ಬಿಬಿಎಂಪಿ ಮೇಯರ್ ಅಚ್ಚರಿಯ ಆಯ್ಕೆ: ತೆರೆಯ ಹಿಂದಿನ ಬಿಜೆಪಿಯ ಅಸಲಿಯತ್ತುಗಳೇ ಬೇರೆ

ನಾಲ್ಕು ವರ್ಷಗಳ ಹಿಂದೆ ಒಂದು ಸಣ್ಣ ಎಡವಟ್ಟಿನಿಂದ ಪ್ರತಿಷ್ಠಿತ ಬೆಂಗಳೂರು ಮೇಯರ್ ಸ್ಥಾನ ಬಿಜೆಪಿಗೆ ಕೈತಪ್ಪಿತ್ತು. ಕೊನೆಗೂ, ಆ ಸ್ಥಾನವನ್ನು ಬಿಜೆಪಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೊರ ಜಗತ್ತಿಗೆ ಇದು ಬಿಜೆಪಿಗಾದ ಜಯ. ಆದರೆ, ಪಕ್ಷದೊಳಗೆ?

ಮೇಯರ್ ಸ್ಥಾನಕ್ಕೆ ಪದ್ಮನಾಭ ರೆಡ್ಡಿ, ಎಲ್ ಶ್ರೀನಿವಾಸ್, ಮಂಜುನಾಥ ರಾಜು, ಕೆ.ಉಮೇಶ್, ಮುನೀಂದ್ರ ಕುಮಾರ್ ಅವರ ಹೆಸರು ಚಾಲ್ತಿಯಲ್ಲಿತ್ತು. ಅದರಲ್ಲಿ ಪದ್ಮನಾಭ ರೆಡ್ಡಿ ಮತ್ತು ಶ್ರೀನಿವಾಸ್ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿತ್ತು. ಆದರೆ, ಮೇಯರ್ ಆಗಿ ಆಯ್ಕೆಯಾದವರೇ ಬೇರೆ.

ಸಾಕಷ್ಟು ಗೊಂದಲಗಳ ನಡುವೆ ಬಿಬಿಎಂಪಿ ಮೇಯರ್ ಆಗಿ ಜೋಗುಪಾಳ್ಯ ವಾರ್ಡಿನ ಬಿಜೆಪಿ ಅಭ್ಯರ್ಥಿ ಎಂ. ಗೌತಂ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಇದರಿಂದ, ಪ್ರಮುಖವಾಗಿ ಈ ಹುದ್ದೆಗೆ ಏರಬೇಕು ಎನ್ನುವ ಪದ್ಮನಾಭ ರೆಡ್ಡಿಯವರ ಕನಸು ನುಚ್ಚುನೂರಾಗಿದೆ.

"ಬಿಬಿಎಂಪಿ ಚುನಾವಣೆಯಲ್ಲಿ ಮುಂದೂಡಲು ಪ್ರಯತ್ನಿಸಿದ್ದು ನಿಜ" ಎಂದು ಖುದ್ದು ಯಡಿಯೂರಪ್ಪನವರೇ ಹೇಳಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಚುನಾವಣೆಯನ್ನು ಸೋಮವಾರ ಸಂಜೆ (ಸೆ 30) ಘೋಷಿಸಿದ್ದರು. ಅಲ್ಲಿಗೆ, ಒಂದು ರೌಂಡ್, ಯಡಿಯೂರಪ್ಪನವರಿಗೆ ಹಿನ್ನಡೆಯಾಗಿತ್ತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೈತ್ರಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೈತ್ರಿ

ಕಾಂಗ್ರೆಸ್ - ಜೆಡಿಎಸ್ ನಡುವಿನ ಮೈತ್ರಿ ಸರಕಾರ ಮುರಿದು ಬಿದ್ದಿದ್ದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೈತ್ರಿ ಮುಂದುವರಿಸಲು ಎರಡೂ ಪಕ್ಷಗಳೂ ಉತ್ಸುಕರಾಗಿದ್ದವು. ಇದನ್ನರಿತ ಬಿಜೆಪಿ ಇದಕ್ಕೆ ತಂತ್ರಗಾರಿಕೆಯನ್ನು ಹಣೆದಿತ್ತು. ಮೇಯರ್ ಏನೋ ಬಿಜೆಪಿ ಪಾಲಾಯಿತು. ಆದರೆ, ಆಯ್ಕೆಯ ವಿಚಾರದಲ್ಲಿ ಬಿಎಸ್​ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ, ಇಬ್ಬರ ನಡುವೆ ಅಂತರ ಇನ್ನಷ್ಟು ಜಾಸ್ತಿಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಲೆಕ್ಕಾಚಾರ

