮಗಳೂರಿನಲ್ಲಿ ಸಮಾನ ಮನಸ್ಕರಿಂದ ಉಪವಾಸ ಸತ್ಯಾಗ್ರಹ

ಈ ವಿಷಯ ಗಮನಿಸಿದ ವೈಎಸ್‌ವಿ ದತ್ತ ತಾವೇ ಪಾಠ ಮಾಡಲು ಮುಂದಾಗಿದ್ದಾರೆ. ಫೇಸ್‌ಬುಕ್‌ ಮೂಲಕ ವಿದ್ಯಾರ್ಥಿಗಳಿಗೆ ಪುನರ್ಮನನ ಕ್ಲಾಸ್‌ ಮಾಡುತ್ತಿದ್ದಾರೆ. ಕರ್ನಾಟಕದ ಸಜ್ಜನ ರಾಜಕಾರಣಿ ಈಗ ಮತ್ತೆ ತಮ್ಮ ಒಳ್ಳೆಯ ಗುಣದ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಗಣಿತ, ಭೌತಶಾಸ್ತ್ರ ಪಾಠ

ವೈಎಸ್‌ವಿ ದತ್ತ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಗಣಿತ, ಭೌತಶಾಸ್ತ್ರ ಪಾಠ ಮಾಡುತ್ತಿದ್ದಾರೆ. ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ನಿನ್ನೆಯಿಂದ ಪಾಠ ಶುರು ಮಾಡಿದ್ದಾರೆ. ಪ್ರತಿದಿನ 7:30ಕ್ಕೆ Ysv Datta ಫೇಸ್ ಬುಕ್ ಪೇಜ್‌ನಲ್ಲಿ ಒಂದು ಗಂಟೆಗಳ ಕಾಲ ಪಾಠ ನಡೆಯಲಿದೆ. ಗಣಿತ ಹಾಗೂ ಭೌತಶಾಸ್ತ್ರ ವಿಷಯವನ್ನು ವೈಎಸ್‌ವಿ ದತ್ತ ಭೋದನೆ ಮಾಡಲಿದ್ದಾರೆ. ಮೊದಲ ಒಂದು ವಾರ ಗಣಿತ ಪಾಠ ಮಾಡಲಿದ್ದಾರೆ.

ಸುರೇಶ್ ಕುಮಾರ್ ಭೇಟಿಯಿಂದ ಐಡಿಯಾ

ಕೆಲವು ದಿನಗಳ ಹಿಂದೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರನ್ನು ವೈಎಸ್‌ವಿ ದತ್ತ ಆಕಸ್ಮಿಕವಾಗಿ ಭೇಟಿ ಮಾಡಿದ್ದಾರೆ. ಈ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಗ್ಗೆ ಮಾತನಾಡಿದ್ದಾರೆ. ಪುನರ್ಮನನ ತರಗತಿಗಳ ಬಗ್ಗೆ ಚರ್ಚೆಯಾಗಿದೆ. ಆ ನಂತರ ವೈಎಸ್‌ವಿ ದತ್ತಗೆ ತಾವೇ ಪಾಠ ಶುರು ಮಾಡಿದರೆ ಹೇಗೆ ಎನ್ನುವ ಯೋಚನೆ ಬಂದಿದೆ. ಹೀಗಾಗಿ, ನಿನ್ನೆಯಿಂದ ಫೇಸ್‌ಬುಕ್‌ನಲ್ಲಿ ಪಾಠ ಶುರು ಮಾಡಿದ್ದು, ಸುರೇಶ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಲಾಕ್ಡೌನ್ 3.0 ಮುಗಿಯುತ್ತಿದ್ದಂತೆ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ

ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ದತ್ತ

ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ದತ್ತ

ದತ್ತ ಮೂಲತಃ ಒಬ್ಬ ಶಿಕ್ಷಕರು. ಸುಮಾರು 30 ರಿಂದ 40 ವರ್ಷದ ಅನುಭವ ಹೊಂದಿದ್ದಾರೆ. ರಾಜಾಜಿನಗರದಲ್ಲಿ ತಮ್ಮದೆಯಾದ ಟುಟೋರಿಯಲ್ ಶಾಲೆ ಹೊಂದಿದ್ದು, ಅಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ತಮ್ಮ ಕ್ಷೇತ್ರ ಕಡೂರಿನಲ್ಲಿಯೂ ಮಕ್ಕಳಿಗೆ ಪಾಠ ಮಾಡಿದ್ದಾರೆ. ಸಿಇಟಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಏರ್ಪಡಿಸಿದ್ದರು.

ಕನ್ನಡ ಮಾಧ್ಯಮದಲ್ಲಿ ಪಾಠ

ಕನ್ನಡ ಮಾಧ್ಯಮದಲ್ಲಿ ಪಾಠ

ವೈಎಸ್‌ವಿ ದತ್ತ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಅವರು, ಇಷ್ಟು ವರ್ಷ ಕನ್ನಡದಲ್ಲಿಯೇ ಪಾಠ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಮಿಶ್ರಣ ಮಾಡಿ ಪಾಠ ಹೇಳುತ್ತಿದ್ದರು. ಈಗ ಫೇಸ್‌ಬುಕ್‌ನಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಬಳಕೆ ಮಾಡಿ ಪಾಠ ಮಾಡುತ್ತಿದ್ದಾರೆ. ಗಣಿತ ಹಾಗೂ ಭೌತಶಾಸ್ತ್ರ ಅವರಿಗೆ ಇಷ್ಟದ ವಿಷಯವಾಗಿದ್ದು, ಅದನ್ನೇ ಬೋಧನೆ ಮಾಡುತ್ತಿದ್ದಾರೆ.

ದೊಡ್ಡ ಮಟ್ಟ ಪ್ರಶಂಸೆ ನೀಡಿದ ಜನತೆ

ದೊಡ್ಡ ಮಟ್ಟ ಪ್ರಶಂಸೆ ನೀಡಿದ ಜನತೆ

ವೈಎಸ್‌ವಿ ದತ್ತ ಅವರ ಈ ಕಾರ್ಯ ಸಾಕಷ್ಟು ಜನರ ಮೆಚ್ಚುಗೆ ಪಡೆದಿದೆ. ಫೇಸ್‌ಬುಕ್‌ನಲ್ಲಿ ಅವರ ವಿಡಿಯೋ ಸಾಕಷ್ಟು ಪ್ರಶಂಸೆ ಸಿಕ್ಕಿದೆ. ಲೈಕ್‌, ಕಾಮೆಂಟ್‌ ಶೇರ್‌ಗಳ ಮೂಲಕ ಜನ ಬೆಂಬಲ ನೀಡುತ್ತಿದ್ದಾರೆ. ಈ ಹಿಂದೆಯಿಂದ ಒಬ್ಬ ಒಳ್ಳೆಯ ಕೆಲಸಗಳ ಮೂಲಕ ಗುರಿಸಿಕೊಂಡಿದ್ದ ಸಜ್ಜನ ರಾಜಕಾರಣಿ ಈ ಮತ್ತೆ ಜನರಿಂದ ಜೈಕಾರ ಪಡೆದಿದ್ದಾರೆ.

English summary
JDS leader, EX MLA YSV Datta turns as teacher. he teaching classes for SSLC students in his Facebook account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X