ರಾಮನಗರ ಮಹಿಳೆ ಕಿಡ್ನಿಯನ್ನೇ ಕಿತ್ತುಕೊಂಡ ಸಾಲದ ಹೊರೆ
ಬೆಂಗಳೂರು, ಜುಲೈ, 10 : ಸಾಲದ ಶೂಲ ತಲೆ ಮೇಲೆ ಹತ್ತಿ ಕುಳಿತು ತೀರಸಲಾಗದಿದ್ದರೆ ನಾವೇನು ಮಾಡುತ್ತೇವೆ? ಒಂದು ಮನೆ ಮಾರುತ್ತೇವೆ, ಇಲ್ಲಾ ಅಂದ್ರೆ ಬೆಲೆಬಾಳುವ ಒಡವೆ ಇದ್ರೆ ಅದನ್ನು ಒತ್ತೆ ಇಡುತ್ತೇವೆ..ಆದರೆ ಇಲ್ಲೊಬ್ಬ ಮಹಿಳೆ 3 ಲಕ್ಷ ಸಾಲ ತೀರಿಸಲಿಕ್ಕೆ ತನ್ನ ಮೂತ್ರಪಿಂಡವನ್ನೇ ಮಾರಾಟ ಮಾಡಿದ್ದಾಳೆ! ಅದು ಮನೆ ಕಟ್ಟಲೋ ಅಥವಾ ಮಗಳ ಮದುವೆ ಮಾಡಲೋ ಮಾಡಿಕೊಂಡಿದ್ದ ಸಾಲವಲ್ಲ. ಗ್ರಾಮಪಂಚಾಯಿತಿ ಎಲೆಕ್ಷನ್ ಗೆ ಮಾಡಿಕೊಂಡಿದ್ದ ಸಾಲ.
ಸಾಲ ತೀರಿಸಲು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶಶಿಕಲಾ ತನ್ನ ಕಿಡ್ನಿಯನ್ನೇ ಮಾರಿದ್ದಾಳೆ. ಈಕೆ 3 ವರ್ಷಗಳ ಹಿಂದೆ ತಗ್ಗಿ ಕೊಪ್ಪೆ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದಳು. ಆದರೆ 2 ಮತಗಳ ಅಂತರದಲ್ಲಿ ಸೋಲುಂಡ ಆಕೆ ಚುನಾವಣೆಗೆ ಖರ್ಚು ಮಾಡಿದ್ದು ಬರೋಬ್ಬರಿ 7 ಲಕ್ಷ. ಈ ಸಾಲ ತೀರಿಸಲು ಸ್ನೇಹಿತನನ್ನೇ ಗಂಡನೆಂದು ಬಿಂಬಿಸಿ ಒಂದು ಮೂತ್ರಪಿಂಡ ಮಾರಿಕೊಂಡಿದ್ದಳು.[ಹೆತ್ತ ಮಗನಿಗೆ ಪುನರ್ಜನ್ಮ ನೀಡಿದ ಮಹಾತಾಯಿ]

ಸಾಲದ ಸುಳಿಯಲ್ಲಿ ಸಿಲುಕಿದ್ದ ಶಶಿಕಲಾ ಅವರಿಗೆ ಬೆಂಗಳೂರಿನ ಶ್ರೀನಿವಾಸ್ ಎಂಬುವವರ ಪರಿಚಯವಿತ್ತು. ಈತನ ತಾಯಿಯ ಮೂತ್ರಪಿಂಡ ವಿಫಲವಾಗಿರುವ ವಿಚಾರ ತಿಳಿದ ಈಕೆ ಸ್ವಯಂ ಪ್ರೇರಣೆಯಿಂದ ಮೂತ್ರಪಿಂಡ ಮಾರುವ ನಿರ್ಧಾರ ತೆಗೆದುಕೊಂಡಳು. ಶಶಿಕಲಾ ತನ್ನ ಪತ್ನಿ ಎಂದು ನಕಲಿ ದಾಖಲೆ ಸೃಷ್ಟಿಸಿದ ಶ್ರೀನಿವಾಸ್ ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ಮೂತ್ರಪಿಂಡವನ್ನು ತನ್ನ ತಾಯಿಗೆ ಕಸಿ ಮಾಡಿಸಿದ್ದಾರೆ.[ಹಿಂದೂ ಕಿಡ್ನಿ ಮುಸ್ಲಿಂಗೆ, ಮುಸ್ಲಿಂ ಕಿಡ್ನಿ ಹಿಂದೂಗೆ!]
ನಾಗಶೆಟ್ಟಿಹಳ್ಳಿ ಕಾಲೋನಿಯ ಮಹಿಳೆ ಮೂತ್ರಪಿಂಡ ಮಾರಾಟ ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ' ಎಂದು ರಾಮನಗರ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ












Click it and Unblock the Notifications