ಸ್ನೇಹಿತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಮಹಿಳೆ ಬಂಧನ

ಬೆಂಗಳೂರು, ಜನವರಿ 9: ಸಾಲ ನೀಡಲಿಲ್ಲ ಎನ್ನುವ ಕಾರಣಕ್ಕೆ ಸ್ನೇಹಿತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದ ಯಶ್ ಅಭಿಮಾನಿ ಸಾವು

ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಶುಭ ಗೌಡ ಗಾಯಗೊಂಡವರು, ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಆವಲಹಳ್ಳಿ ಇವಾಸಿ ಆಶಾ ಎಂಬಾಕೆಯನ್ನು ಹನುಮಂತನಗರದ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಮೂಲದ ಶುಭ ಕೌಟುಂಬಿಕ ಕಲಹದಿಂದಾಗಿ ಪತಿಯನನ್ನು ಬಿಟ್ಟು ಬೆಂಗಳೂರಿಗೆ ಬಂದು ಕೆಲಸ ಪಡೆದು ಹೇಗೋ ಜೀವನ ಸಾಗಿಸುತ್ತಿದ್ದಳು, ಆದರೆ ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಶಾ, ಶುಭಾಗೆ ಪರಿಚಯವಾಗಿದ್ದಳು.

woman arrested related to petrol pouring on friend case

ಸ್ನೇಹಿತರಾದ ಕಾರಣ ಆಶಾ ಆಗಾಗ ಶುಭ ಮನೆಗೆ ಬರುತ್ತಿದ್ದಳು. ತನಗೆ ಹಣಕಾಸಿನ ಅಗತ್ಯವಿದೆ 10 ಸಾವಿರ ರೂ ನೀಡುವಂತೆ ಕೇಳಿದ್ದಳು, ಬಳಿಕ ಇದಕ್ಕೆ ಶುಭಾ ಒಪ್ಪದ ಕಾರ ಆಕೆಯ ಮೇಲೆ ಏಕಾಏಕಿ ಪೆಟ್ರೋಲ್ ಸುರಿದು ದಾಳಿ ನಡೆಸಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿದ್ದರು.

ಮೊದಲು ಆಸಿಡ್ ದಾಳಿ ಎಂದು ಹೇಳಲಾಗಿತ್ತು ಬಳಿಕ ಪೆಟ್ರೋಲ್ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+