'ಏನ್ ಸಾರ್ ಬೇಕ್ ಬೇಕಾದಾಗ ಬಂದ್ ಮಾಡ್ತಾರೆ'
Recommended Video

ಬೆಂಗಳೂರು, ಜವನರಿ 25 : 'ವಾಟಾಳ್ ನಾಗರಾಜ್ ಯಾಕ್ ಬಂದ್ ಮಾಡ್ತಾ ಇದಾರೆ ಸಾರ್?. ಮಹದಾಯಿ ಅಂದ್ರೆ ಗೊತ್ತಿಲ್ಲ, ಕಾವೇರಿ ಹೋರಾಟ ನೋಡಿದೀನಿ'. ಇಂದು ಬೆಂಗಳೂರಿನ ಆಟೋ ಚಾಲಕ ಕೇಶವ್ ಕೇಳಿದ ಪ್ರಶ್ನೆ.
ಕೇಶವ್ ಬೆಂಗಳೂರಿನ ಕಸ್ತೂರಿ ನಗರದ ನಿವಾಸಿ. ಆರು ವರ್ಷಗಳಿಂದ ನಗರದಲ್ಲಿ ಆಟೋ ಓಡಿಸುತ್ತಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅವರು ಕಾವೇರಿ ಗಲಾಟೆಯನ್ನು ಕಣ್ಣಾರೆ ಕಂಡಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆಗೆ ಆಟೋ ಓಡಿಸಲು ಆರಭಿಸಿದ್ದಾರೆ. 'ಜೆ.ಪಿ.ನಗರದಲ್ಲಿ 7 ಗಂಟೆಗೆ ತಡೆದರು ಸಾರ್, ಮತ್ಯಾರು ತಡೆದಿಲ್ಲ. 6 ಬಾಡಿಗೆ ಆಯ್ತು, ಇವತ್ತಿನ ದುಡಿಮೆಗೆ ತೊಂದರೆ ಇಲ್ಲ. 11 ಗಂಟೆ ಮೇಲೆ ಗಲಾಟೆ ಜೋರಾದರೆ ಆಟೋ ಸೈಡಿಗೆ ಹಾಕಿ ಸುಮ್ಮನಾಗುವೆ' ಅಂದ್ರು ಕೇಶವ್.
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

'ಈ ವಾಟಾಳ್ ನಾಗರಾಜ್ ಯಾವಾಗಲೂ ಬಂದ್ ಕರೆ ಕೊಡ್ತಾರೆ. ಈಗ ಪರೀಕ್ಷೆ ಸಮಯ ಬಂದ್ ಮಾಡಿದ್ರೆ ಮಕ್ಕಳಿಗೆ ತೊಂದರೆ ಆಗಲ್ವಾ?. ಏನಕ್ಕೆ ಬಂದ್ ಮಾಡ್ತಾರೆ ಅಂತ ನನಗೆ ಗೊತ್ತಿಲ್ಲ' ಎಂದರು ಕೇಶವ್.
'ಕಾವೇರಿ ಗಲಾಟೆ ಗೊತ್ತು. ಕಾಲೇಜು ದಿನಗಳಲ್ಲಿ ಕಣ್ಣಾರೆ ಕಂಡಿದೀನಿ. ಮಹದಾಯಿ ಏನೋ ಗೊತ್ತಿಲ್ಲ. ಬಂದ್ ಮಾಡಿದ್ರೆ ಏನ್ ಉಪಯೋಗ?, ಈಗ ಕಾವೇರಿ ತಮಿಳುನಾಡಿಗೆ ಹರಿದು ಹೋಗ್ತಿಲ್ವಾ?' ಎಂದು ಪ್ರಶ್ನಿಸಿದರು.
ಕನ್ನಡ ಒಕ್ಕೂಟ ಮಹದಾಯಿ ವಿವಾದ ಬಗೆಹರಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಬೆಂಗಳೂರು ನಗರದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆಟೋ, ನಮ್ಮ ಮೆಟ್ರೋ ಸಂಚಾರ ನಡೆಸುತ್ತಿವೆ.
ಕ್ಯಾಬ್ ಚಾಲಕರ ಸಂಘವೂ ಬಂದ್‌ಗೆ ಬೆಂಬಲ ನೀಡಿಲ್ಲ. ವಿಮಾನ ನಿಲ್ದಾಣಕ್ಕೆ ತೆರಳುವ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿವೆ. ಓಲಾ, ಊಬರ್ ಟ್ಯಾಕ್ಸಿಗಳು ಸಂಚರಿಸುತ್ತಿವೆ.












Click it and Unblock the Notifications