ಹಿಂದಿ ಮಾತಾಡಿ ಎಂದ ಯುವತಿಗೆ ತಕ್ಕ ಉತ್ತರ ನೀಡಿದ ಆಟೋ ಚಾಲಕ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಶಂಸೆ, ವಿಡಿಯೋ

ಬೆಂಗಳೂರು, ಮಾರ್ಚ್ 12: ಸಾಮಾಜಿಕ ಜಾಲತಾಣದಲ್ಲಿ ಆಟೋ ಚಾಲಕರೊಬ್ಬರ ವಿಡಿಯೋ ಭಾರಿ ವೈರಲ್ ಆಗಿದ್ದು, ಬೆಂಗಳೂರಿನಲ್ಲಿ ಮತ್ತೆ ಹಿಂದಿ - ಕನ್ನಡ ಭಾಷಾ ವಿವಾದ ಭುಗಿಲೆದ್ದಿದೆ. ಹಿಂದಿ ಮಾತಾಡಿ ಎಂದ ಯುವತಿಗೆ ಆಟೋ ಚಾಲಕರೊಬ್ಬರು ಚೆನ್ನಾಗಿ ತಿರುಗೇಟು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವೈರಲ್ ವೀಡಿಯೊದಲ್ಲಿ, ಆಟೋ ರಿಕ್ಷಾ ಚಾಲಕ ಮತ್ತು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿ ನಡುವೆ ಭಾಷೆಯ ಕುರಿತು ಮಾತಿನ ಚಕಮಕಿ ಕಂಡುಬಂದಿದೆ. ಮಹಿಳಾ ಪ್ರಯಾಣಿಕರು, "ನಾನೇಕೆ ಕನ್ನಡ ಮಾತನಾಡಬೇಕು?" ಎಂದು ಹೇಳುವುದರಿಂದ ಇಬ್ಬರ ವಾಗ್ದಾದ ಹೆಚ್ಚಾಗಿದೆ. ಈ ವೀಡಿಯೊ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಟ್ವಿಟರ್‌ನಲ್ಲಿ ಮಾತ್ರ 2 ಮಿಲಿಯನ್ ವೀಕ್ಷಣೆ ಪಡೆದಿದೆ.

Why should I speak Hindi?: Auto driver asks passenger

ವಿಡಿಯೊದಲ್ಲಿ ಚಾಲಕ ಪ್ರಯಾಣಿಕರಿಗೆ ಕನ್ನಡದಲ್ಲಿ ಮಾತನಾಡುವಂತೆ ಕೇಳಿದಾಗ ಪ್ರಯಾಣಿಕರೊಬ್ಬರು, "ಇಲ್ಲ, ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ, ಕನ್ನಡದಲ್ಲಿ ಏಕೆ ಮಾತನಾಡಬೇಕು?. ನೀವು ಹಿಂದಿ ಮಾತಾಡಿ ಎಂದಿದ್ದಾರೆ. ಬಳಿಕ ವಾಗ್ವಾದವು ಮತ್ತಷ್ಟು ಉಲ್ಬಣಗೊಂಡಿದ್ದು, ಚಾಲಕನು ತನ್ನ ಆಟೋ ರಿಕ್ಷಾದಿಂದ ಪ್ರಯಾಣಿಕರನ್ನು ಇಳಿಯುವಂತೆ ಕೇಳಿ ಅಲ್ಲಿಯೇ ಇಳಿಸಿದ್ದಾರೆ.

