ಅತ್ಯಾಚಾರ ಪ್ರಕರಣ: ಬಂಧಿತ ನಾಸಿರ್‌ ಯಾರು?

ಬೆಂಗಳೂರು, ಜು.16: ನಗರದಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜ‌ನ್ಯ ಎಸಗಿದ ನಾಸಿರ್‌ ಹೈದರ್‌ನ‌ ಮತ್ತಷ್ಟು ಅಪರಾಧ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿವೆ.

ನಾಸಿರ್‌ ಹೈದರ್‌ ವಿವೇಕಾನಂದನಗರ ನಿವಾಸಿ ಬಹದ್ದೂರ್‌ ಎಂಬವರ ಪುತ್ರ. ಬೆಂಗಳೂರು ಬಿಎಸ್‌‌ಪಿ ಪಕ್ಷದ ನಾಯಕರಾಗಿರುವ ಇವರು ಈ ಹಿಂದೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.

rape

ನಾಸಿರ್‍ ಈ ಹಿಂದೆ ಆರ್‌.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಈತನ ಮೇಲೆ ಭಾರತಿನಗರ ಠಾಣೆಯಲ್ಲಿ ಕಾರು ಕಳವು ಪ್ರಕರಣ ದಾಖಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಯಾವುದೇ ಉದ್ಯೋಗ ಮಾಡದೇ ನಾಸಿರ್‌ ಹೈದರ್‌ ವಿಲಾಸಿ ಜೀವನ ಮಾಡುತ್ತಿದ್ದ. ಕೆಲಸವಿಲ್ಲದ ಈತ ವಾಣಿಜ್ಯ ಕಟ್ಟಡ ಮತ್ತು ಮನೆಗಳಿಂದ ಬರುವ ಬಾಡಿಗೆ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ.[ಬೆಂಗಳೂರು ಪೊಲೀಸರಿಗೆ ಯುವತಿ ನೀಡಿದ ದೂರಿನಲ್ಲಿ ಏನಿದೆ]

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಇಮ್ತಿಯಾಜ್‌, ಮಹಮ್ಮದ್‌ ಅಲಿ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದರೆ, ವಸೀಂ ಮತ್ತು ಅಲ್ತಾಫ್‌ ಹಳೆ ಕಾರುಗಳನ್ನು ಮಾರಾಟ ಮಾಡುವ ಡೀಲರ್‌ಗಳು ಎಂದು ಪೊಲೀಸರು ಹೇಳಿದ್ದಾರೆ. ನಾಪತ್ತೆಯಾದ ಇವರನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+