ಟ್ರಾಫಿಕ್ ಹೆಚ್ಚಳದಿಂದ ತಗ್ಗಿದ ರಸ್ತೆ ಅಪಘಾತಗಳ ಸಂಖ್ಯೆ

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದೆ ಆದರೆ ಅದರಿಂದ ನೂರಾರು ಮಂದಿ ಪ್ರಾಣ ಉಳಿಯುತ್ತಿದೆ ಎನ್ನುತ್ತಾರೆ ಟ್ರಾಫಿಕ್ ಪೊಲೀಸರು.

ಹೌದು ಟ್ರಾಫಿಕ್ ಇರುವ ಕಾರಣ ನೀವು ನಿಧಾನವಾಗಿ ಸಂಚರಿಸುತ್ತೀರ ಅದರಿಂದ ರಸ್ತೆ ಅಪಘಾತಗಳ ಸಂಖ್ಯೆಯೂ ಕ್ಷೀಣಿಸಿದೆ. ಕಳೆದ ಐದಾರು ವರ್ಷಗಳಿಗೆ ಹೋಲಿಸಿದರೆ ರಸ್ತೆ ಅಪಘಾತ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.

2009ರಲ್ಲಿ ವರ್ಷಕ್ಕೆ 6,875 ರಸ್ತೆ ಅಪಘಾತಗಳು ಸಂಭವಿಸಿದ್ದವು, 2017ರಲ್ಲಿ 5,064 ಅಪಘಾತಗಳಾಗಿದ್ದವು, 2018ರಲ್ಲಿ ಕೇವಲ 4,172 ರಸ್ತೆ ಅಪಘಾತಗಳಾಗಿವೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ. 2009ರಲ್ಲಿ 761 ಮಂದಿ ಮೃತಪಟ್ಟಿದ್ದರೆ, 2017ರಲ್ಲಿ 642, 2018ರ ನವೆಂಬರ್ ವರೆಗೆ 611 ಮಂದಿ ಮೃತಪಟ್ಟಿದ್ದಾರೆ.

You are safe because Bengaluru traffic crawls

2009ರಲ್ಲಿ ಬೆಂಗಳೂರಲ್ಲಿ 34 ಲಕ್ಷ ವಾಹನಗಳಿದ್ದವು.2018ರಲ್ಲಿ 78 ಲಕ್ಷ ವಾಹನಗಳಾಗಿವೆ, ವಾಹನಗಳ ವೇಗವು ಕೂಡ ಕಡಿಮೆಯಾಗಿದೆ. ಅತಿ ವೇಗವೇ ಅಪಾಯಕ್ಕೆ ಕಾರಣವಾಗುತ್ತಿತ್ತು, ಆದರೆ ಸಂಚಾರ ದಟ್ಟಣೆ ಹೆಚ್ಚಳದಿಂದ ಅಪಘಾತ ಕಡಿಮೆಯಾಗಿದೆ ಎಂದು ಸಾರಿಗೆ ತಜ್ಞ ಎಂಎನ್ ಶ್ರೀಹರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+