ಪತ್ನಿ ಕೊಂದು ಜೈಲಿಗೆ ಹೋಗಿದ್ದವ ಪರಾರಿಯಾಗಿ ಗೆಳತಿ ಕೊಂದ
ಬೆಂಗಳೂರು, ಫೆಬ್ರವರಿ 21: ಪತ್ನಿ ಕೊಂದು ಜೈಲಿಗೆ ಹೋಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವ ಪರಾರಿಯಾಗಿ ಗೆಳತಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪತ್ನಿಯನ್ನು ಕೊಂದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ (41) ಎಂಬಾತ ಗೆಳತಿ ರೇಣುಕಾ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧನಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ರವಿ ಚೆನ್ನಣ್ಣನವರ್ ವಿಶೇಷ ತಂಡ ರಚಿಸಿದ್ದಾರೆ. ಫೆ.16ರಂದು ವಿಕ್ಟೋರಿಯಾ ಆಸ್ಪತ್ರೆಯ ಜೈಲ್ ವಾರ್ಡ್‌ನಿಂದ ಈತ ಪರಾರಿಯಾಗಿದ್ದ, 2008ರಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ ಶಂಕರ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು.

ಫೆ. 16ರಂದು ಮಧ್ಯಾಹ್ನ ಮೆಜೆಸ್ಟಿಕ್ ಸಮೀಪದ ಸೂರ್ಯ ನೆಸ್ಟ್ ಲಾಡ್ಜ್‌ಗೆ ರೇಣುಕಾ ಜೊತೆ ಬಂದಿದ್ದ ಶಂಕರ್ ತಾವು ದಂಪತಿ ಎಂದು ಹೇಳಿಕೊಂಡು ರೂಮು ಬಾಡಿಗೆ ಪಡೆದಿದ್ದ. 2 ದಿನವಾದರೂ ರೂಮಿನಿಂದ ಹೊರಗಡೆ ಬಂದಿರಲಿಲ್ಲ. ಫೆ.18ರಂದು ರಾತ್ರಿ ರೂಮಿನಿಂದ ಕೊಳೆತ ವಾಸನೆ ಬರುತ್ತಿತ್ತು ಅದನ್ನು ಗಮನಿಸಿ ಬಾಗಿಲು ತೆಗೆದು ನೋಡಿದಾಗ ರೇಣುಕಾ ಶವ ಅಲ್ಲಿತ್ತು.












Click it and Unblock the Notifications