ಬಿಜೆಪಿ ರಾಜ್ಯಾಧ್ಯಕ್ಷರ ಲೆಕ್ಕಾಚಾರ

ಮೇಯರ್ ಆಯ್ಕೆಯ ಸಂಬಂಧ, ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಆರ್.ಅಶೋಕ್ ಮತ್ತು ಎಸ್.ಆರ್.ವಿಶ್ವನಾಥ್ ನಡುವೆ ಕೈಕೈ ಮಿಲಾಯಿಸುವವರೆಗೆ ಜಗಳ ನಡೆದಿತ್ತು ಎಂದು ಹೇಳಲಾಗುತ್ತಿದೆ. ಅಶೋಕ್, ಎಲ್ ಶ್ರೀನಿವಾಸ್ ಮತ್ತು ವಿಶ್ವನಾಥ್, ಪದ್ಮನಾಭ ರೆಡ್ಡಿ ಪರವಾಗಿ ಲಾಬಿ ನಡೆಸುತ್ತಿದ್ದದ್ದು ಇದಕ್ಕೆ ಕಾರಣ. ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿದರೆ, ಪಕ್ಷದೊಳಗೆ ಮತ್ತೆ ಭಿನ್ನಮತ ಸ್ಪೋಟಿಸಬಹುದು ಎನ್ನುವುದು ಬಿಜೆಪಿ ರಾಜ್ಯಾಧ್ಯಕ್ಷರ ಲೆಕ್ಕಾಚಾರ ಎಂದೂ ಹೇಳಲಾಗುತ್ತಿದೆ.

ಹಲವು ವರ್ಷಗಳಿಂದ ಮೇಯರ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದ ಪದ್ಮನಾಭ ರೆಡ್ಡಿ

ಹಲವು ವರ್ಷಗಳಿಂದ ಮೇಯರ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದ ಪದ್ಮನಾಭ ರೆಡ್ಡಿ

ಹಲವು ವರ್ಷಗಳಿಂದ ಮೇಯರ್ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದ ಪದ್ಮನಾಭ ರೆಡ್ಡಿ ಅಥವಾ ಎಲ್.ಶ್ರೀನಿವಾಸ್ ಅವರಲ್ಲಿ ಒಬ್ಬರನ್ನು ಆಯ್ಕೆಮಾಡಲು ಸಿಎಂ ಯಡಿಯೂರಪ್ಪ ಬಯಸಿದ್ದರು. ಆದರೆ, ತನ್ನ ಆಯ್ಕೆಗೆ ರಾಜ್ಯಾಧ್ಯಕ್ಷರು ಸೊಪ್ಪು ಹಾಕದಿರುವ ವಿಚಾರ ಅರಿತ ಮುಖ್ಯಮಂತ್ರಿಗಳು, ಮೇಯರ್ ಚುನಾವಣೆಯ ದಿನ ರಾಜಧಾನಿಗೆ ಬರದೇ, ಶಿವಮೊಗ್ಗ ಜಿಲ್ಲೆಯಲ್ಲೇ ಉಳಿದುಕೊಂಡರು ಎನ್ನುವ ಮಾತಿದೆ.

ಬಿಜೆಪಿಯಲ್ಲಿ ಕೊನೆಗೆ ನಡೆಯುವುದು ಪಕ್ಷದ ಮಾತೃ ಸಂಘಟನೆ ಆರ್ ಎಸ್ ಎಸ್ ಮಾತೇ

ಬಿಜೆಪಿಯಲ್ಲಿ ಕೊನೆಗೆ ನಡೆಯುವುದು ಪಕ್ಷದ ಮಾತೃ ಸಂಘಟನೆ ಆರ್ ಎಸ್ ಎಸ್ ಮಾತೇ

ನಳಿನ್ ಕಟೀಲ್, ಬಿಜೆಪಿಯ ಎಲ್ಲಾ ಬೆಂಗಳೂರು ವ್ಯಾಪ್ತಿಯ ಹಿರಿಯ ಮುಖಂಡರು ಮತ್ತು ಸಚಿವರ ಜೊತೆ ಚರ್ಚಿಸಿದ್ದರು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಎಂಪಿ ಪಿ.ಸಿ.ಮೋಹನ್ ಹೊರತು ಪಡಿಸಿ, ಗೌತಂ ಕುಮಾರ್ ಅವರ ಹೆಸರನ್ನು ಯಾರೂ ಪ್ರಸ್ತಾವಿಸಿರಲಿಲ್ಲ. ಆದರೆ, ಬಿಜೆಪಿಯಲ್ಲಿ ಕೊನೆಗೆ ನಡೆಯುವುದು ಪಕ್ಷದ ಮಾತೃ ಸಂಘಟನೆ ಆರ್ ಎಸ್ ಎಸ್ ಮಾತೇ ಎನ್ನುವ ಹಾಗೇ, ಮೇಯರ್ ಆಯ್ಕೆಯ ಬೆಳವಣಿಗೆಗಳು ನಡೆದು ಹೋಗಿದೆ.

ಗೌತಂ ಆಯ್ಕೆಗೆ ಪ್ರಮುಖ ಕಾರಣ

ಗೌತಂ ಆಯ್ಕೆಗೆ ಪ್ರಮುಖ ಕಾರಣ

ಗೌತಂ ಆಯ್ಕೆಗೆ ಪ್ರಮುಖ ಕಾರಣ, ಮೂಲ ಬಿಜೆಪಿಗ ಮತ್ತು ಸಂಘದ ನಿಷ್ಠರಾಗಿರುವುದು. ಪದ್ಮನಾಭ ರೆಡ್ಡಿ ಹಿಂದೆ ಜೆಡಿಎಸ್ ನಲ್ಲಿದ್ದವರು, ಜೊತೆಗೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಆದೇಶಿಸಿದ್ದರೂ ಸ್ಪರ್ಧಿಸದೇ ಇದ್ದದ್ದು. ಈ ಎರಡು ಅಂಶ, ಗೌತಂ ಆಯ್ಕೆಗೆ ಕಾರಣ ಎನ್ನುವ ಮಾತು ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+