ಬಳಿಕ ಆಟೋ ಚಾಲಕ ಸಿಟ್ಟಿನಿಂದ, "ಇದು ಕರ್ನಾಟಕ ಮತ್ತು ನೀವು ಕನ್ನಡದಲ್ಲಿ ಮಾತನಾಡಬೇಕು. ನೀವು ಉತ್ತರ ಭಾರತದ ಭಿಕ್ಷುಕರು. ಇದು ನಮ್ಮ ಭೂಮಿಯೇ ಹೊರತು ನಿಮ್ಮ ಭೂಮಿ ಅಲ್ಲ. ನಾನೇಕೆ ಹಿಂದಿಯಲ್ಲಿ ಮಾತನಾಡಬೇಕು?" ಎಂದು ಗಲಾಟೆ ಮಾಡಿದ್ದಾರೆ. ಇಬ್ಬರು ಇಂಗ್ಲಿಷ್ ಭಾಷೆಯಲ್ಲಿ ವಾಗ್ವಾದ ನಡೆಸಿರುವುದು ವಿಶೇಷವಾಗಿದೆ.

ಈ ವಿಡಿಯೋಗೆ ಟ್ವಿಟರ್‌ನಲ್ಲಿ ಹಲವು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಆಟೋ ಚಾಲಕನ ದುರಹಂಕಾರವನ್ನು ಪ್ರಶ್ನಿಸಿದರೆ, ಕೆಲವರು ಸ್ಥಳೀಯ ಭಾಷೆಯನ್ನು ಗೌರವಿಸದ ಯುವತಿಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಮತ್ತೆ ಕೆಲವರು "ನಾನು ಈ ಆಟೋ ಚಾಲಕರನ್ನು ನಾನು ಇಷ್ಟಪಡುತ್ತೇನೆ. ಅವರೇಕೆ ಹಿಂದಿಯಲ್ಲಿ ಮಾತನಾಡಬೇಕು? ಅವರು ಲಕ್ನೋಗೆ ಬಂದು ಕನ್ನಡದಲ್ಲಿ ಮಾತನಾಡಿದರೆ ಅವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ? ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ" ಎಂದಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ "ಸಕತ್.. ಪ್ರತಿ ಕನ್ನಡಿಗನಲ್ಲಿ ಈ ಕೆಚ್ಚು ಬರಬೇಕು..ದೂರಹಂಕಾರ ತೋರುವವರಿಗೆ ಪಟ್ಟುಬಿಡದೆ ಇದೆ ರೀತಿ ಬುದ್ದಿ ಹೇಳಬೇಕು.. ನೀನು ಹಿಂದಿಯಲ್ಲಿ ಮಾತಾಡು. ನಾವು ಕನ್ನಡ ಮಾತಾಡೋಲ್ಲ ಅಂತ ಆಟೋ ಚಾಲಕನ ಮೇಲೆ ದಬ್ಬಾಳಿಕೆ ಮಾಡಲು ಹೋದ ಹಿಂದಿವಾಲಿಗೆ ಚಳಿ ಬಿಡಿಸಿದ ಕನ್ನಡಿಗ ಆಟೋ ಚಾಲಕ" ಎಂದು ಬರೆದಿದ್ದಾರೆ.

ಮತ್ತೋಬ್ಬ ಟ್ವಿಟರ್ ಬಳಕೆದಾರರು ನಾನು ಹಿಂದಿ ಸೇರಿದಂತೆ 6 ಭಾರತೀಯ ಭಾಷೆಗಳನ್ನು ಮಾತನಾಡುತ್ತೇನೆ. ನಾನು ವಾಸಿಸುವ ಅಥವಾ ಕೆಲಸ ಮಾಡುವಲ್ಲೆಲ್ಲಾ ಸ್ಥಳೀಯ ಭಾಷೆಯನ್ನು ಕಲಿಯುವುದಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರೇ, ಇನ್ನೊಬ್ಬರು "ಇಬ್ಬರೂ ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ. ಹಾಗಾದರೆ ಜಗಳವೇಕೆ..? ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುವ ಅಗತ್ಯವಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಆರಾಮದಾಯಕವಲ್ಲದಿದ್ದರೆ ಪ್ರತಿಯೊಬ್ಬರೂ ಇಂಗ್ಲಿಷ್‌ನಂತಹ ಸಾಮಾನ್ಯ ಭಾಷೆಯನ್ನು ಕಲಿಯಬೇಕು:" ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+