ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕನ್ನಡ ಮಾಣಿಕ್ಯ ಪತ್ರಿಕೆ ಲಭ್ಯ
ಬೆಂಗಳೂರು, ಡಿಸೆಂಬರ್ 15: ಕನ್ನಡ ಕೌಟುಂಬಿಕ ಮಾಸ ಪತ್ರಿಕೆ ''ಕನ್ನಡ ಮಾಣಿಕ್ಯ'' ಇದೀಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ಡಾ.ವಿಷ್ಣುಸೇನಾ ಸಮಿತಿಯ ಕಟ್ಟಾಳು ವೀರಕಪುತ್ರ ಶ್ರೀನಿವಾಸ್ ಅವರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.
ಇದೊಂದು ಅತ್ಯುತ್ತಮ ಬರಹಗಳ ಗುಚ್ಚ. ಕನ್ನಡ ಮಾಣಿಕ್ಯ ಸಂಚಿಕೆಯಿಂದ ಸಂಚಿಕೆಗೆ ತನ್ನ ಸತ್ವ ಹೆಚ್ಚಿಸಿಕೊಳ್ಳುತ್ತಲೇ ಇದೆ. ಅದಕ್ಕೆ ಕಾರಣ ನಮ್ಮ ಬರಹಗಾರರು. ಕನ್ನಡ ಮಾಣಿಕ್ಯದ ಬರಹಗಾರರ ಬಳಗ ಸಶಕ್ತ ಮತ್ತು ಸತ್ವಪೂರ್ಣವಾಗಿದೆ ಎಂದರು.
ಕವಿರತ್ನ ನಾಗೇಂದ್ರ ಪ್ರಸಾದ್, ಜೋಗಿ, ಎನ್. ಎಸ್. ಶ್ರೀಧರಮೂರ್ತಿ, ಗಣೇಶ್ ಕಾಸರಗೋಡು, ನವೀನ್ ಸಾಗರ್, ಪ್ರೊ.ಜಿ.ಹೆಚ್.ಹನ್ನೆರೆಡುಮಠ, ಲಕ್ಷ್ಮಣ್ ಕೊಡಸೆ ಕೊಡಸೆ, ದೀಪಾ ಹಿರೇಗುತ್ತಿ, ಅನಂತ್ ಹುದಂಗಜೆ, ಮಳವಳ್ಳಿ ಪ್ರಸನ್ನ, ರಾಹುಲ್ ಹಜಾರೆ, ರಾಘವೇಂದ್ರ ಮೆಣಸೆ, ಗುರುರಾಜ ಕೊಡ್ಕಣಿ, ಸ್ಮಿತಾ ಅಮೃತರಾಜ್, ಸುಜಾತ ಲಕ್ಮನೆ, ವಿದ್ಯಾ ಅರಮನೆ ಮುಂತಾದ ಜನಪ್ರಿಯ ಲೇಖಕರು, ಸಾಹಿತಿಗಳ ಲೇಖನಗಳನ್ನು ಕನ್ನಡ ಮಾಣಿಕ್ಯ ಹೊಂದಿದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಅನೇಕ ಪ್ರತಿಭಾವಂತ ಬರಹಗಾರರ ಸಮ್ಮಿಲನದ ಫಲ ಈ ಕನ್ನಡ ಮಾಣಿಕ್ಯ ಮಾಸಪತ್ರಿಕೆ.
Recommended Video
ಮರೆಯದೆ ಮಿಸ್ ಮಾಡದೆ ಓದಿ ಆನಂದಿಸಿ. ನೀವು ನಿಮ್ಮ ಗೆಳೆಯರು ಗೂಗಲ್ play store ನಲ್ಲಿ ಕನ್ನಡ ಮಾಣಿಕ್ಯ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಕೇವಲ 10 ರೂಪಾಯಿಗೆ ಸಂಚಿಕೆ ಪಡೆದುಕೊಳ್ಳಿ ಎಂದರು.












Click it and Unblock the Notifications