Get Updates
Get notified of breaking news, exclusive insights, and must-see stories!

Yeshwanthpur : ಸರ್ಕಾರ ಕೆಡವಲು ಸಹಾಯ ಮಾಡಿದ್ದ ಎಸ್‌.ಟಿ.ಸೋಮಶೇಖರ್ ಸೋಲಿಸಲು ಹೆಚ್‌ಡಿಕೆ ಶಪಥ

ಸಮ್ಮಿಶ್ರ ಸರ್ಕಾರವನ್ನು ಕೆಡವುವಲ್ಲಿ ಸಹಾಯ ಮಾಡಿದ್ದ ಎಸ್‌.ಟಿ. ಸೋಮಶೇಖರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸೇಡು ತೀರಿಸಿಕೊಳ್ಳಲು ಶಫಥ ಮಾಡಿದ್ದಾರಾ ಎನ್ನುವ ಅನುಮಾನ ಮೂಡಿದೆ. ಕಾಂಗ್ರೆಸ್‌ನಲ್ಲಿದ್ದ ಎಸ್‌.ಟಿ. ಸೋಮಶೇಖರ್ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದ 17 ಶಾಸಕರಲ್ಲಿ ಒಬ್ಬರಾಗಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಸ್ಪರ್ಧೆ ಮಾಡಿರುವ ಮೈಸೂರು ಉಸ್ತುವಾರಿಯೂ ಆಗಿರುವ ಎಸ್‌.ಟಿ. ಸೋಮಶೇಖರ್ ಅವರನ್ನು ಹಣಿಯಲು ದಳಪತಿಗಳು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರ ಪರವಾಗಿ ಹೆಚ್‌ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.

 Yeshwanthpur Constituency: H.D Kumaraswamy wants to seek revenge against S.T Somashekhar

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವುವಲ್ಲಿ ಎಸ್‌ಟಿ ಸೋಮಶೇಖರ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು. 17 ಜನ ಶಾಸಕರಲ್ಲಿ ಸೋಮಶೇಖರ್ ಕೂಡ ಒಬ್ಬರಾಗಿದ್ದರು, ಬಂಡಾಯ ಶಾಸಕರ ಜೊತೆ ಮುಂಬೈಗೆ ಹಾರಿದ್ದ ಅವರು, ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ತಮ್ಮ ಪದಚ್ಯುತಿಗೆ ಕಾರಣರಾಗಿದ್ದವರಿಗೆ ಪಾಠ ಕಲಿಸಲು ಜೆಡಿಎಸ್ ನಿರ್ಧಾರ ಮಾಡಿದ್ದು ಸೋಲಿನ ರುಚಿ ತೋರಿಸಲು ಮುಂದಾಗಿದ್ದಾರೆ.

2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ್ದ ಎಸ್‌ಟಿ ಸೋಮಶೇಖರ್ ಜೆಡಿಎಸ್‌ನ ಟಿಎನ್ ಜವರಾಯಿಗೌಡ ವಿರುದ್ಧ 27,699 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲದಿರುವುದರಿಂದ ಬಿಜೆಪಿ-ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ.

ಹೆಚ್‌ಡಿ ಕುಮಾರಸ್ವಾಮಿಯವರಿಂದ ಭರ್ಜರಿ ಪ್ರಚಾರ

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಈಗಾಗಲೇ 4 ಬಾರಿ ಪ್ರಚಾರ ಮಾಡಿದ್ದಾರೆ. ಶುಕ್ರವಾರ ಕೂಡ ಕ್ಷೇತ್ರದಲ್ಲಿ ಮತ್ತೊಂದು ಸುತ್ತಿನ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಕೆಂಗೇರಿ ಸುತ್ತಮುತ್ತಲಿಲ ಭಾಗದಲ್ಲಿ ರೋಡ್‌ ಶೋ ಹಮ್ಮಿಕೊಂಡಿದ್ದು, ಜವರಾಯಿಗೌಡ ಪರವಾಗಿ ಮತಯಾಚನೆ ಮಾಡಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಜೆಡಿಎಸ್‌ ವರಿಷ್ಠ ಹೆಚ್‌.ಡಿ. ದೇವೇಗೌಡ ಕೂಡ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಬಾರಿ ರಾಜ್ಯದಲ್ಲಿ 123 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುವುದಾಗಿ ಹೇಳುತ್ತಿರುವ ಜೆಡಿಎಸ್ ಅದರ ಜೊತೆಯಲ್ಲೇ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದವರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಲ್ಲಿದೆ.

ಇನ್ನು ಮೈಸೂರು ಉಸ್ತುವಾರಿಯಾಗಿ ಕೆಲಸ ಮಾಡುವವರು ನಂತರದ ಚುನಾವಣೆಯಲ್ಲಿ ಗೆಲುವು ಕಾಣುವುದಿಲ್ಲ ಎನ್ನುವ ಸಂಪ್ರದಾಯವಿದ್ದು, ಸದ್ಯ ಮೈಸೂರು ಜಿಲ್ಲೆಯ ಉಸ್ತುವಾರಿಯಾಗಿರುವುದರಿಂದ ಸೋಲಿನ ಭಯದಲ್ಲೇ ಪ್ರಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ. ಆಡಳಿತ ವಿರೋಧಿ ಅಲೆ ಬಿಜೆಪಿಗೆ ಮುಳ್ಳಾಗುತ್ತಾ, ಜೆಡಿಎಸ್‌ನ ಪಂಚರತ್ನ ಯೋಜನೆ, ರ್‍ಯಾಲಿಗಳು ಕೈಹಿಡಿಯುತ್ತಾ ಎನ್ನುವುದು ಮೇ 13ರಂದು ತಿಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+