ಯಡಿಯೂರಪ್ಪ ಕರೆ ಮಾಡಿ ಆಮಿಷ ಒಡ್ಡಿದ್ದು ನಿಜ: ಬಿಸಿ ಪಾಟೀಲ್
ಬೆಂಗಳೂರು, ಮೇ 21: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಶ್ರೀರಾಮುಲು, ಮುರಳಿಧರ ರಾವ್ ಅವರು ನನಗೆ ಕರೆಮಾಡಿ ಅಮೀಷ ಒಡ್ಡಿದ್ದು ನಿಜ ಎಂದು ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರ ಪತ್ನಿಗೆ ಬಿಜೆಪಿ ನಾಯಕರು ಕರೆ ಮಾಡಿರುವ ಸುದ್ದಿ ಸುಳ್ಳು ಎಂದಿರುವ ಬಗ್ಗೆ ಏನೂ ಹೇಳಲಾರೆ ಆದರೆ ನನಗೆ ಕರೆ ಬಂದಿದ್ದು ನಿಜ ಎಂದು ಅವರು ಹೇಳಿದ್ದಾರೆ.
ಬಿಸಿ ಪಾಟೀಲ್‌ಗೆ ಯಡಿಯೂರಪ್ಪ, ಶ್ರೀರಾಮುಲು ಹಾಗೂ ಮುರಳಿಧರ ರಾವ್ ಅವರು ಕರೆ ಮಾಡಿ ಸಚಿವ ಸ್ಥಾನ ಹಾಗೂ ಹಣದ ಆಮೀಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು, ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರು ಈ ಸಂಬಂಧ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು.

ಆದರೆ ಬಿಜೆಪಿ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಅದನ್ನು ಫೇಕ್ ಆಡಿಯೋ ಕ್ಲಿಪ್‌ಗಳು ಎಂದಿತ್ತು.












Click it and Unblock the Notifications