ಮಹಿಳೆಯರಿಂದಲೇ ವೇಶ್ಯಾವಟಿಕೆಗೆ ಯುವತಿಯ ಸಾಗಣೆ: ಬಂಧನ
ಬೆಂಗಳೂರು, ಡಿಸೆಂಬರ್ 19 : ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರೆತಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸುತ್ತಿದ್ದ ಮಹಿಳೆಯನ್ನು ಕಾಮಾಕ್ಷಿಪಾಳ್ಯದಲ್ಲಿ ಪೊಲೀಸರು ಬಂಧಿಸಿದ್ದಾರೆ
ಮಹಿಳೆಯೊಬ್ಬಳು ವಾಸಕ್ಕೆಂದು ಮನೆಯನ್ನು ಬಾಡಿಗೆ ಪಡೆದು ಹೊರರಾಜ್ಯದಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಉತ್ತರ ಪ್ರದೇಶ ಮೂಲದ ನೀಲಮ್ ಶರ್ಮ ಬಂಧಿತೆ, ಕೆಯಿಂದ ಓರ್ವ ಹುಡುಗಿಯನ್ನು ರಕ್ಷಣೆ ಮಡಲಾಗಿದೆ. ಬಂಧಿತೆಯಿಂದ 6 ಸಾವಿರ ನಗದು, 1 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತೆ ನೀಲಮ್ ಶರ್ಮ ಈಕೆಯು ಬೇರೆ ಬೇರೆ ರಾಜ್ಯದ ಅಮಾಯಕ ಹೆಣ್ಣು ಮಕ್ಕಳನ್ನು ತನ್ನ ಮನೆಗೆ ಕರೆಯಿಸಿಕೊಂಡು ಅವರುಗಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ತನಗೆ ಪರಿಚಿತರಿರುವ ಗಿರಾಕಿಗಳ ಜೊತೆ ವೇಶ್ಯಾವಾಟಿಕೆ ನಡೆಸಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದೆಂದು ಹಣದ ಆಮಿಷವೊಡ್ಡಿ, ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದು ಇದುವರೆಗಿನ ತನಿಖೆಯಿಂದ ಕಂಡುಬಂದಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಆಯುಕ್ತರಾದ ಅಲೋಕ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅವರ ಜೊತೆಗೆ ಎಸಿಪಿ ಬಿಎಸ್ ಮೋಹನ್ ಕುಮಾರ್, ಇನ್ಸಸ್ಪೆಕ್ಟರ್ ನಾರಾಯಣಗೌಡ, ಪಿಎಸ್‌ಐ ಲಕ್ಷ್ಮೀನರಸಿಂಹ ಅವರ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ.












Click it and Unblock the Notifications