'ವೀರಶೈವ ಸಮಾಜ ಹೆಚ್ಚು ಹಚ್ಚಿಕೊಂಡ ಸಿಎಂ ಯಾರು'?

ಬೆಂಗಳೂರು, ಜನವರಿ 28: 'ಕರ್ನಾಟಕದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಹಲವು ಮುಖ್ಯಮಂತ್ರಿಗಳು ಆಗಿದ್ದಾರೆ. ಅದರಲ್ಲಿ ಲಿಂಗಾಯತ ಸಮಾಜ ಹೆಚ್ಚು ಹಚ್ಚಿಕೊಂಡಿರುವುದು ಯಡಿಯೂರಪ್ಪ ಅವರನ್ನೇ' ಎಂದು ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಮಂಗಳವಾರ ಬೆಂಗಳೂರಿನ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ಆಯೋಜಿಸಿದ್ದ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ಈ ವೇಳೆ ನಿಡುಮಾಮಿಡಿ ಶ್ರೀ ಮಾತನಾಡಿ ಯಡಿಯೂರಪ್ಪ ಅವರನ್ನು ಹೊಗಳಿದರು.

''ಮುಖ್ಯಮಂತ್ರಿಯಾದವರಲ್ಲಿ ಅತ್ಯಂತ ಸವಾಲು, ಸಂಕಷ್ಟಗಳು, ಸಂಕಟಗಳನ್ನು ಹೆಚ್ಚು ಅನುಭವಿಸಿದವವರಲ್ಲಿ ಎಸ್.ಎಂ.ಕೃಷ್ಣ ಹಾಗೂ ಅವರ ನಂತರ ಯಡಿಯೂರಪ್ಪನವರು. ಆದರೆ, ಆ ಎಲ್ಲಾ ಸವಾಲುಗಳನ್ನು ಎದುರಿಸಿ ಸಮರ್ಥವಾಗಿ ಆಡಳಿತ ನಡೆಸುತ್ತಿರುವವರು ಯಡಿಯೂರಪ್ಪ ಮಾತ್ರ. ಈ ಬಾರಿ ಪೂರ್ಣಾವಧಿ ಅಧಿಕಾರ ಪೂರೈಸಲು ಯಡಿಯೂರಪ್ಪನವರಿಗೆ ಅವಕಾಶ ಮಾಡಿಕೊಡಬೇಕು'' ಎಂದು ಭಿನ್ನಮತೀಯ ಚಟುವಟಿಕೆ ನಡೆಸುವವರಿಗೆ ಕಿವಿಮಾತು ಹೇಳಿದರು.

Yediyurappa Is The Most Favorable CM For Lingayaths In Karnataka

''ಕೂಟ್ಟ ಮಾತನ್ನು ತಪ್ಪದ ನಾಯಕ ಯಡಿಯೂರಪ್ಪನವರು. ಈ ಹಿಂದೆ ವಚನ ಕೊಟ್ಟು ಅದನ್ನು ಈಡೇರಿಸಿಕೊಡದ ನಾಯಕರನ್ನು ನಾವು ನೋಡಿದ್ದೇವೆ. ಆದರೆ, ಯಡಿಯೂರಪ್ಪನವರು ಮಾತು ತಪ್ಪದ ನಾಯಕ. ಅವರು ಕೊಟ್ಟ ಮಾತನ್ನು ನಡೆಸಿಕೊಡುತ್ತಾರೆ, ಇಂತಹ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಎದುರಾಗುತ್ತೆ. ಆ ಸಮಯದಲ್ಲಿ ತಾಳ್ಮೆಯಿಂದ ಎಲ್ಲರೂ ಸಹಕರಿಸಬೇಕು'' ಎಂದು ಶ್ರೀಗಳು ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+