ಬೆಂಗಳೂರು; ವಿಲ್ಸನ್ ಗಾರ್ಡನ್ ಚಿತಾಗಾರ ತಾತ್ಕಾಲಿಕ ಬಂದ್
ಬೆಂಗಳೂರು, ಮೇ 20; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಮರಣ ಹೆಚ್ಚುತ್ತಲೇ ಇದೆ. ಮೇ 19ರ ವರದಿಯಂತೆ 218 ಜನರು ನಗರದಲ್ಲಿ ಮೃತಪಟ್ಟಿದ್ದಾರೆ. ಚಿತಾಗಾರಗಳ ಮುಂದೆ ಜನರು ಅಂತ್ಯ ಸಂಸ್ಕಾರಕ್ಕಾಗಿ ಕಾಯಬೇಕಿದೆ.
ವಿಲ್ಸನ್ ಗಾರ್ಡನ್‌ನಲ್ಲಿರುವ ಚಿತಾಗಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೇ 20 ರಿಂದ 27ರ ತನಕ ಸ್ಮಶಾನವನ್ನು ಬಂದ್ ಆಗಿರುತ್ತದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಬನಶಂಕರಿ ಮತ್ತು ಸುಮನಹಳ್ಳಿ ಚಿತಾಗಾರವನ್ನು ಸಹ ರಿಪೇರಿ ಕೆಲಸಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ದಕ್ಷಿಣ ಬೆಂಗಳೂರಿನ ಜನರು ಅಂತ್ಯ ಸಂಸ್ಕಾರಕ್ಕಾಗಿ ಕಾಯುವುದು ಅನಿವಾರ್ಯವಾಗಲಿದೆ.

ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರ ಆರಂಭವಾದ ಬಳಿಕ ಚಿತಗಾರಗಳ ಮೇಲೆ ಹೆಚ್ಚಿನ ಹೊರೆ ಬಿದ್ದಿದ್ದೆ. ಆದ ಕಾರಣ ರಿಪೇರಿ ಕೆಲಸಗಳಿಗಾಗಿ ಅವುಗಳನ್ನು ಮುಚ್ಚಲಾಗಿದೆ.
ಬನಶಂಕರಿ, ಮೇದಿ ಅಗ್ರಹಾರ, ಕೂಡ್ಲು, ಪಣತ್ತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ ಚಿತಾಗಾರಗಳನ್ನು ಕೋವಿಡ್ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ಬಳಕೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.
ಈ ಚಿತಾಗಾರಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿದೆ. ಅಂತ್ಯಸಂಸ್ಕಾರಕ್ಕೆ ಆಗಮಿಸುವವರು ಸಹ ಪಿಪಿಇ ಕಿಟ್ ಧರಿಸಬೇಕು ಎಂದು ಸೂಚನೆ ಕೊಡಲಾಗಿದೆ.
ಅಂತ್ಯಸಂಸ್ಕಾರಕ್ಕೆ ಭಾಗವಹಿಸುವ ಜನರಿಗೆ ಸಹ ನಿರ್ಬಂಧ ವಿಧಿಸಲಾಗಿದೆ. ಹಿಂದಿನಂತೆ 20 ಜನರು ಪಾಲ್ಗೊಳ್ಳಲು ಅವಕಾಶವಿಲ್ಲ. ಕೋವಿಡ್ 2ನೇ ಅಲೆ ಆರಂಭವಾದ ಅಂತ್ಯ ಸಂಸ್ಕಾರವನ್ನು ಉಚಿತವಾಗಿ ಮಾಡಲು ಅವಕಾಶವಿದೆ.












Click it and Unblock the Notifications